ಈಜಿಪ್ಟ್ ಚರ್ಚ್ ಮೇಲಿನ ದಾಳಿಯಿಂದಾಗಿ ತೀವ್ರ ನೋವಾಗಿದೆ: ಪ್ರಧಾನಿ ಮೋದಿ

ಈಜಿಪ್ಟ್ ರಾಷ್ಟ್ರದ ಚರ್ಚ್ ಮೇಲಿನ ಬಾಂಬ್ ದಾಳಿಯಿಂದಾಗಿ ತೀವ್ರ ನೋವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಹೇಳಿದ್ದಾರೆ...
ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ
ನವದೆಹಲಿ: ಈಜಿಪ್ಟ್ ರಾಷ್ಟ್ರದ ಚರ್ಚ್ ಮೇಲಿನ ಬಾಂಬ್ ದಾಳಿಯಿಂದಾಗಿ ತೀವ್ರ ನೋವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಹೇಳಿದ್ದಾರೆ. 
ಈಜಿಪ್ಟ್ ಚರ್ಚ್ ದಾಳಿ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಈಜಿಪ್ಟ್ ಚರ್ಚ್ ಮೇಲಿನ ದಾಳಿ ತೀವ್ರ ನೋವನ್ನು ತಂದಿದ್ದು, ದಾಳಿಯಲ್ಲಿ ಮೃತಪಟ್ಟವರಿಗಾಗಿ ಸಂತಾಪವನ್ನು ಸೂಚಿಸುತ್ತೇನೆಂದು ಹೇಳಿದ್ದಾರೆ. ಅಲ್ಲದೆ, ವಿಶ್ವ ನಾಯಕರು ಇಂತಹ ವಿಕೃತ ದಾಳಿಗಳನ್ನು ಖಂಡಿಸಬೇಕೆಂದು ಆಗ್ರಹಿಸಿದ್ದಾರೆ. 
ಈಜಿಪ್ಟ್ ನ 2 ಚರ್ಚೆಗಳಲ್ಲಿ ನಿನ್ನೆಯಷ್ಟೇ ಇಸ್ಲಾಮಿಕ್ ಸ್ಟೇಟ್  (ಇಸಿಸ್) ಉಗ್ರರು ಪ್ರಬಲ ಬಾಂಬ್ ಸ್ಫೋಟಿಸಿದ್ದರು. ಪರಿಣಾಮ 45ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ, 120ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ತಂತಾ ಮತ್ತು ಅಲೆಕ್ಸಾಂ ಡ್ರಿಯಾಗಳಲ್ಲಿನ ಚರ್ಚ್ ಗಳಲ್ಲಿ ಬಾಂಬ್ ದಾಳಿ ನಡೆಸಲಾಗಿತ್ತು. 
ತಂತಾದಲ್ಲಿನ ಮಾರ್ ಚಾರ್ಜಸ್ ಕಾಪ್ಟಿಕ್ ಚರ್ಚ್ ನಲ್ಲಿ ಪ್ರತಿ ಭಾನುವಾರ ಸೇರುವಂತೆ ಹಲವು ಕ್ರಿಶ್ಚಿಯನ್ನರು ಪ್ರಾರ್ಥನೆಗಾಗಿ ಸೇರಿದ್ದರು. ಈ ವೇಳೆ ಉಗ್ರನೊಬ್ಬ ಯಾರಿಗೂ ತಿಳಿಯದಂತೆ ಇಟ್ಟು ಹೋದ ಬಾಂಬ್ ಸ್ಫೋಟಗೊಂಡು, 27 ಮಂದಿ ಬಲಿಯಾಗಿದ್ದಲು. ಬಳಿಕ ಅಲೆಕ್ಸಾಂಡ್ರಿಯಾದ ಸೇಂಟ್ ಮಾರ್ಕ್ಸ್ ಚರ್ಚ್ ನಲ್ಲೂ ಅತ್ಮಾಹುತಿ ಉಗ್ರ ಸ್ಫೋಟಿಸಿಕೊಂಡಾಗ 18 ಮಂದಿ ಸಾವನ್ನಪ್ಪಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com