ಅರುಣಾಚಲ ಪ್ರದೇಶದ 6 ಸ್ಥಳಗಳಿಗೆ 'ತನ್ನದೇ' ಹೆಸರುಗಳನ್ನು ಘೋಷಿಸಿದ ಚೀನಾ!

ಅರುಣಾಚಲ ಪ್ರದೇಶಲ್ಲಿ ಬೌದ್ಧ ಧರ್ಮ ಗುರು ದಲೈಲಾಮ ಭೇಟಿ ನೀಡಿದ್ದಕ್ಕೆ ನಖಶಿಖಾಂತ ಉರಿದುಕೊಂಡು ವಿರೋಧಿಸಿದ್ದ ಚೀನಾ, ಈಗ ಭಾರತದ ರಾಜ್ಯದ 6 ಪ್ರದೇಶಗಳಿಗೆ ಅಧಿಕೃತ ಹೆಸರುಗಳನ್ನು ಘೋಷಿಸಿದೆ!
ಅರುಣಾಚಲ ಪ್ರದೇಶ
ಅರುಣಾಚಲ ಪ್ರದೇಶ
ಅರುಣಾಚಲ ಪ್ರದೇಶ: ಅರುಣಾಚಲ ಪ್ರದೇಶಲ್ಲಿ ಬೌದ್ಧ ಧರ್ಮ ಗುರು ದಲೈಲಾಮ ಭೇಟಿ ನೀಡಿದ್ದಕ್ಕೆ ನಖಶಿಖಾಂತ ಉರಿದುಕೊಂಡು ವಿರೋಧಿಸಿದ್ದ ಚೀನಾ, ಈಗ ಭಾರತದ ರಾಜ್ಯದ 6 ಪ್ರದೇಶಗಳಿಗೆ ಅಧಿಕೃತ ಹೆಸರುಗಳನ್ನು ಘೋಷಿಸಿದೆ! 
ಹೌದು ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮ ಈ ಬಗ್ಗೆ ವರದಿ ಪ್ರಕಟಿಸಿದ್ದು, ದಕ್ಷಿಣ ಟಿಬೆಟ್ ಎಂದು ಚೀನಾ ಹಕ್ಕು ಪ್ರತಿಪಾದನೆ ಮಾಡುವ ಅರುಣಾಚಲ ಪ್ರದೇಶದ 6 ಭಾಗಗಳಿಗೆ ಚೀನಾ ತನ್ನದೇ ಆದ ಅಧಿಕೃತ ಹೆಸರುಗಳನ್ನು ಘೋಷಿಸಿದೆ ಎಂದು ಹೇಳಿದೆ.  
ಭಾರತ ಚೀನಾ ನಡುವೆ 3,488 ಕಿಮಿ ವ್ಯಾಪ್ತಿ ವರೆಗಿನ ಗಡಿ ವಿವಾದ ಇದ್ದು, ಅರುಣಾಚಲ ಪ್ರದೇಶವನ್ನು ಚೀನಾ ದಕ್ಷಿಣ ಟಿಬೆಟ್ ಎಂದು ಪ್ರತಿಪಾದನೆ ಮಾಡುತ್ತಿದ್ದರೆ, ಭಾರತ 1962 ರ ಯುದ್ಧದಲ್ಲಿ ಚೀನಾ ಅಕ್ರಮವಾಗಿ ಆಕ್ರಮಿಸಿಕೊಂಡ ಅಕ್ಸಾಯ್ ಚಿನ್ ಸಹ ಗಡಿ ವಿವಾದದ ಭಾಗ ಎಂದು ಹೇಳುತ್ತಿದೆ. ಗಡಿ ವಿವಾದವನ್ನು ಬಗೆಹರಿಸಲು ಭಾರತ-ಚೀನಾ ಈ ವರೆಗೂ ವಿಶೇಷ ಪ್ರತಿನಿಧಿಗಳ 19 ಸುತ್ತಿನ ಸಭೆಯನ್ನು ನಡೆಸಿವೆ. ಆದರೆ ಈಗ ಅರುಣಾಚಲ ಪ್ರದೇಶಕ್ಕೆ ದಲೈ ಲಾಮ ಭೇಟೀ ನೀಡಿದ್ದ ಬೆನ್ನಲ್ಲೇ ಅರುಣಾಚಲ ಪ್ರದೇಶದ 6 ಪ್ರದೇಶಗಳಿಗೆ ಚೀನಾ ಹೆಸರನ್ನು ಘೋಷಿಸುವ ತೀವ್ರತರವಾದ ನಿರ್ಧಾರ ಕೈಗೊಂಡಿದೆ. ಚೀನಾದ ಈ ನಡೆ ಬಗ್ಗೆ ಭಾರತ ಸರ್ಕಾರ ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com