ಅಖಿಲೇಶ್ ದಾಸ್ ಗುಪ್ತಾ
ಅಖಿಲೇಶ್ ದಾಸ್ ಗುಪ್ತಾ

ಕಾಂಗ್ರೆಸ್ ಮುಖಂಡ ಅಖಿಲೇಶ್ ದಾಸ್ ಗುಪ್ತ ವಿಧಿವಶ, ಪ್ರಧಾನಿ ಮೋದಿ ಸಂತಾಪ

ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಅಖಿಲೇಶ್ ದಾಸ್ ಗುಪ್ತಾ ಅವರು ವಿಧಿವಶರಾಗಿದ್ದಾರೆ...
Published on
ಲಖನೌ: ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಅಖಿಲೇಶ್ ದಾಸ್ ಗುಪ್ತಾ ಅವರು ವಿಧಿವಶರಾಗಿದ್ದಾರೆ. 
ತೀವ್ರ ಹೃದಯಾಘಾತಕ್ಕೀಡಾಗಿದ್ದ ಅಖಿಲೇಶ್ ಅವರನ್ನು ಕೂಡಲೇ ಲರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ವಿಧಿವಶರಾಗಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. 
ಅಖಿಲೇಶ್ ದಾಸ್ ಗುಪ್ತಾ ಅವರು ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ ಬನರ್ಸಿ ದಾಸ್ ಗುಪ್ತಾ ಅವರ ಮಗನಾಗಿದ್ದು ಪತ್ನಿ, ಪುತ್ರಿ ಮತ್ತು ಪುತ್ರನನ್ನು ಅಗಲಿದ್ದಾರೆ. 
ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ(ಬಿಎಐ)ನ ಅಧ್ಯಕ್ಷರಾಗಿದ್ದ ವಿಕೆ ವರ್ಮಾ ಅವರನ್ನು ಭ್ರಷ್ಟಾಚಾರದ ಆರೋಪದ ಮೇಲೆ 2010ರಲ್ಲಿ ಬಂಧನವಾದ ನಂತರ ಅಖಿಲೇಶ್ ದಾಸ್ ಗುಪ್ತಾ ಅವರು 2012ರಲ್ಲಿ ಬಿಎಐನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. 
ಅಖಿಲೇಶ್ ದಾಸ್ ಗುಪ್ತ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ
ಮಾಜಿ ಕೇಂದ್ರ ಸಚಿವ ಅಖಿಲೇಶ್ ದಾಸ್ ಗುಪ್ತಾ ಅವರು ತೀವ್ರ ಹೃದಯಾಘಾತದಿಂದಾಗಿ ನಿಧನರಾಗಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಅವರು, ಅಖಿಲೇಶ್ ದಾಸ್ ಗುಪ್ತಾ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುವೆ. ಅವರ ಸಾವಿನ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಕುಟಂಬಕ್ಕೆ ನೀಡಲಿದೆ ಎಂದು ದೇವರಲ್ಲಿ ಪ್ರಾರ್ಥಿಸುವಂತೆ ಬರೆದಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com