ಮುಖ್ಯ ನ್ಯಾಯಾಧೀಶರು ಮತ್ತು ಆರು ಜಡ್ಜ್ ಗಳು ನನ್ನ ಮನೆಯಲ್ಲಿ ಹಾಜರಾಗಬೇಕು: ಸಿ.ಎಸ್ ಕರ್ಣನ್

ತಮಗೆ ನ್ಯಾಯಾಂಗ ನಿಂದನೆ ನೋಟೀಸ್ ನೀಡಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಆರು ಜಡ್ಜ್ ಗಳು ಏಪ್ರಿಲ್ 28 ಕ್ಕೆ ಮುಂಚೆ ತಮ್ಮ ...
ಸಿ.ಎಸ್ ಕರ್ಣನ್
ಸಿ.ಎಸ್ ಕರ್ಣನ್
ಕೊಲ್ಕೋತಾ: ತಮಗೆ ನ್ಯಾಯಾಂಗ ನಿಂದನೆ ನೋಟೀಸ್ ನೀಡಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಆರು ಜಡ್ಜ್ ಗಳು ಏಪ್ರಿಲ್ 28 ಕ್ಕೆ ಮುಂಚೆ ತಮ್ಮ ನಿವಾಸದಲ್ಲಿ ಹಾಜರಾಗಬೇಕು ಎಂದು ಕೊಲ್ಕೋತಾ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಸಿ.ಎಸ್ ಕರ್ಣನ್ ಹೇಳಿದ್ದಾರೆ.
ಮುಖ್ಯ ನ್ಯಾಯಮೂರ್ತಿಗಳು ಸೇರಿದಂತೆ 7 ಜಡ್ಜ್ ಗಳು ಉದ್ದೇಶಪೂರ್ವಕವಾಗಿ ಹಾಗೂ ಬೇಜವಾಬ್ದಾರಿಯಿಂದ ನನ್ನನ್ನು ಅವಮಾನಿಸಿದ್ದಾರೆ. 
ಎಸ್ಸಿ ಎಸ್ ಟಿ ದೌರ್ಜನ್ಯ ತಡೆ ನಿಗ್ರಹ ಕಾಯಿದೆಯನ್ನು ಉಲ್ಲಂಘಿಸಿದ್ದಾರೆ, ಅದನ್ನು 7 ನ್ಯಾಯಮೂರ್ತಿಗಳು ತಮ್ಮನ್ನು ಸಮರ್ಥಿಸಿಕೊಳ್ಳಬೇಕು ಎಂದು ಕರ್ಣನ್ ಹೇಳಿದ್ದಾರೆ. ನಾನು ದಲಿತ ಎಂಬ ಕಾರಣಕ್ಕೆ ನನ್ನ ವಿರುದ್ಧ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಕರ್ಣನ್ ಏಪ್ರಿಲ್ 28 ರ ಬೆಳಗ್ಗೆ 11.30ಕ್ಕೆ 7 ಜಡ್ಜ್ ಗಳು ತಮ್ಮ ಮನೆಯಲ್ಲಿ ಹಾಜರಾಗಿ ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯಿದೆ ಉಲ್ಲಂಘಿಸಿದ್ದರ ಬಗ್ಗೆ ತಮಗೆ ಸಮರ್ಥನೆ ನೀಡಬೇಕು ಎಂದು ತಿಳಿಸಿದ್ದಾರೆ.
ತಾವು ನ್ಯಾಯಾಲಯವನ್ನು ಸ್ಥಳಾಂತರಿಸಿದ್ದು, ಸ್ವಯಂ ಪ್ರೇರಿತ ನ್ಯಾಯಾಂಗ ಆದೇಶ  ಪಾಸು ಮಾಡಿದ್ದಾಗಿ ಹೇಳಿದ್ದಾರೆ,  1989 ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ನಿಗ್ರಹ ಕಾಯಿದೆ ಅಡಿಯಲ್ಲಿ 7 ನ್ಯಾಯಮೂರ್ತಿಗಳು ಆರೋಪಿಗಳಾಗಿದ್ದಾರೆ ಎಂದು ಹೇಳಿದ್ದಾರೆ.
ನ್ಯಾಯಾಂಗ ನಿಂದನೆ ಆರೋಪದಲ್ಲಿ ನೋಟಿಸ್ ಪಡೆದಿದ್ದ ಕರ್ಣನ್ ಮಾರ್ಚ್ 31 ರಂದು ಸುಪ್ರೀಂಕೋರ್ಟ್ ಮುಂದೆ ಹಾಜರಾಗಿದ್ದರು, ಆ ವೇಳೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಜೆ.ಎಸ್ ಖೆಹರ್ ನಿಮ್ಮ ಮಾನಸಿಕ ಆರೋಗ್ಯ ಹೇಗಿದೆ ಎಂದು ಓಪನ್ ಕೋರ್ಟ್ ನಲ್ಲಿ ಕೇಳಿ ನನ್ನನ್ನು ಅವಮಾನಿಸಿದ್ದಾರೆ ಎಂದು ಕರ್ಣನ್ ಆರೋಪಿಸಿದ್ದಾರೆ.
7 ನ್ಯಾಯಾಧೀಶರನ್ನೊಳಗೊಂಡ ಪೀಠ ನ್ಯಾಯಾಂಗ ನಿಂದನೆ ಮಾಡಿದ ಸಂಬಂಧ 4 ವಾರದೊಳಗೆ ಉತ್ತರಿಸಲು ಕರ್ಣನ್ ಅವರಿಗೆ ಗಡುವು ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com