ಬೀಫ್ ಸೇವನೆಯನ್ನು ಸರ್ಕಾರ ನಿಷೇಧಿಸಬೇಕು: ಅಜ್ಮೆರ್ ದರ್ಗಾ ಮುಖ್ಯಸ್ಥರ ಹೇಳಿಕೆ

ಮುಸ್ಲಿಮರು ಬೀಫ್ ಸೇವನೆಯನ್ನು ತ್ಯಜಿಸಬೇಕು ಮತ್ತು ಸರ್ಕಾರ ಕೂಡ ಬೀಫ್ ಮಾಂಸಕ್ಕೆ ನಿಷೇಧ ಹೇರಬೇಕು ಎಂದು ಅಜ್ಮೆರ್ ದರ್ಗಾ ಧಾರ್ಮಿಕ ಗುರು ಜೈನುಲ್ ಅಬೆದಿನ್ ಅಲಿ ಖಾನ್ ಅವರು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಮುಸ್ಲಿಮರು ಬೀಫ್ ಸೇವನೆಯನ್ನು ತ್ಯಜಿಸಬೇಕು ಮತ್ತು ಸರ್ಕಾರ ಕೂಡ ಬೀಫ್ ಮಾಂಸಕ್ಕೆ ನಿಷೇಧ ಹೇರಬೇಕು ಎಂದು ಅಜ್ಮೆರ್ ದರ್ಗಾ ಧಾರ್ಮಿಕ ಗುರು ಜೈನುಲ್ ಅಬೆದಿನ್ ಅಲಿ ಖಾನ್ ಅವರು ಹೇಳಿದ್ದಾರೆ.

ಅತ್ತ ಉತ್ತರ ಪ್ರದೇಶ ಮತ್ತು ರಾಜಸ್ತಾನದಲ್ಲಿ ಅಕ್ರಮ ಗೋವಧಾ ಕೇಂದ್ರ ಗಳನ್ನು ಮುಚ್ಚಿತ್ತಿರುವ ಬೆನ್ನಲ್ಲೇ ಅಜ್ಮೆರ್ ದರ್ಗಾದ ಧಾರ್ಮಿಕ ಗುರು ಜೈನುಲ್ ಅಬೆದಿನ್ ಅಲಿ ಖಾನ್  ಅವರು ಬೀಫ್ ಸೇವನೆಯನ್ನೇ ನಿಷೇಧಿಸಬೇಕು  ಎಂದು ಆಗ್ರಹಿಸಿದ್ದಾರೆ. ಹಿಂದೂ-ಮುಸ್ಲಿಂ ಸಾಮರಸ್ಯದ ಹರಿಕಾರ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅವರ 805ನೇ ಪುಣ್ಯತಿಥಿಯ ನಿಮಿತ್ತ ಸೋಮವಾರ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ನಾನು  ಮತ್ತು ನನ್ನ ಕುಟುಂಬ ಸಂಪೂರ್ಣವಾಗಿ ಬೀಫ್ ಸೇವನೆಯನ್ನು ತ್ಯಜಿಸಿದ್ದೇವೆ. ಕೇವಲ ನಾವು ಮಾತ್ರವಲ್ಲ ಇತರೆ ಮುಸ್ಲಿಮರು ಕೂಡ ಬೀಫ್ ಸೇವೆನಯನ್ನು ತ್ಯಜಿಸಬೇಕು. ಮಾತ್ರವಲ್ಲ ಸರ್ಕಾರ ಕೂಡ ಬೀಫ್ ಸೇವೆನಯನ್ನು  ಅಧಿಕೃತವಾಗಿ ನಿಷೇಧಿಸಬೇಕು ಮತ್ತು ಕೇಂದ್ರ ಸರ್ಕಾರ ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದೇ ವೇಳೆ ದೇಶಾದ್ಯಂತ ವ್ಯಾಪಕ ಚರ್ಚೆಯಾಗುತ್ತಿರುವ ತ್ರಿವಳಿ ತಲ್ಲಾಖ್ ಬಗ್ಗೆ ಮಾತನಾಡಿರುವ ಅವರು, ಅಮಾನವೀಯ ತ್ರಿವಳಿ ತಲ್ಲಾಖ್ ಗೆ ಶರಿಯಾ ಕಾನೂನಿನಲ್ಲೂ ಅವಕಾಶವಿಲ್ಲ. ಇದು ಶರಿಯಾ ಕಾನೂನಿಗೆ  ವಿರುದ್ಧದವಾದದು ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com