ಸೂಕ್ತ ಕಾರಣ ನೀಡದೇ ತಲ್ಲಾಖ್ ನೀಡಿದ್ರೆ ಸಮಾಜದಿಂದಲೇ ಬಹಿಷ್ಕಾರ: ಮುಸ್ಲಿಂ ಕಾನೂನು ಮಂಡಳಿ ಎಚ್ಚರಿಕೆ

ತಲ್ಲಾಖ್ ಪದ್ಧತಿಯನ್ನು ಬೇಕಾಬಿಟ್ಟಿ ತಮ್ಮ ಇಚ್ಛೆಗೆ ಅನುಸಾರವಾಗಿ ಬಳಕೆ ಮಾಡುತ್ತಿರುವ ಮುಸ್ಲಿಂ ಗಂಡಂದಿರ ದಬ್ಬಾಳಿಕೆಗೆ ಶೀಘ್ರದಲ್ಲೇ ಬ್ರೇಕ್ ಬೀಳಲಿದ್ದು, ಸೂಕ್ತ ಕಾರಣ ನೀಡದೇ ತಲ್ಲಾಖ್ ನೀಡಿದ್ರೆ ಸಮಾಜದಿಂದಲೇ ಬಹಿಷ್ಕಾರ ಮಾಡುವುದಾಗಿ ಮುಸ್ಲಿಂ ಕಾನೂನು ಮಂಡಳಿ ಎಚ್ಚರಿಕೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ತಲ್ಲಾಖ್ ಪದ್ಧತಿಯನ್ನು ಬೇಕಾಬಿಟ್ಟಿ ತಮ್ಮ ಇಚ್ಛೆಗೆ ಅನುಸಾರವಾಗಿ ಬಳಕೆ ಮಾಡುತ್ತಿರುವ ಮುಸ್ಲಿಂ ಗಂಡಂದಿರ ದಬ್ಬಾಳಿಕೆಗೆ ಶೀಘ್ರದಲ್ಲೇ ಬ್ರೇಕ್ ಬೀಳಲಿದ್ದು, ಸೂಕ್ತ ಕಾರಣ ನೀಡದೇ ತಲ್ಲಾಖ್ ನೀಡಿದ್ರೆ  ಸಮಾಜದಿಂದಲೇ ಬಹಿಷ್ಕಾರ ಮಾಡುವುದಾಗಿ ಮುಸ್ಲಿಂ ಕಾನೂನು ಮಂಡಳಿ ಎಚ್ಚರಿಕೆ ನೀಡಿದೆ.

ವಿವಾದಿತ ತ್ರಿವಳಿ ತಲ್ಲಾಖ್ ಬಗ್ಗೆ ಸುಪ್ರೀಂ ಕೋರ್ಟ್ ಮಟ್ಟದಲ್ಲಿ ದೇಶಾದ್ಯಂತ ಚರ್ಚೆ ನಡೆಯುತ್ತಿದ್ದು, ವಿವಾದಿತ ಪದ್ದತಿಯನ್ನು ನಿಷೇಧಗೊಳಿಸುವಂತೆ ವ್ಯಾಪಕ ಮುಸ್ಲಿಂ ಮಹಿಳಾ ಸಂಘಟನೆಗಳು ಆಗ್ರಹಿಸುತ್ತಿವೆ. ಈ ಹಿಂದಿನ  ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ತ್ರಿವಳಿ ತಲ್ಲಾಖ್ ನಿಷೇಧ ಕುರಿತು ಸಮಯಾವಕಾಶ ಕೇಳಿದ್ದ ಮುಸ್ಲಿಂ ಕಾನೂನು ಮಂಡಳಿ ಇದೀಗ ತನ್ನ ಮೊದಲ ಹೆಜ್ಜೆಯನ್ನಿಟ್ಟುದ್ದು, ಸೂಕ್ತ ಕಾರಣ ನೀಡದೇ ತಲ್ಲಾಖ್ ನೀಡಿದರೆ ಅಂತಹವರನ್ನು  ಸಮಾಜದಿಂದಲೇ ಬಹಿಷ್ಕರಿಸಲಾಗುತ್ತದೆ ಎಂದು ಕಠಿಣ ಎಚ್ಚರಿಕೆ ನೀಡಿದೆ.

ಇದೇ ವೇಳೆ ತ್ರಿವಳಿ ತಲ್ಲಾಖ್ ಬಗ್ಗೆ ಮಾಧ್ಯಮಗಳಲ್ಲಿ ಎದ್ದಿರುವ ಚರ್ಚೆ ಕುರಿತಂತೆ ಮಾತನಾಡಿದ ಮುಸ್ಲಿಂ ಕಾನೂನು ಮಂಡಳಿ, ತಲ್ಲಾಖ್ ಪದ್ಧತಿ ಬಗ್ಗೆ ಕೆಲ ತಪ್ಪು ಗ್ರಹಿಕೆಗಳಿದ್ದು, ಇದನ್ನು ನಿವಾರಣೆ ಮಾಡುವ ಸಲುವಾಗಿಯೇ ಕೆಲ  ನೀತಿ ಸಂಹಿತೆಗಳನ್ನು ಜಾರಿ ಮಾಡಲು ಮಂಡಳಿ ಮುಂದಾಗಿದೆ ಎಂದು ಹೇಳಿದೆ.

ನಿನ್ನೆಯಷ್ಟೇ ವಿವಾದಕ್ಕೀಡಾಗಿರುವ ಈ ವಿಚಾರದ ಬಗ್ಗೆ ತಾನೇ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದ ಮಂಡಳಿ ಹೊರಗಿನವರ ಹಸ್ತಕ್ಷೇಪ ಬೇಡ ಎಂದು ಹೇಳಿತ್ತು. ಮಂಡಳಿಯ ಕಾರ್ಯಕಾರಿ ಸಭೆಯಲ್ಲಿ ಈ ಬಗ್ಗೆ ಮಹತ್ವದ ನಿರ್ಣಯ  ಕೈಗೊಳ್ಳಲಾಗುತ್ತದೆ ಎಂದು ಮಂಡಳಿಯ ನಿವೃತ್ತ ಅಧಿಕಾರಿ ಮೌಲಾನಾ ಖಲೀದ್ ಆರ್ ಫಿರಂಗಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com