ಇವಿಎಂನಲ್ಲಿ ಗೋಲ್'ಮಾಲ್: ಕೇಜ್ರಿವಾಲ್ ಆರೋಪ ಆಧಾರ ರಹಿತ- ಚುನಾವಣಾ ಆಯೋಗ

ಇವಿಎಂ (ವಿದ್ಯುನ್ಮಾನ ಮತಯಂತ್ರ)ನಲ್ಲಿ ಗೋಲ್'ಮಾಲ್ ನಡೆದಿದೆ ಎಂಬ ಆಮ್ ಅದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರ ಆರೋಪ ಆಧಾರ ರಹಿತವಾದದ್ದು...
ಚುನಾವಣಾ ಆಯೋಗ
ಚುನಾವಣಾ ಆಯೋಗ
ನವದೆಹಲಿ: ಇವಿಎಂ (ವಿದ್ಯುನ್ಮಾನ ಮತಯಂತ್ರ)ನಲ್ಲಿ ಗೋಲ್'ಮಾಲ್ ನಡೆದಿದೆ ಎಂಬ ಆಮ್ ಅದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರ ಆರೋಪ ಆಧಾರ ರಹಿತವಾದದ್ದು ಎಂದು ಚುನಾವಣಾ ಆಯೋಗ ಹೇಳಿದೆ. 
ಇವಿಎಂ ಗೋಲ್ ಮಾಲ್ ಆರೋಪ ಸಂಬಂಧ ಸ್ಪಷ್ಟನೆ ನೀಡಿರುವ ಚುನಾವಣಾ ಆಯೋಗ, ಒಮ್ಮೆ ಚುನಾವಣೆಯಲ್ಲಿ ಬಳಕೆ ಮಾಡಿದ ವಿದ್ಯುನ್ಮಾನ ಮತಯಂತ್ರ(ಇವಿಎಂ)ವನ್ನು ಫಲಿತಾಂಶ ಪ್ರಕಟವಾದ ಬಳಿಕ 45 ದಿನಗಳ ಬಳಕೆ ಮಾಡುವುದಿಲ್ಲ ಎಂದು ಹೇಳಿದೆ. 
ಮತಪತ್ರ ತಾಳೆ ಪರಿಶೋದನಾ ವ್ಯವಸ್ಥೆ (ವಿವಿಪಿಎಟಿ)ನ್ನು ಚುನಾವಣಾ ಉದ್ದೇಶದಿಂದಲೇ ಬಳಕೆ ಮಾಡಲಾಗುತ್ತಿದ್ದು, ಇದನ್ನು ಯಾವುದೇ ಚುನಾವಣೆಯಲ್ಲಿ ಬೇಕಾದರೂ ಬಳಕೆ ಮಾಡಬಹುದು. ವಿವಿಪಿಎಟಿ ಚೀಟಿಯನ್ನು ನೀಡಲಿದ್ದು, ಈ ಚೀಟಿ ಯಾವ ಯಾವ ಪಕ್ಷಕ್ಕೆ ಎಷ್ಟೆಷ್ಟು ಮತಗಳು ಹೋಗಿದೆ ಎಂಬುದನ್ನು ತೋರಿಸುತ್ತದೆ ಎಂದು ತಿಳಿಸಿದೆ. 
ಇದೇ ವೇಳೆ ಆಮ್ ಆದ್ಮಿ ಪಕ್ಷದ ಹೆಸರನ್ನು ಹೇಳದೆಯೇ ಚುನಾವಣಾ ಆಯೋಗ ಅರೋಗಳು ಆಧಾರ ರಹಿತವಾದದ್ದು ಎಂದು ಕಿಡಿಕಾರಿದೆ. 
ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಅರವಿಂದ ಕೇಜ್ರಿವಾಲ್ ಅವರು, ಚುನಾವಣೆಯಲ್ಲಿ ಇವಿಎಂ ಯಂತ್ರವನ್ನೇ ತಿರುಚಲಾಗುತ್ತಿದೆ. ತಿರುಚಲಾಗಿರುವ ಯಂತ್ರಗಳು ಉತ್ತರಪ್ರದೇಶದಿಂದ ಬಂದಿದ್ದು, ಈಗ ಬಿಜೆಪಿ ಭರ್ಜರಿ ಗೆಲುವಿನ ಬಗ್ಗೆಯೇ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಮತಪತ್ರ ಬಳಕೆಗೆ ಸಮಯ ಬೇಕಿದ್ದರೆ ದೆಹಲಿ ಮಹಾನಗರ ಪಾಲಿಕೆಗಳ ಚುನಾವಣೆಯನ್ನು  ಮುಂದೂಡಿ. ಮಧ್ಯಪ್ರದೇಶದಲ್ಲಿ ಏಪ್ರಿಲ್ 9ರಂದು ನಡೆಯಲಿರುವ ಉಪ ಚುನಾವಣೆಯಲ್ಲಿ ಉತ್ತರ ಪ್ರದೇಶದ ಗೋವಿಂದ್ ನಗರದಿಂದ ಇವಿಎಂಗಳನ್ನು ಬಳಸಲಾಗುತ್ತಿದ್ದು, ಇದರ ಹಿಂದಿನ ಉದ್ದೇಶ ಏನು ಎಂಬುದು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com