ತ್ರಿವಳಿ ತಲಾಖ್ ಪ್ರಕರಣಗಳಿಗೆ ಕೇರಳ ಸರ್ಕಾರದಿಂದ ಉಚಿತ ಕಾನೂನು ನೆರವು

ತ್ರಿವಳಿ ತಲಾಖ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಹಿಳೆಯರಿಗೆ ಉಚಿತ ಕಾನೂನು ನೆರವು ನೀಡುವ ಯೋಜನೆಯನ್ನು ಕೇರಳ ಸರ್ಕಾರ ಜಾರಿಗೆ ತಂದಿದೆ.
ತ್ರಿವಳಿ ತಲಾಖ್
ತ್ರಿವಳಿ ತಲಾಖ್
ತಿರುವನಂತಪುರಂ: ತ್ರಿವಳಿ ತಲಾಖ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಹಿಳೆಯರಿಗೆ ಉಚಿತ ಕಾನೂನು ನೆರವು ನೀಡುವ ಯೋಜನೆಯನ್ನು ಕೇರಳ ಸರ್ಕಾರ ಜಾರಿಗೆ ತಂದಿದೆ. 
ರಾಜ್ಯ ಅಲ್ಪಸಂಖ್ಯಾತ ಆಯೋಗ ಈ ಕ್ರಮ ಕೈಗೊಂಡಿದ್ದು, ತ್ರಿವಳಿ ತಲಾಖ್ ಗೆ ಗುರಿಯಾಗಿರುವ ಮಹಿಳೆಯರು ಉಚಿತವಾಗಿ ಕಾನೂನು ಸಲಹೆ ಪಡೆಯಲು ಈ ಕ್ರಮ ನೆರವಾಗಲಿದೆ. ನಿವೃತ್ತ ನ್ಯಾ. ಪಿಕೆ ಹನೀಫಾ ನೇತೃತ್ವದ ಅಲ್ಪಸಂಖ್ಯಾತ ಆಯೋಗ 14 ಜಿಲ್ಲೆಗಳಲ್ಲೂ 4 ಮಹಿಳಾ ಅಡ್ವೊಕೇಟ್ ಗಳ ಸಮಿತಿಯನ್ನು ರಚಿಸಿದ್ದು, ತ್ರಿವಳಿ ತಲಾಖ್ ಸಂಬಂಧ ಉಚಿತ ಕಾನೂನು ನೆರವು ನೀಡಲಿದೆ. 
ಏ.5 ರಂದು ಅಧಿಕೃತವಾಗಿ ಈ ಯೋಜನೆ ಅಸ್ತಿತ್ವಕ್ಕೆ ಬಂದಿದ್ದು, ಪ್ರಾರಂಭವಾದ 24 ಗಂಟೆಗಳಲ್ಲೇ 21 ದೂರುಗಳು ದಾಖಲಾಗಿವೆ. ತ್ರಿವಳಿ ತಲಾಖ್ ಗೆ ಗುರಿಯಾದ ಮಹಿಳೆಯರು ಸಮಿತಿಯನ್ನು ಸಂಪರ್ಕಿಸಬಹುದಾಗಿದ್ದು, ಇದಕ್ಕಾಗಿಯೇ ಪ್ರತ್ಯೇಕ ಹೆಲ್ಪ್ ಲೈನ್ ನಂಬರ್ ನ್ನೂ ಸಹ ಪ್ರಾರಂಭಿಸಿ (0471-2315122, 2318122) ಉಚಿತವಾಗಿ ಕಾನೂನು ನೆರವು ಪಡೆದು ಕಾನೂನು ಹೋರಾಟ ನಡೆಸಬಹುದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com