
ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಂಟಾಗುವ ಹಿಂಸಾಚಾರದ ವೇಳೆ ಪ್ಲಾಸ್ಟಿಕ್ ಬುಲ್ಲೆಟ್ ಗಳನ್ನು ಬಳಕೆ ಮಾಡುವಂತೆ ಕೇಂದ್ರ ಗೃಹ ಇಲಾಖೆ ಭದ್ರತಾ ಪಡೆಗಳಿಗೆ ಸಲಹೆ ನೀಡಿದೆ. ಅಂತೆಯೇ ತೀರಾ ಅನಿವಾರ್ಯವಾದರೆ ಮಾತ್ರ ಪೆಲ್ಲೆಟ್ ಗನ್ ಗಳನ್ನು ಬಳಕೆ ಮಾಡುವಂತೆ ಸೂಚನೆ ನೀಡಿದೆ.
ಕಣಿವೆ ರಾಜ್ಯದಲ್ಲಿ ಪೆಲ್ಲೆಟ್ ಗನ್ ಗಳ ಬಳಕೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ಹಿಂಸಾಚಾರ ನಿಯಂತ್ರಣ ಮಾಡಲು ಭದ್ರತಾ ಸಿಬ್ಬಂದಿಗಳು ಬಳಕೆ ಮಾಡುವ ಪೆಲ್ಲೆಟ್ ಗನ್ ಗಳಿಂದಾಗಿ ಸ್ಥಳೀಯ ನಾಗರಿಕರಿಗೆ ಮಾರಣಾಂತಿಕ ಪೆಟ್ಟುಗಳಾಗುತ್ತಿವೆ. ಹಲವರು ಪೆಲ್ಲೆಟ್ ಗನ್ ಏಟಿಂನಿದಾಗಿ ಅಂಧರಾಗಿದ್ದು, ದಶಕಗಳ ಹಿಂದೆ ಬಿದ್ದ ಪೆಲ್ಲೆಟ್ ಗನ್ ಬುಲ್ಲೆಟ್ ಗಳಿಂದಾಗಿ ಇಂದಿಗೂ ಜನ ನೋವು ಅನುಭವಿಸುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಅಲ್ಲದೆ ಭದ್ರತಾ ಸಿಬ್ಬಂದಿಗಳು ಪೆಲ್ಲೆಟ್ ಗನ್ ಬಳಕೆ ಮಾಡದಂತೆ ನಿಷೇಧ ಹೇರಬೇಕು ಎಂದು ಕಣಿವೆ ರಾಜ್ಯದಾದ್ಯಂತ ಹಲವು ಪ್ರತಿಭಟನೆಗಳು ನಡೆದಿದ್ದವು.
ಇದೀಗ ಪ್ರತಿಭಟನಾಕಾರರ ಒತ್ತಾಯಕ್ಕೆ ಕೇಂದ್ರ ಸರ್ಕಾರ ಮಣಿದಿಲ್ಲವಾದರೂ ಪ್ಲಾಸ್ಟಿಕ್ ಬುಲ್ಲೆಟ್ ಗಳಿಗೆ ಮೊದಲ ಆಧ್ಯತೆ ನೀಡುವಂತೆಯೂ ತೀರಾ ಅನಿವಾರ್ಯವಾದರೆ ಮಾತ್ರ ಪೆಲ್ಲೆಟ್ ಗನ್ ಬಳಕೆ ಮಾಡುವಂತೆ ನಿರ್ದೇಶನ ನೀಡಿದೆ.
Advertisement