ಯಮುನಾ ನದಿಯ ತೀರದಲ್ಲಿ ಮೂರು ದಿನ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಿಂದ ಪರಿಸರಕ್ಕೆ ಹಾನಿ ಉಂಟಾಗಿದ್ದರೆ, ಅದು ಸರ್ಕಾರ ಹಾಗೂ ಕೋರ್ಟ್ ಹೊಣೆ, ಏಕೆಂದರೆ ಕಾರ್ಯಕ್ರಮ ನಡೆಯಲು ಅನುಮತಿ ಕೊಟ್ಟವರೇ ಅವರು ಎಂದು ಹೇಳಿದ್ದರು. ರವಿಶಂಕರ್ ಅವರ ಈ ಹೇಳಿಕೆಗೆ ಕೆಂಡಾಮಂಡಲವಾಗಿರುವ ಕೋರ್ಟ್, ಮನಸೋಇಚ್ಛೆ ಹೇಳಿಕೆ ನೀಡಲು ನಿಮಗೆ ಸ್ವಾತಂತ್ರ್ಯವಿದೆ ಎಂದು ಕೊಂಡಿದ್ದೀರಾ? ಎಂದು ತರಾಟೆಗೆ ತೆಗೆದುಕೊಂಡಿದೆ.