ಗುಟ್ಕಾ, ಸಿಗರೇಟ್ ನಂತರ ಈಗ ಉತ್ತರ ಪ್ರದೇಶ ಶಾಲಾ ಕಾಲೇಜುಗಳಲ್ಲಿ ಜೀನ್ಸ್, ಟೀ ಶರ್ಟ್ ಬ್ಯಾನ್

ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಗುಟ್ಕಾ ಹಾಗೂ ಸಿಗರೇಟ್ ನಿಷೇಧಿಸಿದ್ದ ಯೋಗಿ ಆದಿತ್ಯನಾಥ್ ಸರ್ಕಾರ ಇದೀಗ ಉತ್ತರ ಪ್ರದೇಶದ ಶಾಲಾ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಲಖನೌ: ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಗುಟ್ಕಾ ಹಾಗೂ ಸಿಗರೇಟ್ ನಿಷೇಧಿಸಿದ್ದ ಯೋಗಿ ಆದಿತ್ಯನಾಥ್ ಸರ್ಕಾರ ಇದೀಗ ಉತ್ತರ ಪ್ರದೇಶದ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಜೀನ್ಸ್ ಪ್ಯಾಂಟ್ ಮತ್ತು ಟೀ ಶರ್ಟ್ ಗಳನ್ನು ಧರಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ. 
ಈ ಹಿಂದೆ ಶಾಲೆಗಳಲ್ಲಿ ಜೀನ್ಸ್ ಮತ್ತು ಟೀ ಶರ್ಟ್ ನಿಷೇಧಿಸಿದ್ದ ಉತ್ತರ ಪ್ರದೇಶ ಸರ್ಕಾರ ಈಗ ದಲ್ಲಿ ರಾಜ್ಯ ಒಟ್ಟು 158 ಸರ್ಕಾರಿ ಸರ್ಕಾರಿ ಕಾಲೇಜ್ ಗಳಲ್ಲಿ ಹಾಗೂ 331 ಸರ್ಕಾರದ ಅನುದಾನಿತ ಕಾಲೇಜ್ ಗಳಲ್ಲಿ ಜೀನ್ನ್, ಟೀ ಶರ್ಟ್ ಧರಿಸುವುದನ್ನು ನಿಷೇಧಿಸಲಾಗಿದೆ. ಕೇವಲ ವಿದ್ಯಾರ್ಥಿನಿಯರಿಗೆ ಅಷ್ಟೆ ಅಲ್ಲ, ಈ ಸಂಸ್ಧೆಗಳಲ್ಲಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳಿಗೂ ಈ ನಿಯಮ ಅನ್ವಯ ಆಗಲಿದೆ.
ಈ ಸಂಬಂಧ ಮಾರ್ಚ್ 30ರಂದು ಉನ್ನತ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕಿ ಉರ್ಮಿಳಾ ಸಿಂಗ್ ಅವರು ಅಧಿಸೂಚನೆ ಹೊರಡಿಸಿದ್ದು, ಎಲ್ಲಾ ಸಿಬ್ಬಂದಿಗಳು ಮತ್ತು ವಿಶ್ವವಿದ್ಯಾಲಯದ ಇತರೆ ಅಧಿಕಾರಿಗಳು ಸಾಧಾರಣ ಉಡುಪು ಧರಿಸಿ ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಬರಬೇಕು ಮತ್ತು ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸುವಂತೆ ಸೂಚಿಸಲಾಗಿದೆ. ಅಲ್ಲದೆ ಕೆಲಸದ ಸಮಯದಲ್ಲಿ ಜೀನ್ಸ್ ಮತ್ತು ಟೀ ಶರ್ಟ್ ಗಳನ್ನು ನಿಷೇಧಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಸರ್ಕಾರಿ ಕಚೇರಿಗಳಲ್ಲಿ ಸಿಗರೇಟು, ಗುಟ್ಕಾ ನಿಷೇಧವಾಗಿದ್ದವು. ಅಷ್ಟೇ ಅಲ್ಲದೆ, ಅಕ್ರಮ ಕಸಾಯಿ ಖಾನೆಗಳನ್ನು ಮುಚ್ಚಿಸಿದ್ದು, ಆ್ಯಂಟಿ ರೋಮಿಯೋ ಸ್ಕ್ವಾಡ್ ರಚಿಸಿಲಾಗಿತ್ತು. ಆದರೆ ಈಗ ಮಹಿಳೆಯರಿಗೆ ಜೀನ್ಸ್ ಪ್ಯಾಂಟ್, ಟೀ ಶರ್ಟ್ ನಿಷೇಧದ ನಿರ್ಧಾರ ವಿವಾದ ಹುಟ್ಟುಹಾಕಬಹುದು ಹಾಗೂ ವಿರೋಧ ಪಕ್ಷಗಳ ವಾಗ್ದಾಳಿಗೂ ಕಾರಣವಾಗಬಹುದು ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com