ಭಾರತದ ಗಡಿ ಇರುವುದು ಟಿಬೆಟ್ ನೊಂದಿಗೇ ಹೊರತು ಚೀನಾದೊಂದಿಗೆ ಅಲ್ಲ: ಅರುಣಾಚಲ ಪ್ರದೇಶ ಸಿಎಂ

ಭಾರತ ತನ್ನ ಗಡಿಯನ್ನು ಹಂಚಿಕೊಂಡಿರುವುದು ಟಿಬೆಟ್ ನೊಂದಿಗೇ ಹೊರತು ಚೀನಾದೊಂದಿಗೆ ಅಲ್ಲ ಎಂದಿದ್ದಾರೆ.
ಪೆಮಾ ಖಂಡು
ಪೆಮಾ ಖಂಡು
ಅರುಣಾಚಲ ಪ್ರದೇಶ: ಅರುಣಾಚಲ ಪ್ರದೇಶಕ್ಕೆ ಬೌದ್ಧ ಧರ್ಮಗುರು ದಲೈ ಲಾಮ ಭೇಟಿ ನೀಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿರುವ ನೆರೆ ರಾಷ್ಟ್ರ ಚೀನಾಗೆ ಅರುಣಾಚಲ ಪ್ರದೇಶ ಸಿಎಂ ಪೆಮಾ ಖಂಡು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಭಾರತ ತನ್ನ ಗಡಿಯನ್ನು ಹಂಚಿಕೊಂಡಿರುವುದು ಟಿಬೆಟ್ ನೊಂದಿಗೇ ಹೊರತು ಚೀನಾದೊಂದಿಗೆ ಅಲ್ಲ ಎಂದಿದ್ದಾರೆ. 
ಭಾರತ ಏನು ಮಾಡಬೇಕು ಏನು ಮಾಡಬಾರದು ಎಂದು ಹೇಳುವುದಕ್ಕೆ ಚೀನಾಗೆ ಯಾವುದೇ ಅಧಿಕಾರವಿಲ್ಲ. ಏಕೆಂದರೆ ಚೀನಾ ಭಾರತಕ್ಕೆ ನೇರ ನೆರೆ ರಾಷ್ಟ್ರವಲ್ಲ. ಭಾರತದ ಗಡಿಯಿರುವುದು ಟಿಬೆಟ್ ನೊಂದಿಗೇ ಹೊರತು ಚೀನಾದೊಂದಿಗೆ ಅಲ್ಲ ಎಂದು ಅರುಣಾಚಲ ಪ್ರದೇಶ ಸಿಎಂ ಪೆಮಾ ಖಂಡು ಪ್ರತಿಕ್ರಿಯೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com