ರಮ್ಯಾ
ದೇಶ
ರಮ್ಯಾ ವಿರುದ್ಧದ ರಾಷ್ಟ್ರದ್ರೋಹ ಪ್ರಕರಣ ವಜಾಗೊಳಿಸಿದ ನ್ಯಾಯಾಲಯ
ಪಾಕಿಸ್ತಾನದ ಪರ ಹೇಳಿಕೆ ನೀಡಿ, ರಾಷ್ಟ್ರದ್ರೋಹ ಪ್ರಕರಣಕ್ಕೆ ಗುರಿಯಾಗಿದ್ದ ನಟಿ, ಮಾಜಿ ಸಂಸದೆ ರಮ್ಯಗೆ ಕೋರ್ಟ್ ನಿಂದ ರಿಲೀಫ್ ದೊರೆತಿದೆ.
ಸೋಮಾರಪೇಟೆ: ಪಾಕಿಸ್ತಾನದ ಪರ ಹೇಳಿಕೆ ನೀಡಿ, ರಾಷ್ಟ್ರದ್ರೋಹ ಪ್ರಕರಣಕ್ಕೆ ಗುರಿಯಾಗಿದ್ದ ನಟಿ, ಮಾಜಿ ಸಂಸದೆ ರಮ್ಯಗೆ ಕೋರ್ಟ್ ನಿಂದ ರಿಲೀಫ್ ದೊರೆತಿದೆ.
ರಮ್ಯ ಅವರ ವಿರುದ್ಧ ದಾಖಲಾಗಿದ್ದ ರಾಷ್ಟ್ರದ್ರೋಹ ಪ್ರಕರಣವನ್ನು ಸೋಮಾರಪೇಟೆ ನ್ಯಾಯಾಲಯ ವಜಾಗೊಳಿಸಿದೆ. ವಿಚಾರಣೆ ನಡೆಸಿ, ಪ್ರಕರಣವನ್ನು ವಜಾಗೊಳಿಸಿರುವ ನ್ಯಾಯಾಲಯ "ಪಾಕಿಸ್ತಾನವನ್ನು ಅಧಿಕೃತವಾಗಿ ಶತ್ರು ರಾಷ್ಟ್ರ ಎಂದು ಪರಿಗಣಿಸಲಾಗಿಲ್ಲ. ಅಥವಾ ಸರ್ಕಾರವೂ ಸಹ ಪಾಕಿಸ್ತಾನವನ್ನು ಅಧಿಕೃತವಾಗಿ ಶತ್ರು ರಾಷ್ಟ್ರ ಎಂದು ಘೋಷಿಸಲಾಗಿಲ್ಲ. ಪಾಕಿಸ್ತಾನದ ಸೇನೆ ಹಾಗೂ ಭಯೋತ್ಪಾದಕರಿಂದ ನಮ್ಮ ದೇಶದ ಯೋಧರನ್ನು ಹತ್ಯೆಯಾಗಿದ್ದಾರೆ. ಹಾಗೆಂದ ಮಾತ್ರಕ್ಕೆ ಪಾಕಿಸ್ತಾನದ ಜನತೆಯನ್ನು ತಪ್ಪಿತಸ್ಥರೆಂದು ಹೇಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಇದೇ ವೇಳೆ ರಮ್ಯಾ ಅವರ ವಿರುದ್ಧ ಸೆಕ್ಷನ್ 124-A ಪ್ರಕಾರ ದಾಖಲಾದ ರಾಷ್ಟ್ರದ್ರೋಹ ಆರೋಪಕ್ಕೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ. ಅಷ್ಟೇ ಅಲ್ಲದೇ ರಮ್ಯಾ ಅವರ ಹೇಳಿಕೆ ರಾಷ್ಟ್ರದ್ರೋಹ ಪ್ರಕರಣಕ್ಕೆ ಅನ್ವಯವಾಗುವುದಿಲ್ಲ ಎಂದು ಹೇಳಿರುವ ನ್ಯಾಯಾಲಯ ಪ್ರಕರಣವನ್ನು ರದ್ದುಗೊಳಿಸಿದೆ.
2016 ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ರಮ್ಯಾ ಅಲ್ಲಿಂದ ವಾಪಸ್ಸಾದ ಬಳಿಕ "ಪಾಕಿಸ್ತಾನ ನರಕವಲ್ಲ, ಪಾಕಿಗಳು ಒಳ್ಳೆಯವರು ಎಂದು ಹೇಳಿ ವಿವಾದಕ್ಕೆ ಕಾರಣರಾಗಿದ್ದರು. ರಮ್ಯಾ ವಿರುದ್ದ ವಕೀಲ ಕೆ. ವಿಠಲ ಗೌಡ ಎಂಬುವರು ಸೋಮವಾರ ಪೇಟೆ ನ್ಯಾಯಾಲಯದಲ್ಲಿ ದೇಶದ್ರೋಹ ಕೇಸು


