ಅಝಾನ್ ವಿವಾದ: ನನ್ನ ಹೇಳಿಕೆ ಯಾವುದೇ ಧರ್ಮದ ವಿರುದ್ಧವಾಗಿರಲಿಲ್ಲ- ಸೋನು ನಿಗಮ್ ಸ್ಪಷ್ಟನೆ

'ಒತ್ತಾಯಪೂರ್ವಕ ಧಾರ್ಮಿಕತೆ' ಕುರಿತಂತೆ ಟ್ವಿಟರ್ ನಲ್ಲಿ ಹೇಳಿಕೆ ನೀಡಿದ ಸಾಮಾಜಿ ಮಾಧ್ಯಮಗಳಲ್ಲಿ ತರಾಟೆಗೆ ಗುರಿಯಾದ ಬಳಿಕ ಗಾಯಕ ಸೋನು ನಿಗಮ್ ಅವರು ತಮ್ಮ ಹೇಳಿಕೆ ಕುರಿತಂತೆ...
ಗಾಯಕ ಸೋನು ನಿಗಮ್
ಗಾಯಕ ಸೋನು ನಿಗಮ್
ಮುಂಬೈ: 'ಒತ್ತಾಯಪೂರ್ವಕ ಧಾರ್ಮಿಕತೆ' ಕುರಿತಂತೆ ಟ್ವಿಟರ್ ನಲ್ಲಿ ಹೇಳಿಕೆ ನೀಡಿದ ಸಾಮಾಜಿ ಮಾಧ್ಯಮಗಳಲ್ಲಿ ತರಾಟೆಗೆ ಗುರಿಯಾದ ಬಳಿಕ ಗಾಯಕ ಸೋನು ನಿಗಮ್ ಅವರು ತಮ್ಮ ಹೇಳಿಕೆ ಕುರಿತಂತೆ ಬುಧವಾರ ಸ್ಪಷ್ಟನೆ ನೀಡಿದ್ದಾರೆ. 
ಹೇಳಿಕೆ ಸಂಬಂಧ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ನಾನು ಮಾತನಾಡುವಾಗ ದೇಗುಲಗಳು ಮತ್ತು ಗುರುದ್ವಾರಗಳನ್ನು ಉಲ್ಲೇಖ ಮಾಡಿದ್ದೆ. ನಿಮ್ಮ ನಿಲುವು ನಿಮ್ಮ ಬುದ್ಧಿಶಕ್ತಿ (ಐಕ್ಯೂ)ಯನ್ನು ತೋರಿಸುತ್ತದೆ. ಈಗಲೂ ನನ್ನ ನಿಲುವಿಗೆ ನಾನು ಬದ್ಧನಾಗಿದ್ದೇನೆ. ಮಸೀದಿ ಹಾಗೂ ದೇಗುಲಗಳಲ್ಲಿ ಧ್ವನಿವರ್ಧಕ ಬಳಕೆಯಾಗಬಾರದು ಎಂದು ಹೇಳಿದ್ದಾರೆ.
ನನ್ನನ್ನು ಮುಸ್ಲಿಂ ವಿರೋಧಿ ಎಂದು ಹೇಳುತ್ತಿರುವವರು...ಎಲ್ಲಿಯಾದರೂ ನಾನು ಮುಸ್ಲಿಮರ ಬಗ್ಗೆ ಮಾತನಾಡಿರುವುದನ್ನು ತೋರಿಸಿ...ನಂತರ ನಾನು ಕ್ಷಮೆಯಾಚಿಸುತ್ತೇನೆ. ನಾನು ಮಾತನಾಡುತ್ತಿದ್ದಾಗ ದೇಗುಲ ಹಾಗೂ ಗುರುದ್ವಾರಗಳನ್ನು ಉಲ್ಲೇಖ ಮಾಡಿದ್ದೆ. ಎಲ್ಲರಿಗೂ ದೇವರು ಒಳ್ಳೆಯದು ಮಾಡಲಿ.
ನಾನು ಮುಸ್ಲಿಮನಲ್ಲ. ಆದರೂ ಬೆಳಗಿನ ಆಝಾನ್ ನಿಂದಾಗಿ ಏಳುವಂತಾಗಿದೆ. ನಮ್ಮ ದೇಶದಲ್ಲಿ ಈ ಬಲವಂತದ ಧಾರ್ಮಿಕತೆ ಎಂದು ನಿಲುತ್ತದೆ. ಇಸ್ಲಾಂ ಸ್ಥಾಪನೆ ಮಾಡುವಾಗ ಮೊಹಮ್ಮದ್ ಬಳಿ ವಿದ್ಯುತ್ ಇರಲಿಲ್ಲ. ಧಾರ್ಮಿಕತೆಯನ್ನೇ ಪಾಲನೆ ಮಾಡದ ಜನರನ್ನು ಎದ್ದೇಳಿಸಲು ವಿದ್ಯುತ್ ಬಳಕೆ ಮಾಡುವ ದೇಗುಲ ಅಥವಾ ಗುರುದ್ವಾರವನ್ನು ನಾನು ನಂಬುವುದಿಲ್ಲ...ಮತ್ತೆ ಏಕೆ...? ಪ್ರಾಮಾಣಿಕತೆ...? ಸತ್ಯತೆ...?ಎಂದು ಸರಣಿ ಟ್ವೀಟ್'ನಲ್ಲಿ ಹೇಳಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com