ಹೈದರಾಬಾದ್: ಪೋಸ್ಟ್ ಕಾರ್ಡ್ ಮೂಲಕ ಪತ್ನಿಗೆ ತ್ರಿವಳಿ ತಲಾಕ್ ನೀಡಿದ ವ್ಯಕ್ತಿ ಬಂಧನ

ಪೋಸ್ಟ್ ಕಾರ್ಡ್ ಮೂಲಕ ಪತ್ನಿಗೆ ತ್ರಿವಳಿ ತಲಾಕ್ ನೀಡಿದ್ದ ವ್ಯಕ್ತಿಯನ್ನು ಮಂಗಳವಾರ ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ.
ದೂರು ನೀಡಿದ ಮಹಿಳೆ (Pic courtsey: ANI)
ದೂರು ನೀಡಿದ ಮಹಿಳೆ (Pic courtsey: ANI)
ಹೈದರಾಬಾದ್: ಪೋಸ್ಟ್ ಕಾರ್ಡ್ ಮೂಲಕ ಪತ್ನಿಗೆ ತ್ರಿವಳಿ ತಲಾಕ್ ನೀಡಿದ್ದ ವ್ಯಕ್ತಿಯನ್ನು ಮಂಗಳವಾರ ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ.
ವರದಿಗಳ ಪ್ರಕಾರ, ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪತ್ನಿಗೆ ತಲಾಕ್ ನೀಡಿದ 38 ವರ್ಷದ ಮೊಹಮ್ಮದ್ ಹನೀಫ್ ನನ್ನು ಕುಕತಪಲ್ಲಿಯಲ್ಲಿ ಬಂಧಿಸಲಾಗಿದೆ.
ಟೆಕ್ಸ್ ಟೈಲ್ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದ ಹನೀಫ್ ಕಳೆದ ಮಾರ್ಚ್ 9ರಂದು 26 ವರ್ಷದ ತಲಬಕಟ್ಟಾದ ಮಹಿಳೆಯೊಂದಿಗೆ ಮದುವೆಯಾಗಿದ್ದರು. ಮದುವೆಯಾದ ಮರುದಿನವೇ ಮನೆಬಿಟ್ಟು ಹೋಗಿದ್ದ ಹನೀಫ್ ಖಾಸಗಿ ಆಸ್ಪತ್ರೆಯಲ್ಲಿ ತಾನು ಚಿಕಿತ್ಸೆ ಪಡೆಯುತ್ತಿರುವುದಾಗಿ ಪತ್ನಿಗೆ ಮಾಹಿತಿ ನೀಡಿದ್ದ. ಆದರೆ ಮಾರ್ಚ್ 19ರಂದು ಪತ್ನಿಗೆ ಪತ್ರವೊಂದು ಬಂದಿದ್ದು, ಅದರಲ್ಲಿ ಮೂರು ಬಾರಿ ತಲಾಕ್ ತಲಾಕ್ ಎಂದು ಬರೆಯಲಾಗಿದೆ. ಅಲ್ಲದೆ ಇಬ್ಬರು ವ್ಯಕ್ತಿಗಳ ಸಮ್ಮುಖದಲ್ಲಿ ತಾನು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾನೆ.
ಪತ್ರ ಸ್ವೀಕರಿಸಿದ ಬಳಿಕ ಮಹಿಳೆ ತನ್ನ ತವರು ಮನೆಗೆ ಹೋಗಿ, ಈ ಬಗ್ಗೆ ಪೋಷಕರೊಂದಿಗೆ ಚರ್ಚಿಸಿ ನಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಪತಿ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹನೀಫ್ ನನ್ನು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com