ಅಂಗವೈಕಲ್ಯದಿಂದ ನರಳುತ್ತಿದ್ದ ಹೆಣ್ಣುಮಗುವಿಗೆ ವಿಷವುಣಿಸಿದ ನಿಷ್ಕರುಣಿ ತಾಯಿ

ಅಂಗವೈಕಲ್ಯದಿಂದ ನರಳುತ್ತಿದ್ದ ಮೂರು ವರ್ಷದ ಹೆಣ್ಣು ಮಗುವಿಗೆ ತಾಯಿಯೇ ಊಟದಲ್ಲಿ ವಿಷಬೆರೆಸಿ ಕೊಲ್ಲಲು ಯತ್ನಿಸಿರುವ ಘಟನೆ ತೆಲಂಗಾಣದ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಹೈದರಾಬಾದ್: ಅಂಗವೈಕಲ್ಯದಿಂದ ನರಳುತ್ತಿದ್ದ ಮೂರು ವರ್ಷದ ಹೆಣ್ಣು ಮಗುವಿಗೆ ತಾಯಿಯೇ ಊಟದಲ್ಲಿ ವಿಷಬೆರೆಸಿ ಕೊಲ್ಲಲು ಯತ್ನಿಸಿರುವ ಘಟನೆ ತೆಲಂಗಾಣದ ಮುರ್ದಾಬಾದ್ ಜಿಲ್ಲೆಯಲ್ಲಿ ನಡೆದಿದೆ,
ಕೇಸಮುಂದ್ರಾಮ್ ಮಂಡಲ್ ನ ಮೆಗ್ಯಾ ತಾಂಡಾದ ಬುಡಕಟ್ಟು ಜನಾಂಗದ ಜ್ಯೋತಿ ಎಂಬಾಕೆ ಬುಧವಾರ ರಾತ್ರಿ ಅನ್ನದಲ್ಲಿ ವಿಷಬೆರೆಸಿ ಮಗುವಿಗೆ ನೀಡಿದ್ದಾಳೆ. ಕೂಡಲೇ ಬಾಲಕಿ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಇದನ್ನು ಗಮನಿಸಿದ ಕುಟುಂಬದ ಸದಸ್ಯರೊಬ್ಬರು ಕೂಡಲೇ ಮನೆಯವರಿಗೆಲ್ಲಾ ವಿಷಯ ತಿಳಿಸಿದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬಾಲಕಿಯನ್ನು ಪರೀಕ್ಷಿಸಿದ ವೈದ್ಯರು ಆಹಾರದಲ್ಲಿ ವಿಷ ಬೆರೆಸಿರುವುದಾಗಿ ಹೇಳಿದ್ದಾರೆ. ಈ ಘಟನೆಯನ್ನು ಕುಟುಂಬದ ಸದಸ್ಯರು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಮಗುವಿನ ತಾಯಿಯನ್ನು ಪ್ರಶ್ನಿಸಿದಾಗ ಆಕೆ ತಪ್ಪೊಪ್ಪಿಕೊಂಡಿದ್ದಾಳೆ.
ಮಗುವಿನ ಭವಿಷ್ಯದ ಬಗ್ಗೆ ಚಿಂತಿತಳಾಗಿದ್ದ ಜ್ಯೋತಿ ಈ ಕೆಟ್ಟ ನಿರ್ಧಾರಕ್ಕೆ ಬಂದಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ವಾರಾಂಗಲ್ ನ ಆಸ್ಪತ್ರೆಗೆ ದಾಖಲಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com