"ಕಾವೇರಿ" ತೀರ್ಪು ಕುರಿತಂತೆ "ಸುಪ್ರೀಂ" ಕಾಲೆಳೆದ ಮಾರ್ಕಂಡೇಯ ಕಾಟ್ಜು!

ಜಲಾಶಯಗಳಲ್ಲಿ ನೀರಿಲ್ಲದಿದ್ದರೂ ತಮಿಳುನಾಡಿಗೆ ನೀರು ಬಿಡುವಂತೆ ಪದೇ ಪದೇ ಆದೇಶಿಸುತ್ತಿರುವ ಸುಪ್ರೀಂ ಕೋರ್ಟ್ ವಿರುದ್ಧ ನಿವೃತ್ತ ನ್ಯಾಯಮೂರ್ತಿ ಕಿಡಿಕಾರಿದ್ದು, ಟ್ವಿಟರ್ ನಲ್ಲಿ ವ್ಯಂಗ್ಯ ಚಿತ್ರದ ಮೂಲಕ ತೀರ್ಪಿನ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು (ಟ್ವಿಟರ್ ಚಿತ್ರ)
ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು (ಟ್ವಿಟರ್ ಚಿತ್ರ)

ನವದೆಹಲಿ: ರಾಜ್ಯದ ಜಲಾಶಯಗಳಲ್ಲಿ ನೀರಿಲ್ಲದಿದ್ದರೂ ತಮಿಳುನಾಡಿಗೆ ನೀರು ಬಿಡುವಂತೆ ಪದೇ ಪದೇ ಆದೇಶಿಸುತ್ತಿರುವ ಸುಪ್ರೀಂ ಕೋರ್ಟ್ ವಿರುದ್ಧ ನಿವೃತ್ತ ನ್ಯಾಯಮೂರ್ತಿ ಕಿಡಿಕಾರಿದ್ದು,  ಟ್ವಿಟರ್ ನಲ್ಲಿ ವ್ಯಂಗ್ಯ ಚಿತ್ರದ ಮೂಲಕ ತೀರ್ಪಿನ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಜಂಟಿ ಪೀಠ ನೀಡಿದ್ದ ಆದೇಶವನ್ನು ಬಹಿರಂಗವಾಗಿಯೇ ಟೀಕಿಸಿರುವ ಕಾಟ್ಜು, ಸಾಮಾಜಿಕ  ಜಾಲತಾಣ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಗಳ ಮೂಲಕ ತೀರ್ಪಿನ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಲಾಶಯಗಳಲ್ಲಿ ನೀರಿಲ್ಲ ಎಂಬ ಕರ್ನಾಟಕದ ವಾದದ ಹೊರತಾಗಿಯೂ ನಿತ್ಯ 6  ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಆದೇಶಿಸಿರುವ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನು ರಾಜ ಕೆನ್ಯುಟ್ ಗೆ ಹೋಲಿಕೆ ಮಾಡಿರುವ ಕಾಟ್ಜು, "ರಾಜ ಕೆನ್ಯುಟ್ ನಿಂದ ಮತ್ತೊಂದು ಆದೇಶ,  ದುರಾದೃಷ್ಟವಶಾತ್ ಆದೇಶ ಪಾಲಿಸಲು ನಕಾರಾ ಎಂದು ತೀರ್ಪನ್ನು ವ್ಯಂಗ್ಯ ಮಾಡಿದ್ದಾರೆ.

ಅಂತೆಯೇ ತೀರ್ಪಿನ ಕುರಿತು ವ್ಯಂಗ್ಯ ಚಿತ್ರವೊಂದನ್ನು ಹಾಕಲಾಗಿದ್ದು, ಖಾಲಿ ಇರುವ ಕರ್ನಾಟಕದ ಬಾವಿಯಿಂದ ತಮಿಳುನಾಡಿನ ತುಂಬಿದ ಬಾವಿಗೆ ನೀರು ಹಾಕುವಂತೆ ಆದೇಶಿಸುತ್ತಿರುವ  ಸುಪ್ರೀಂ ಕೋರ್ಟ್ ಚಿತ್ರವನ್ನು ಕಾಟ್ಜು ಹಾಕಿದ್ದಾರೆ. ಆ ಮೂಲಕ ಸುಪ್ರೀಂ ಕೋರ್ಟ್ ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಹಿಂದೆಯೂ ಕೂಡ ಸುಪ್ರೀಂ ಕೋರ್ಟ್ ತೀರ್ಪನ್ನು ಬಹಿರಂಗವಾಗಿಯೇ ವಿರೋಧಿಸಿದ್ದ ಕಾಟ್ಜು, ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ನ್ಯಾಯ ಕತ್ತೆ ಎಂಬುದನ್ನು ಸಾಬೀತು ಮಾಡಿದ್ದಾರೆ  ಎಂದು ಟ್ವೀಟ್ ಮಾಡಿ ಸುದ್ದಿಗೆ ಗ್ರಾಸವಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com