ನವದೆಹಲಿ: ಮಾಜಿ ಸಿಎಂ ಶೀಲಾ ದೀಕ್ಷಿತ್ 15 ವರ್ಷಗಳ ಕಾಲ ದೆಹಲಿಯ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದರು, ಆದರೆ ಎಎಪಿ ಸರ್ಕಾರ 2 ವರ್ಷದಲ್ಲಿ ಮಾಡಿದ ಕೆಲಸವನ್ನು ಕಾಂಗ್ರೆಸ್ 15 ವರ್ಷ ಆಡಳಿತ ನಡೆಸಿದರೂ ಮಾಡಲಾಗಲಿಲ್ಲ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ದಿಯೋಲಿಯಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಕೇಜ್ರಿವಾಲ್, 2015 ರ ದೆಹಲಿಯಲ್ಲಿ ನೀಡಿದಂತೆ ದೆಹಲಿ ಮುನಿಸಿಪಾಲಿಟಿ ಚುನಾವಣೆಯಲ್ಲಿ ಎಎಪಿ ಪರ ಜನಾದೇಶ ನೀಡಬೇಕೆಂದು ಅವರು ಮನವಿ ಮಾಡಿದರು.
ಎಲೆಕ್ಟ್ರಾನಿಕ್ ಮತಯಂತ್ರಗಳ ದೋಷದಿಂದಾಗಿ ಪಂಜಾಬ್ ನಲ್ಲಿ ನಮ್ಮ ಪಕ್ಷ ಸೋತಿತು ಎಂದು ಹೇಳಿದ ಅವರು ದೆಹಲಿ ಮುನಿಸಿಪಲ್ ಚುನಾವಣೆಯಲ್ಲಿ ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಸಬೇಕು ಎಂದು ಆಗ್ರಹಿಸಿದ್ದಾರೆ.