ದೆಹಲಿ ಪುರಸಭೆ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ: 10 ರೂಗೆ ಊಟ, ಹೊಸ ತೆರಿಗೆ ಇಲ್ಲ

ದೆಹಲಿಯ ಪುರಸಭೆ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, 10 ರೂಪಾಯಿಗಳಿಗೆ ಊಟ ನೀಡುವುದು ಹಾಗೂ ಯಾವುದೇ ಹೊಸ ತೆರಿಗೆ ವಿಧಿಸುವುದಿಲ್ಲ ಎಂಬ ಭರವಸೆ ನೀಡಿದೆ.
ಬಿಜೆಪಿ
ಬಿಜೆಪಿ
Updated on: 
ನವದೆಹಲಿ: ದೆಹಲಿಯ ಪುರಸಭೆ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, 10 ರೂಪಾಯಿಗಳಿಗೆ ಊಟ ನೀಡುವುದು ಹಾಗೂ ಯಾವುದೇ ಹೊಸ ತೆರಿಗೆ ವಿಧಿಸುವುದಿಲ್ಲ ಎಂಬ ಭರವಸೆ ನೀಡಿದೆ. 
ಸತತ ಮೂರನೇ ಬಾರಿ ದೆಹಲಿಯ ಪುರಸಭೆ ಚುನಾವಣೆಯನ್ನು ಗೆಲ್ಲುವ ಗುರಿ ಹೊಂದಿರುವ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಅವರ ಕಲ್ಪನೆಯ ದೆಹಲಿಯೆಡೆಗೆ ಕೆಲಸ ಮಾಡುವುದಾಗಿ ಪ್ರಣಾಳಿಕೆ "ಸಂಕಲ್ಪ ಪತ್ರ"ದಲ್ಲಿ ಘೊಷಿಸಿದ್ದು, ಕ್ಯಾಂಟಿನ್ ಗಳನ್ನು ಪ್ರಾರಂಭಿಸುವ ಆಮ್ ಆದ್ಮಿ ಪಕ್ಷದ ನಿರ್ಧಾರಕ್ಕೆ ಪರ್ಯಾಯವಾಗಿ 10 ರೂಪಾಯಿಗಳಿಗೆ ಊಟ ನೀಡುವ ಯೋಜನೆಯನ್ನು ಜಾರಿಗೆ ತರುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. 
"ದೀನ್ ದಯಾಳ್ ಅಂತ್ಯೋದಯ ರಸೋಯಿ ಯೋಜನೆಯನ್ನು ಪುರಸಭೆ ಮಟ್ಟದಲ್ಲೂ ಜಾರಿಗೊಳಿಸಿ 10 ರೂಪಾಯಿಗೆ ಊಟ ಸಿಗುವಂತೆ ಮಾಡಲಾಗುತ್ತದೆ" ಎಂದು ಪ್ರಣಾಳಿಕೆ ಬಿಡುಗಡೆ ಮಾಡಿರುವ ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. 
272 ವಾರ್ಡ್ ಗಳಿರುವ ದೆಹಲಿ ಪುರಸಭೆಗೆ ಏ.23 ರಂದು ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. 
ಬಿಜೆಪಿ ಪ್ರಣಾಳಿಕೆಯ ಮುಖ್ಯಾಂಶಗಳು 
  • ಸುಮಾರು 41 ಅಂಶಗಳ ಪ್ರಣಾಳಿಕೆ 
  • ಪುರಸಭೆ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಯಾವುದೇ ರೀತಿಯ ಹೊಸ ತೆರಿಗೆ ವಿಧಿಸುವುದಿಲ್ಲ.
  • ಪ್ರಸ್ತುತ 105 ಚದರ ಮೀಟರ್ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಮಾಡುವುದದಾರೆ ಯೋಜನೆಗಳಿಗೆ ಅನುಮತಿ ಪಡೆಯಲು ವಿನಾಯಿತಿ ಇದೆ. ಈ ವಿನಾಯಿತಿಯನ್ನು 500 ಚದರ ಮೀಟರ್ ವರೆಗೂ ವಿಸ್ತರಣೆ ಮಾಡುವ ಭರವಸೆ 
  • ಕೇಂದ್ರದಿಂದ ಪುರಸಭೆಗಳಿಗೆ ಫಂಡ್ ಗಳ ನೇರ ವರ್ಗಾವಣೆಗೆ ಕ್ರಮ 
  • ಪಾರದರ್ಶಕ, ಭ್ರಷ್ಟಾಚಾರ ಮುಕ್ತ ಆಡಳಿತ 
  • ಎಂಸಿಡಿ ವ್ಯಾಪ್ತಿಯ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ 10 ಲಕ್ಷ ವಿಮೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com