'ನೇಷನ್ ವಾಂಟ್ಸ್ ಟು ನೋ'... ಪದ ಬಳಸದಂತೆ ಅರ್ನಬ್'ಗೆ ಲೀಗಲ್ ನೋಟಿಸ್!

'ರಿಪಬ್ಲಿಕ್ ಟಿವಿ' ಇಂಗ್ಲಿಷ್ ಸುದ್ದಿವಾಹಿನಿ ಸ್ಥಾಪಿಸಹೊರಟಿರುವ ಪತಕರ್ತ ಅರ್ನಬ್ ಗೋಸ್ವಾಮಿಯವರು 'ನೇಷನ್ ವಾಂಟ್ಸ್ ಟು ನೋ' ( ದೇಶ ಕೇಳಬಯಸುತ್ತದೆ) ವಾಕ್ಯವನ್ನು ಬಳಸದಂತೆ ಮಾಧ್ಯಮ ಸಂಸ್ಥೆಯೊಂದು ಲೀಗಲ್ ನೋಟಿಸ್...
ಪತಕರ್ತ ಅರ್ನಬ್ ಗೋಸ್ವಾಮಿ
ಪತಕರ್ತ ಅರ್ನಬ್ ಗೋಸ್ವಾಮಿ
ಮುಂಬೈ: 'ರಿಪಬ್ಲಿಕ್ ಟಿವಿ' ಇಂಗ್ಲಿಷ್ ಸುದ್ದಿವಾಹಿನಿ ಸ್ಥಾಪಿಸಹೊರಟಿರುವ ಪತಕರ್ತ ಅರ್ನಬ್ ಗೋಸ್ವಾಮಿಯವರು 'ನೇಷನ್ ವಾಂಟ್ಸ್ ಟು ನೋ' ( ದೇಶ ಕೇಳಬಯಸುತ್ತದೆ) ವಾಕ್ಯವನ್ನು ಬಳಸದಂತೆ ಮಾಧ್ಯಮ ಸಂಸ್ಥೆಯೊಂದು ಲೀಗಲ್ ನೋಟಿಸ್ ಜಾರಿ ಮಾಡಿದೆ. 
'ಟೈಮ್ಸ್ ನೌ' ಸುದ್ದಿವಾಹಿನಿಯ ಮುಖ್ಯ ಸಂಪಾದಕರಾಗಿದ್ದಾಗ ಚರ್ಚೆ ಸಂದರ್ಭಗಳಲ್ಲಿ ಅರ್ನಬ್ ಗೋಸ್ವಾಮಿಯವರು 'ನೇಷನ್ ವಾಂಟ್ಸ್ ಟು ನೋ' ವಾಕ್ಯವನ್ನು ಬಳಕೆ ಮಾಡುತ್ತಿದ್ದರು. ಈ ವಾಕ್ಯ ಸಾಕಷ್ಟು ಜನಪ್ರಿಯತೆಯನ್ನುಗಳಿಸಿತ್ತು. 
ಆದರೆ, ಈಗ ಕೃತಿಸ್ವಾಮ್ಯ ಕಾನೂನಿನಡಿ ಈ ವಾಕ್ಯ ಬಳಕೆ ಮಾಡದಂತೆ ಮಾಧ್ಯಮ ಸಂಸ್ಥೆಯೊಂದು  ಲೀಗಲ್ ನೋಟಿಸ್ ಜಾರಿ ಮಾಡಿದೆ ಎಂದು ಖುದ್ದು ಗೋಸ್ವಾಮಿಯವರೇ ಹೇಳಿಕೊಂಡಿದ್ದಾರೆ. 
ಈ ಬಗ್ಗೆ ಯೂಟ್ಯೂಬ್'ನಲ್ಲಿ ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಅವರು, ನೇಷನ್ ವಾಂಟ್ಸ್ ಟು ನೋ ವಾಕ್ಯ ಬಳಕೆ ಮಾಡದಂತೆ ನನಗೆ ಲೀಗಲ್ ನೋಟಿಸ್ ಜಾರಿ ಮಾಡಲಾಗಿದೆ. ಕೆಲ ಮಾಧ್ಯಮಗಳು ಕೆಲ ತಿಂಗಳಿನಿಂದಲೂ ನನ್ನ ಬಗ್ಗೆ ನಡೆದುಕೊಳ್ಳುತ್ತಿರುವ ವರ್ತನೆಗಳನ್ನು ನೋಡುತ್ತಲೇ ಇದ್ದೇನೆ. ಆ ವರ್ತನೆಗಳಿಗೆ ಉಂದು ನಾನು ಪ್ರತಿಕ್ರಿಯೆ ನೀಡುತ್ತಿದ್ದೇನೆ. ಜೈಲಿಗೆ ಹಾಕುವ ಬೆದರಿಕೆಗಳು ನನ್ನನ್ನು ಹಿಮ್ಮೆಟಿಸಲು ಆಗುವುದಿಲ್ಲ. 
ನಿಮ್ಮಲ್ಲಿರುವ ದುಡ್ಡಿನ ಬ್ಯಾಗ್ ಮತ್ತು ವಕೀಲರನ್ನು ಕರೆ ತನ್ನಿ. ನೇಷನ್ ವಾಂಟ್ಸ್ ಟು ನೋ ಪದ ಬಳಕೆ ಮಾಡಿದ್ದಕ್ಕೆ ನನ್ನ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ. ನಿಮ್ಮಿಂದ ಏನು ಮಾಡಲು ಸಾಧ್ಯವೋ ಅದೆನ್ನಲ್ಲಾ ಮಾಡಿ. ನಿಮ್ಮಲ್ಲಿರುವ ಎಲ್ಲಾ ಹಣವನ್ನು ಖರ್ಚು ಮಾಡಿ. ನನ್ನ ಬಂಧಿಸಿ. ನನಗೆ ಲೀಗಲ್ ನೋಟಿಸ್ ಬಂದಿದ್ದರೂ ಈ ವಾಕ್ಯವನ್ನು ಬಳಸುವುದರಿಂದ ತಡೆಯಲು ಯಾರಿಂದಲೂ ಆಗದು. ನಾನು ಸ್ಟುಡಿಯೋದಲ್ಲಿಯೇ ಇರುತ್ತೇನೆ. ಬೇಕಿದ್ದರೆ ನನ್ನನ್ನು ಬಂಧಿಸಿ ಎಂದು ಸವಾಲೆಸಿದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com