ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಸಂಚಾರ ಮತ್ತೆ ಸ್ಥಗಿತ

ಭೂಕುಸಿತ ಉಂಟಾಗ ಪರಿಣಾಮ ಜಮ್ಮು ಮತ್ತು ಶ್ರೀನಗರ ನಡುವಿನ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ಸ್ಥಗಿತಗೊಂಡಿದೆ ಎಂದು ಬುಧವಾರ ವರದಿಗಳು ತಿಳಿಸಿವೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಶ್ರೀನಗರ: ಭೂಕುಸಿತ ಉಂಟಾಗ ಪರಿಣಾಮ ಜಮ್ಮು ಮತ್ತು ಶ್ರೀನಗರ ನಡುವಿನ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ಸ್ಥಗಿತಗೊಂಡಿದೆ ಎಂದು ಬುಧವಾರ ವರದಿಗಳು ತಿಳಿಸಿವೆ. 
ಭೂಕುಸಿತದ ಪರಿಣಾಮ ಸಂಚಾರದಲ್ಲಿ ತೀವ್ರ ಅಸ್ತವ್ಯಸ್ತವುಂಟಾಗಿದೆ. ಈಗಾಗಲೇ 300 ಕಿಮೀನಷ್ಟು ಹೆದ್ದಾರಿಯನ್ನು ತೆರವು ಗೊಳಿಸಲಾಗಿದೆ. ಬನಿಹಲ್ ಮತ್ತು ರಂಬನ್ ಸೇರಿದಂತೆ ಇನ್ನೂ ಕೆಲ ಪ್ರದೇಶಗಳಲ್ಲಿ ತೆರವು ಕಾರ್ಯ ನಡೆಸುತ್ತಿದ್ದು, ಪಾದಾಚಾರಿಗಳಿಗೆ ಕೊಂಚ ನಿರಾಳವುಂಟಾಗಿದೆ ಎಂದು ಸಂಚಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 
ಜಮ್ಮು ಮತ್ತು ಕಾಶ್ಮೀರ, ಶ್ರೀನಗರ ಸೇರಿದಂತೆ ಹಲವು ಭಾಗಗಳಲ್ಲಿ ಹಲವು ದಿನಗಳಿಂದಲೂ ಭಾರೀ ಮಂಜು ಬೀಳುತ್ತಿರುವ ಹಿನ್ನಲೆಯಲ್ಲಿ, ದಿನ ಕಳೆಯುತ್ತಿದ್ದಂತೆಯೇ ಇಲ್ಲಿನ ತಾಪಮಾನ ದಾಖಲೆ ಮಟ್ಟಕ್ಕೆ ಇಳಿಕೆಯಾಗುತ್ತಾ ಬರುತ್ತಿದೆ. ಇದರ ಪರಿಣಾವೇ ಇಂದು ಭೂಕುಸಿತ ಉಂಟಾಗಿ ಸಂಚಾರಕ್ಕೆ ಸಮಸ್ಯೆಗಳು ಎದುರಾಗಿದೆ ಎಂದು ವರದಿಗಳು ತಿಳಿಸಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com