ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ಕೇಸು: ಕೇಜ್ರಿವಾಲ್ ವಿರುದ್ಧ ಕ್ರಮಕ್ಕೆ ಬಿಜೆಪಿ ನಾಯಕ ಒತ್ತಾಯ

ಆಮ್ ಆದ್ಮಿ ಪಕ್ಷದ ನಾಯಕನ ವಿರುದ್ಧ ನಾಗರಿಕ ಮಾನನಷ್ಟ ಮೊಕದ್ದಮೆ ಕೇಸು ದಾಖಲೆಯಲ್ಲಿ...
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್
ನವದೆಹಲಿ: ಆಮ್ ಆದ್ಮಿ ಪಕ್ಷದ ನಾಯಕನ ವಿರುದ್ಧ ನಾಗರಿಕ ಮಾನನಷ್ಟ ಮೊಕದ್ದಮೆ ಕೇಸು ದಾಖಲೆಯಲ್ಲಿ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಬಿಜೆಪಿ ನಾಯಕ ಅವ್ತಾರ್ ಸಿಂಗ್ ಬಾದನ ಕೋರ್ಟ್ ಮೊರೆ ಹೋಗಿದ್ದಾರೆ.
ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಸುರೇಂದರ್ ಎಸ್ ರಾತಿ ಅವರ ಮುಂದೆ ದೂರು ನೀಡಿದ ಬಿಜೆಪಿ ನಾಯಕ, ಲಿಖಿತ ಸಲ್ಲಿಕೆ ಮತ್ತು ನಂತರದ ಪ್ರಸ್ತಾಪಿತ ತಿದ್ದುಪಡಿಯಲ್ಲಿ ವಸ್ತು ವಿರೋಧಾಭಾಸಗಳಿವೆ. ಇದರರ್ಥ ಇಬ್ಬರಲ್ಲೊಬ್ಬರು ಸುಳ್ಳು ಹೇಳುತ್ತಿದ್ದು, ನ್ಯಾಯಾಂಗದ ಮುಂದೆ ತನಿಖೆ ವೇಳೆ ಕೇಜ್ರಿವಾಲ್ ಅವರು ತಪ್ಪು ಸಾಕ್ಷಿ ನೀಡಿದ್ದಾರೆ ಮತ್ತು ನ್ಯಾಯಾಲಯವನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ ಎಂದು ಹೇಳಿದರು.
ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಇದೇ 27ರಂದು ಕೈಗೆತ್ತಿಕೊಳ್ಳಲಿದೆ.ಹರ್ಯಾಣದ ಫರೀದಾಬಾದ್ ನ ಕಾಂಗ್ರೆಸ್ ಮಾಜಿ ಸಂಸದ ಈ ಹಿಂದೆ ದೆಹಲಿ ಹೈಕೋರ್ಟ್ ನಲ್ಲಿ ಕೇಜ್ರಿವಾಲ್ ವಿರುದ್ಧ ನಾಗರಿಕ ಮಾನನಷ್ಠ ಮೊಕದ್ದಮೆ ಹೂಡಿ, ತಮ್ಮನ್ನು ಭ್ರಷ್ಟಾಚಾರಿ ಎಂದು ಹೇಳಿ ವ್ಯಕ್ತಿತ್ವಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ್ದರು ಮತ್ತು ಒಂದು ಕೋಟಿ  ರೂಪಾಯಿ ಪರಿಹಾರ ಕೇಳಿದ್ದರು.
ತಮ್ಮ ದೂರಿನಲ್ಲಿ ಬದಾನಾ, ಕೇಜ್ರಿವಾಲ್ ಸಾರ್ವಜನಿಕವಾಗಿ 2014, ಜನವರಿ 31ರಂದು ತಮ್ಮ ವಿರುದ್ಧ ಮಾನನಷ್ಟ ಹೇಳಿಕೆ ನೀಡಿದ್ದರು ಎಂದು ಹೇಳಿದ್ದಾರೆ. ಕೇಜ್ರಿವಾಲ್ ಅವರಿಗೆ ಲೀಗಲ್ ನೊಟೀಸ್ ಕಳುಹಿಸಿದರೂ ಕೂಡ ತಮ್ಮ ಹೇಳಿಕೆಯನ್ನು ವಾಪಸ್ ತೆಗೆದುಕೊಳ್ಳುವುದಾಗಲಿ, ಕ್ಷಮೆ ಕೋರುವುದಾಗಲಿ ಮಾಡಲಿಲ್ಲ ಎಂದು ದೂರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com