ಕೆಂಪುದೀಪ ಕಾರಿಗೆ ರೆಡ್ ಸಿಗ್ನಲ್: ಪ್ರಧಾನಿ ಮೋದಿಗೆ ಕೇಂದ್ರ ಸಚಿವ ಬಲ್ಯಾನ್ ಬೆಂಬಲ

ವಿಐಪಿ ಸಂಸ್ಕೃತಿಗೆ ಅಂತ್ಯ ಹಾಡುವ ಸಲುವಾಗಿ ಕೆಂಪುದೀಪ ಕಾರಿಗೆ ರೆಡ್ ಸಿಗ್ನಲ್ ತೋರಿರುವ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಕೇಂದ್ರ ಸಚಿವ ಸಂಜೀವ್ ಬಲ್ಯಾನ್ ಅವರು ಗುರುವಾರ ಬೆಂಬಲ ಸೂಚಿಸಿದ್ದಾರೆ...
ಕೇಂದ್ರ ಸಚಿವ ಸಂಜೀವ್ ಬಲ್ಯಾನ್
ಕೇಂದ್ರ ಸಚಿವ ಸಂಜೀವ್ ಬಲ್ಯಾನ್
ನವದೆಹಲಿ: ವಿಐಪಿ ಸಂಸ್ಕೃತಿಗೆ ಅಂತ್ಯ ಹಾಡುವ ಸಲುವಾಗಿ ಕೆಂಪುದೀಪ ಕಾರಿಗೆ ರೆಡ್ ಸಿಗ್ನಲ್ ತೋರಿರುವ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಕೇಂದ್ರ ಸಚಿವ ಸಂಜೀವ್ ಬಲ್ಯಾನ್ ಅವರು ಗುರುವಾರ ಬೆಂಬಲ ಸೂಚಿಸಿದ್ದಾರೆ. 
ಕೇಂದ್ರ ಸರ್ಕಾರದ ನಿರ್ಧಾರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ವಿಐಪಿ ಸಂಸ್ಕೃತಿಯನ್ನು ತೆಗೆದುಹಾಕುವ ಕುರಿತಂತೆ ನಾನು ಯಾವಾಗಲೂ ಬೆಂಬಲ ವ್ಯಕ್ತಪಡಿಸುತ್ತಿದ್ದೆ. ವಿಐಪಿ ಸಂಸ್ಕೃತಿಗಳು ಹೋಗಬೇಕಿದ್ದು, ಇದರಿಂದ ಸಚಿವರೂ ಕೂಡ ಸಾಮಾನ್ಯರೆಂಬ ಭಾವನೆಗಳು ಹುಟ್ಟುತ್ತವೆ. ಸಾಕಷ್ಟು ಸಚಿವರು ತಮ್ಮ ಕಾರುಗಳ ಮೇಲಿರುವ ಕೆಂಪು ದೀಪಗಳನ್ನು ತೆಗೆದುಹಾಕಿ ಬೆಂಬಲ ವ್ಯಕ್ತಪಡಿಸಿರುವುದು ನಿಜಕ್ಕೂ ಸಂತಸವನ್ನು ತಂದಿದೆ ಎಂದು ಹೇಳಿದ್ದಾರೆ. 
ನಿನ್ನೆಯಷ್ಟೇ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿತ್ತು. ಕೇಂದ್ರ ಸಂಪುಟ ಸಭೆಯಲ್ಲಿ ಸರ್ಕಾರಿ ವಾಹನಗಳಲ್ಲಿ ವಿಐಪಿಗಳು ಕೆಂಪು ದೀಪ ಬಳಸುವುದಕ್ಕೆ ನಿಷೇಧ ಹೇರುವ ತೀರ್ಮಾನವನ್ನು ಕೈಗೊಂಡಿತ್ತು. ರಾಷ್ಟ್ರಪತಿ, ಪ್ರಧಾನಮಂತ್ರಿ ಹಾಗೂ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಯಾವುದೇ ಗಣ್ಯ ವ್ಯಕ್ತಿಗಳ ಕಾರಿನಲ್ಲಿ ಮೇ.1 ರಿಂದ ಕೆಂಪುದೀಪ ಬಳಸದೇ ಇರುವ ಐತಿಹಾಸಿಕ ನಿರ್ಣಯವನ್ನು ನಿನ್ನೆ ನಡೆದ ಕೇಂದ್ರ ಸಚಿವ ಸಂಪುಟ ಸಭೆ ತೆಗೆದುಕೊಂಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com