ಅಸ್ಸಾಂ: ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೆ ಸರ್ಕಾರಿ ಕೆಲಸ ಇಲ್ಲ!

ಸರ್ಕಾರಿ ಉದ್ಯೋಗಾಂಕ್ಷಿಗಳಿಗೆ ಇಲ್ಲೊಂದು ಕಹಿ ಸುದ್ದಿ ಇದ್ದು, ಎರಡಕ್ಕಿಂತ ಹೆಚ್ಚು ಮಕ್ಕಳಿರುವ ಅಭ್ಯರ್ಥಿಗಳನ್ನು ಸರ್ಕಾರಿ ಕೆಲಸಕ್ಕೆ ಸಲ್ಲಿಸಲು ಅನರ್ಹರು ಎಂದು ಅಸ್ಸಾಂ ಸರ್ಕಾರ ಭಾನುವಾರ ಘೋಷಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಭುವನೇಶ್ವರ: ಸರ್ಕಾರಿ ಉದ್ಯೋಗಾಂಕ್ಷಿಗಳಿಗೆ ಇಲ್ಲೊಂದು ಕಹಿ ಸುದ್ದಿ ಇದ್ದು, ಎರಡಕ್ಕಿಂತ ಹೆಚ್ಚು ಮಕ್ಕಳಿರುವ ಅಭ್ಯರ್ಥಿಗಳನ್ನು ಸರ್ಕಾರಿ ಕೆಲಸಕ್ಕೆ ಸಲ್ಲಿಸಲು ಅನರ್ಹರು ಎಂದು ಅಸ್ಸಾಂ ಸರ್ಕಾರ ಭಾನುವಾರ ಘೋಷಿಸಿದೆ.

ಹೌದು...ಜನಸಂಖ್ಯಾ ನಿಯಂತ್ರಣ ಹಾಗೂ ಬಡತನ ರೇಖೆಗಿಂತ ಕೆಳಗಿರುವವರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಅಸ್ಸಾಂ ಸರ್ಕಾರ ಇಂತಹದೊಂದು ಕಠಿಣ ನಿರ್ಧಾರ ಕೈಗೊಂಡಿದ್ದು, ಎರಡಕ್ಕಿಂತ ಹೆಚ್ಚು  ಮಕ್ಕಳಿರುವ ಅಭ್ಯರ್ಥಿಗಳು ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಲು ಅನರ್ಹರು ಎಂದು ಘೋಷಣೆ ಮಾಡಿದೆ. "ಸರ್ಕಾರ ನಿಗದಿ ಪಡಿಸಿರುವ ವಯೋಮಿತಿಯಲ್ಲೇ ಅರ್ಜಿ ಸಲ್ಲಿಸಿದ್ದರೂ ಕೂಡ ಮದುವೆಯಾಗಿ, 2ಕ್ಕಿಂತ ಹೆಚ್ಚು ಮಕ್ಕಳಿದ್ದರೆ  ಅಂತಹ ಅಭ್ಯರ್ಥಿಗಳ ಅರ್ಜಿಗಳನ್ನು ಅನರ್ಹ ಪಟ್ಟಿಗೆ ಸೇರಿಸಲಾಗುತ್ತದೆ ಎಂದು ಅಸ್ಸಾಂ ಸರ್ಕಾರ ಹೇಳಿದೆ.

ಇದಕ್ಕಾಗಿ ಹೊಸ ಜನಸಂಖ್ಯಾ ನೀತಿಯ ಅಡಿಯಲ್ಲಿ ಉದ್ಯೋಗಳು ಎಂಬ ಕರಡು ಪ್ರತಿಯನ್ನು ಅಸ್ಸಾಂ ಸರ್ಕಾರ ಅಂಗೀಕರಿಸಿದ್ದು, ಬಡತನ ರೇಖೆಗಿಂತ ಕೆಳಗಿರುವವರನ್ನು ಅಭಿವೃದ್ಧಿಗೊಳಿಸುವುದು ಮತ್ತು ಸಶಕ್ತರನ್ನಾಗಿಸುವುದು  ಅಸ್ಸಾಂ ಸರ್ಕಾರದ ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಅಂತೆಯೇ ಷರತ್ತಿನ ಅನ್ವಯ ಉದ್ಯೋಗ ಪಡೆದುಕೊಂಡವರು ತಮ್ಮ ಸೇವಾವಧಿ ಪೂರ್ಣಗೊಳ್ಳುವವರೆಗೂ ಇದನ್ನು ಪಾಲಿಸಬೇಕು. ಅಲ್ಲದೇ, ಟ್ರ್ಯಾಕ್ಟರ್‌  ನೀಡಿಕೆ, ಗೃಹ ಹಂಚಿಕೆ ಮುಂತಾದ ಸರ್ಕಾರಿ ಯೋಜನೆಗಳಿಗೂ ಯೋಜನೆ ಅನ್ವಯವಾಗಲಿದೆ. ಪಂಚಾಯತ್‌, ಮುನಿಸಿಪಾಲಿಟಿ ಚುನಾವಣೆ ಸೇರಿದಂತೆ ರಾಜ್ಯ ಚುನಾವಣಾ ಆಯೋಗದ ಅಡಿಯಲ್ಲಿ ನಡೆಯುವ ಚುನಾವಣಾ  ಅಭ್ಯರ್ಥಿಗಳೂ ಈ ನೀತಿಯನ್ನು ಪಾಲಿಸಬೇಕು ಎಂದು ಕರಡಿನಲ್ಲಿ ಹೇಳಲಾಗಿದೆ ಎಂದು ಸಚಿವರು ತಿಳಿಸಿದರು.

ಭಾರತದಲ್ಲಿ ಎರಡು ಮಕ್ಕಳು ಸಾಕು ಎಂಬ ನೀತಿ ಇದೆಯಾದರೂ ಈ ನಿಯಮವನ್ನು ಕೆಲವೇ ಮಂದಿ ಪಾಲಿಸುತ್ತಿದ್ದಾರೆ. ಮದುವೆ ವಯೋಮಿತಿ ಗಂಡಿಗೆ 21 ಹೆಣ್ಣಿಗೆ 18 ವರ್ಷಗಳಾಗಿದ್ದು, ಅದಕ್ಕಿಂತ ಕಡಿಮೆ ವಯಸ್ಸಿನಲ್ಲಿ ಮದುವೆ  ಮಾಡಿದರೆ ಶಿಕ್ಷೆಯಾಗುತ್ತದೆ. ಹೀಗಾಗಿ ಈ ಕರಡು ನೀತಿಯನ್ನು ಜಾರಿಗೆ ತರಲಾಗುತ್ತಿದೆ ಎಂದು ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

2011ರ ಜನಗಣತಿಯಂತೆ ಅಸ್ಸಾಂನ ಜನಸಂಖ್ಯೆ 31 ಮಿಲಿಯನ್ ಗೆ ಏರಿಕೆಯಾಗಿದ್ದು, ಮುಸ್ಲಿಂ ಸಮುದಾಯದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ ಜನಸಂಖ್ಯೆ ಏರಿಕೆಯಾಗಿದೆ. 2011ರಲ್ಲಿ ಮುಸ್ಲಿಂ ಸಮುದಾಯದ ಜನಸಂಖ್ಯೆ 34.2ಕ್ಕೆ  ಏರಿಕೆಯಾಗಿದ್ದು, 2001ರ ಜನಗಣತಿಯಲ್ಲಿ ಈ ಪ್ರಮಾಣ 3.09ರಷ್ಟಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com