ಮುಸ್ಲಿಮರು ಹಿಂದೂಗಳಿಂದ ಕಲಿತು, ತ್ರಿವಳಿ ತಲಾಖ್'ನ್ನು ರದ್ದುಗೊಳಿಸಲಿ: ವೆಂಕಯ್ಯ ನಾಯ್ಡು

ಹಿಂದೂ ಸಮಾಜದಿಂದ ಮುಸ್ಲಿಮರು ಕಲಿಯಬೇಕಿದ್ದು, ತ್ರಿವಳಿ ತಲಾಖ್ ಎಂಬ ವ್ಯವಸ್ಥೆಯನ್ನು ತೊಡೆದುಹಾಕಬೇಕಿದೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಭಾನುವಾರ ಹೇಳಿದ್ದಾರೆ...
ಕೇಂದ್ರ ಸಚಿವ ವೆಂಕಯ್ಯ ನಾಯ್ಡು
ಕೇಂದ್ರ ಸಚಿವ ವೆಂಕಯ್ಯ ನಾಯ್ಡು
Updated on: 
ಅಹಮದಾಬದ್: ಹಿಂದೂ ಸಮಾಜದಿಂದ ಮುಸ್ಲಿಮರು ಕಲಿಯಬೇಕಿದ್ದು, ತ್ರಿವಳಿ ತಲಾಖ್ ಎಂಬ ವ್ಯವಸ್ಥೆಯನ್ನು ತೊಡೆದುಹಾಕಬೇಕಿದೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಭಾನುವಾರ ಹೇಳಿದ್ದಾರೆ. 
ತ್ರಿವಳಿ ತಲಾಖ್ ವಿವಾದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಹಿಂದೂ ಸಮಾಜದವರು ಬಾಲ್ಯ ವಿವಾಹ, ವರದಕ್ಷಿಣೆ ಹಾಗೂ ಸತಿ ಸಹಗಮನ ಪದ್ಧತಿಗಳನ್ನು ತೊಡೆದು ಹಾಕಿದ್ದರು. ಇದರಿಂದ ಮುಸ್ಲಿಮರು ಹಿಂದೂಗಳಿಂದ ಪಾಠ ಕಲಿಯಬೇಕಿದ್ದು, ತ್ರಿವಳಿ ತಲಾಖ್ ಪದ್ಧತಿಯನ್ನು ತೊಲಗಿಸಬೇಕಿದೆ ಎಂದು ಹೇಳಿದ್ದಾರೆ. 
ಮುಸ್ಲಿಂ ಸಮಾಜದವರು ಮೊದಲು ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ತ್ರಿವಳಿ ತಲಾಖ್ ಕುರಿತಂತೆ ಆರೋಗ್ಯಕರ ಚರ್ಚೆ ನಡೆಸಿ ಮಹಿಳೆಯರಿಗೆ ನ್ಯಾಯಯುತ ಆದೇಶವನ್ನು ಹೊರಡಿಸಬೇಕಿದೆ. ತ್ರಿವಳಿ ತಲಾಖ್'ನ್ನು ಸಾಕಷ್ಟು ಜನರು ವಿರೋಧಿಸುತ್ತಿದ್ದಾರೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಕೆಲವರು ಮಾತ್ರ ಮುಸ್ಲಿಂ ಮಹಿಳೆಯರಿಗೆ ಅನ್ಯಾಯವನ್ನು ಮಾಡುತ್ತಿದ್ದಾರೆ. ಮುಸ್ಲಿಂ ಸಮಾಜದ ಬದಲಾವಣೆಗೆ ಇದು ಸಕಾಲವಾಗಿದೆ. 
ಹಿಂದೂ ಸಮಾಜ ಕೂಡ ಸಾಕಷ್ಟು ಬದಲಾವಣೆಗಳನ್ನು ತಂದುಕೊಂಡಿತ್ತು. ಬಾಲ್ಯ ವಿವಾಹ, ವರದಕ್ಷಿಣೆ, ಸತಿ ಸಹಗಮನದಂತಹ ಪದ್ಧತಿಗಳನ್ನು ತೊಡಗಿಸಿತ್ತು. ತ್ರಿವಳಿ ತಲಾಖ್ ಕುರಿತಂತೆಯ ಮುಸ್ಲಿಂ ಸಮಾಜದವರೂ ಆರೋಗ್ಯಕರ ಚರ್ಚೆಯನ್ನು ನಡೆಸಬೇಕಿದೆ. ಸಮಸ್ಯೆಗೆ ಸೂಕ್ತ ರೀತಿಯ ಪರಿಹಾರವನ್ನು ಕಂಡುಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com