ಹರಿಯಾಣ ಮಾಜಿ ಸಿಎಂ ಭೂಪಿಂದರ್ ಹೂಡ ವಿರುದ್ಧ ಕೇಸ್ ದಾಖಲಿಸಿದ ಸಿಬಿಐ

ಭೂ ಹಗರಣಕ್ಕೆ ಸಂಬಂಧಿಸಿದಂತೆ ಹರಿಯಾಣ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಹೂಡ ವಿರುದ್ಧ ಗುರವಾರ ಸಿಬಿಐ ಕೇಸ್ ದಾಖಲಿಸಿದೆ.
ಭೂಪಿಂದರ್ ಹೂಡ
ಭೂಪಿಂದರ್ ಹೂಡ
ನವದೆಹಲಿ: ಭೂ ಹಗರಣಕ್ಕೆ ಸಂಬಂಧಿಸಿದಂತೆ ಹರಿಯಾಣ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಹೂಡ ವಿರುದ್ಧ ಗುರವಾರ ಸಿಬಿಐ ಕೇಸ್ ದಾಖಲಿಸಿದೆ.
ಭೂಪಿಂದರ್ ಹೂಡ ಅವರು ತಾವು ಮುಖ್ಯಮಂತ್ರಿಯಾಗಿದ್ದ ವೇಳೆ ಪಂಚಕುಳದಲ್ಲಿ ಅಸೋಸಿಯೇಟೆಡ್ ಜರ್ನಲ್ ಲಿಮಿಟೆಡ್(ಎಜೆಎಲ್)ಗೆ ಅಕ್ರಮವಾಗಿ ಪ್ಲಾಟ್ ಹಂಚಿಕೆ ಮಾಡಿದ್ದು, ಅಲ್ಲಿ ಯಾವುದೆ ಕಟ್ಟಡ ನಿರ್ಮಾಣವಾಗಿರಲಿಲ್ಲ. ಹೀಗಾಗಿ ಹರಿಯಾಣ ಅಭಿವೃದ್ಧಿ ಪ್ರಾಧಿಕಾರ ಆ ಪ್ಲಾಟ್ ಅನ್ನು ಹಿಂಪಡೆದಿದೆ ಎಂದು ಸಿಬಿಐ ತನ್ನ ಎಫ್ಐಆರ್ ನಲ್ಲಿ ಆರೋಪಿಸಿದೆ. ಅಲ್ಲದೆ 2005ರಲ್ಲಿ ನಿಯಮ ಉಲ್ಲಂಘಿಸಿ ಅದೇ ಪ್ಲಾಟ್ ಅನ್ನು ಮರು ಹಂಚಿಕೆ ಮಾಡಲಾಗಿದೆ ಎಂದು ದೂರಿದೆ.
ಪ್ಲ್ಯಾಟ್‌ ಅನ್ನು ಮೊದಲ ಬಾರಿಗೆ 1982ರಲ್ಲಿ ಎಜೆಎಲ್‌ಗೆ ನೀಡ ಲಾಗಿತ್ತು.ಗುತ್ತಿಗೆ ಅವಧಿ ಮುಗಿದ ನಂತರ 1995ರಲ್ಲಿ ಬನ್ಸಾಯಿ ಲಾಲ್‌ ನೇತೃತ್ವದ ಹರಿಯಾಣ ವಿಕಾಸ ಪಕ್ಷದ ಸರ್ಕಾರ ಪ್ಲ್ಯಾಟ್‌ ಅನ್ನು ವಶಕ್ಕೆ ಪಡೆದಿತ್ತು. ಆದರೆ 2005ರಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದ ನಂತರ ಎಜೆಎಲ್‌ಗೆ ಮತ್ತೆ ನೀಡಲಾಗಿತ್ತು.
ಅಸೋಸಿಯೇಟೆಡ್ ಜರ್ನಲ್ ಗಾಂಧಿ ಕುಂಟುಂಬ ಸೇರಿದಂತೆ ಇತರೆ ಕೆಲವು ಹಿರಿಯ ಕಾಂಗ್ರೆಸ್ ನಾಯಕರ ನಿಯಂತ್ರಣದಲ್ಲಿದ್ದು, ಈ ಗ್ರೂಪ್ ನ್ಯಾಷಿನಲ್ ಹೆರಾಲ್ಡ್ ಪತ್ರಿಕೆ ನಡೆಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com