ಭಾನುವಾರಗಳಂದು ಪೆಟ್ರೊಲ್ ಬಂಕ್ ಗೆ ರಜೆ: 8 ಗಂಟೆ ಮಾತ್ರ ಕೆಲಸ?

ಸರ್ಕಾರ ಪೆಟ್ರೋಲ್‌, ಡಿಸೇಲ್ ಮಾರಾಟದ ಮೇಲಿನ ಕಮಿಷನ್ ಹೆಚ್ಚಿಸದೆ ಇದ್ದಲ್ಲಿ ಮೇ 10 ರ ನಂತರ ಪ್ರತಿ ಭಾನುವಾರ ರಜೆ ಪಡೆಯುತ್ತೇವೆ. ದಿನಕ್ಕೆ 8 ಗಂಟೆ ಮಾತ್ರ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ:  ಸರ್ಕಾರ ಪೆಟ್ರೋಲ್‌, ಡಿಸೇಲ್ ಮಾರಾಟದ ಮೇಲಿನ ಕಮಿಷನ್ ಹೆಚ್ಚಿಸದೆ ಇದ್ದಲ್ಲಿ ಮೇ 10 ರ ನಂತರ ಪ್ರತಿ ಭಾನುವಾರ ರಜೆ ಪಡೆಯುತ್ತೇವೆ.  ದಿನಕ್ಕೆ 8 ಗಂಟೆ ಮಾತ್ರ ಕೆಲಸ ಮಾಡುವುದಾಗಿ ಪೆಟ್ರೋಲ್ ಬಂದ್ ಮಾಲೀಕರ ಸಂಘ ಎಚ್ಚರಿಕೆ ನೀಡಿದೆ.
ಮೇ 10 ರ ನಂತರ ದೇಶಾದ್ಯಂತ ಎಲ್ಲಾ ಪೆಟ್ರೋಲ್ ಬಂಕ್ ಗಳಲ್ಲೂ ಕೇವಲ 8 ಗಂಟೆ ಮಾತ್ರ ಕೆಲಸ ಮಾಡುವುದಾಗಿ ತಿಳಿಸಿದೆ.
ಮೇ 10 ನೇ ತಾರೀಖನ್ನು  'ನೋ ಪರ್ಚೇಸ್ ಡೇ' ಎಂದು ಆಚರಿಸುವುದಾಗಿ ಭಾರತೀಯ ಪೆಟ್ರೋಲಿಯಂ ವಿತರಕರ ಒಕ್ಕೂಟ(CPID) ಸಭೆಯಲ್ಲಿ ನಿರ್ಧರಿಸಿದೆ. 
ತೈಲ ಮಾರುಕಟ್ಟೆ ಕಂಪನಿಗಳು ಡೀಲರ್ ಕಮಿಷನ್ ಹೆಚ್ಚಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಜನವರಿ ತಿಂಗಳಲ್ಲಿ ಕೈಗೊಂಡಿದ್ದ ಮುಷ್ಕರ ಕೈ ಬಿಡಲಾಯಿತು, ಆದರೆ ಅಂದಿನಿಂದ ಇಲ್ಲಿಯವರೆಗೆ 4 ತಿಂಗಳು ಕಳೆಯುತ್ತಾ ಬಂದರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಪೆಟ್ರೋಲ್ ಡೀಲರ್ಸ್ ಅಸೋಸಿಯೇಶನ್ ಆರೋಪಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com