ರಾಜ್ಯದಲ್ಲಿರಬೇಕೆಂದರೆ 'ವಂದೇ ಮಾತರಂ' ಹಾಡಿ: ಉತ್ತರಾಖಂಡ ಉನ್ನತ ಶಿಕ್ಷಣ ಸಚಿವ

ರಾಜ್ಯದಲ್ಲಿರಬೇಕೆಂದರೆ 'ವಂದೇ ಮಾತರಂ' ಹಾಡಬೇಕೆಂದು ವಿದ್ಯಾರ್ಥಿಗಳಿಗೆ ಉತ್ತರಾಖಂಡ ಉನ್ನತ ಶಿಕ್ಷಣ ಸಚಿವ ಧನ್ ಸಿಂಗ್ ರಾವತ್ ಅವರು ಗುರುವಾರ ಹೇಳಿದ್ದಾರೆ...
ಉತ್ತರಾಖಂಡ ಉನ್ನತ ಶಿಕ್ಷಣ ಸಚಿವ ಧನ್ ಸಿಂಗ್ ರಾವತ್
ಉತ್ತರಾಖಂಡ ಉನ್ನತ ಶಿಕ್ಷಣ ಸಚಿವ ಧನ್ ಸಿಂಗ್ ರಾವತ್
ಡೆಹ್ರಾಡೂನ್: ರಾಜ್ಯದಲ್ಲಿರಬೇಕೆಂದರೆ 'ವಂದೇ ಮಾತರಂ' ಹಾಡಬೇಕೆಂದು ವಿದ್ಯಾರ್ಥಿಗಳಿಗೆ ಉತ್ತರಾಖಂಡ ಉನ್ನತ ಶಿಕ್ಷಣ ಸಚಿವ ಧನ್ ಸಿಂಗ್ ರಾವತ್ ಅವರು ಗುರುವಾರ ಹೇಳಿದ್ದಾರೆ. 
ರೂರ್ಕೀಯಲ್ಲಿರುವ ಕಾಲೇಜಿನಲ್ಲಿ ನಿನ್ನೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ರಾಜ್ಯದಲ್ಲಿರಬೇಕೆಂದರೆ, ಜನತೆ ವಂದೇ ಮಾತರಂ ಗೀತೆಯನ್ನು ಹಾಡಬೇಕು. ರಾಷ್ಟ್ರಗೀತೆ ಹಾಡಲು ಸಮಯವನ್ನು ನಿಗದಿ ಮಾಡಲು ಚಿಂತನೆ ನಡೆಸಿದ್ದು, ರಾಷ್ಟ್ರಗೀತೆಯನ್ನು ಬೆಳಿಗ್ಗೆ 10 ಗಂಟೆಗೆ ಹಾಗೂ ರಾಷ್ಟ್ರೀಯ ಹಾಡನ್ನು ಸಂಜೆ 4 ಗಂಟೆ ಸಮಯಕ್ಕೆ ಹಾಡಬೇಕೆಂದು ಹೇಳಿದ್ದಾರೆ. 
ಪದವಿ ಹಾಗೂ ಸ್ನಾತಕೋತ್ತರ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶೀಘ್ರದಲ್ಲಿಯೇ ವಸ್ತ್ರ ನೀತಿಯನ್ನು ಜಾರಿಗೆ ತರಲು ಚಿಂತನೆ ನಡೆಸಲಾಗಿದ್ದು. ಮುಂದಿನ ಜುಲೈ ತಿಂಗಳಿನಲ್ಲಿ ಎಲ್ಲಾ ನಿರ್ಣಯಗಳನ್ನು ಜಾರಿಗೆ ತರಲಾಗುತ್ತದೆ ಎಂದು ತಿಳಿಸಿದ್ದಾರೆ. 
ಈ ಹೇಳಿಕೆ ಚರ್ಚೆಗೆ ಗ್ರಾಸವಾದ ಹಿನ್ನಲೆಯಲ್ಲಿ ಸ್ಪಷ್ಟನೆ ನೀಡಿದ ರಾವತ್ ಅವರು, ನನ್ನ ಹೇಳಿಕೆಯನ್ನು ಸರಿಯಾದ ರೀತಿಯಲ್ಲಿ ನೋಡಬೇಕಿದೆ. ಉತ್ತರಾಖಂಡ ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಈ ನಿರ್ಧಾರಗಳು ಧನಾತ್ಮಕ ಪರಿಣಾಮ ಬೀರಲಿದ್ದು, ನನ್ನ ಹೇಳಿಕೆಯನ್ನು ಸಂಪೂರ್ಣವಾಗಿ ಕೇಳಬೇಕಿದೆ. ಕಾಲೇಜು ಆವರಣದಲ್ಲಿ ಮಾದಕ ವಸ್ತುಗಳ ಬಳಕೆಗೆ ಕಡಿವಾಣ ಹಾಕುವ ಕುರಿತಂತೆಯೂ ನಾನು ಮಾತನಾಡಿದ್ದೆ. ಇದು ಕಾಲೇಜಿಗೆ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ವಿದ್ಯಾರ್ಥಿಗಳಲ್ಲಿ ಶಿಸ್ತು ತರುವುದು ನಮ್ಮ ಗುರಿಯಾಗಿದ್ದು, ನನ್ನ ಹೇಳಿಕೆಯನ್ನು ಕೆಲವರು ತಪ್ಪಾಗಿ ಆರ್ಥೈಸಿಕೊಳ್ಳುತ್ತಿದ್ದಾರೆಂದು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com