ಆಂಧ್ರ ಸಚಿವ ಸಂಪುಟ ಪುನಾರಚನೆ: ಸಿಎಂ ನಾಯ್ಡು ಪುತ್ರ ಸೇರಿ 10 ಶಾಸಕರಿಗೆ ಮಂತ್ರಿಗಿರಿ

ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಏ.2 ರಂದು ಸಚಿವ ಸಂಪುಟ ಪುನಾರಚನೆ ಮಾಡಿದ್ದು, ಪುತ್ರ ನಾರಾ ಲೋಕೇಶ್ ಸೇರಿದಂತೆ 10 ಸದಸ್ಯರನ್ನು ಹೊಸದಾಗಿ ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ.
ನಾರಾ ಲೋಕೇಶ್
ನಾರಾ ಲೋಕೇಶ್
ಅಮರಾವತಿ: ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಏ.2 ರಂದು ಸಚಿವ ಸಂಪುಟ ಪುನಾರಚನೆ ಮಾಡಿದ್ದು, ಪುತ್ರ ನಾರಾ ಲೋಕೇಶ್ ಸೇರಿದಂತೆ 10 ಸದಸ್ಯರನ್ನು ಹೊಸದಾಗಿ ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. 
ಆಂದ್ರ ರಾಜ್ಯಪಾಲ ಇಎಸ್ಎಲ್ ನರಸಿಂಹನ್ ನೂತನ ಸಚಿವರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಟಿಡಿಪಿ ಪ್ರಧಾನ ಕಾರ್ಯದರ್ಶಿಯಾಗಿರುವ ನಾರಾ ಲೋಕೇಶ್ ಅವರನ್ನು ಮಾರ್ಚ್ ನಲ್ಲಿ ವಿಧಾನ ಪರಿಷತ್ ಗೆ ಆಯ್ಕೆ ಮಾಡಲಾಗಿತ್ತು. ಇದಾದ ಒಂದೇ ತಿಂಗಳಲ್ಲಿ ಸಚಿವ ಸ್ಥಾನವನ್ನೂ ನೀಡಲಾಗಿದೆ. ಸಂಪುಟ ಪುನಾರಚನೆಯಲ್ಲಿ 5 ಸಚಿವರನ್ನು ಕೈಬಿಡಲಾಗಿದ್ದು, ಸಚಿವ ಸ್ಥಾನ ಕಳೆದುಕೊಂಡಿದ್ದಕ್ಕೆ ಅಸಮಾಧಾನಗೊಂಡಿರುವ ಟಿಡಿಪಿ ಹಿರಿಯ ನಾಯಕ ಬಿ ಗೋಪಾಲ ಕೃಷ್ಣ ರೆಡ್ಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಸ್ಪೀಕರ್ ಕೊಡೆಲಾ ಶಿವಪ್ರಸಾದ್ ರಾವ್ ಅವರಿಗೆ ರವಾನೆ ಮಾಡಿದ್ದಾರೆ. 
ನೂತನ ಸಚಿವರ ಪದಗ್ರಹಣ ಕಾರ್ಯಕ್ರಮದಲ್ಲಿ ಲೋಕೇಶ್ ಅವರ ತಾಯಿ ಭುವನೇಶ್ವರಿ, ಲೋಕೇಶ್ ಅವರ ಪತ್ನಿ ಬ್ರಹ್ಮಿಣಿ, ಸೋದರ ಮಾವ, ನಟ ಎನ್ ಬಾಲಕೃಷ್ಣ  ಹಾಗೂ ಇನ್ನಿತರ ಕುಟುಂಬ ಸದಸ್ಯರು ಭಾಗವಹಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com