ಉತ್ತರ ಪ್ರದೇಶ: ಸ್ವಾಮಿಗಳ ವೇಷದಲ್ಲಿ ದಾಳಿಗೆ ಉಗ್ರರ ಸಂಚು, ಯೋಗಿ ಆದಿತ್ಯನಾಥ್ ಭದ್ರತೆ ಹೆಚ್ಚಳ

ಉಗ್ರರು ಸ್ವಾಮಿಜಿಗಳ ವೇಷದಲ್ಲಿ ಉತ್ತರ ಪ್ರದೇಶದಲ್ಲಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದ....
ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್
ಲಖನೌ: ಉಗ್ರರು ಸ್ವಾಮಿಜಿಗಳ ವೇಷದಲ್ಲಿ ಉತ್ತರ ಪ್ರದೇಶದಲ್ಲಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಭದ್ರತೆಯನ್ನು ಮತ್ತಷ್ಚು ಹೆಚ್ಚಿಸಲಾಗಿದೆ.
ಮಧ್ಯಪ್ರದೇಶ ಗುಪ್ತಚರ ವರದಿಯ ಪ್ರಕಾರ, ಉಗ್ರರು ಪೊಲೀಸ್‌ ತಪಾಸಣೆಯಿಂದ ತಪ್ಪಿಸಿಕೊಳ್ಳುವ ಕಾರಣಕ್ಕಾಗಿ ಸ್ವಾಮಿಜಿಗಳು, ಸಾಧು ಸಂತರ ವೇಷದಲ್ಲಿ ಬರುವ ಬಗ್ಗೆ ಸುಳಿವು ಲಭ್ಯವಾಗಿದೆ.
ಸುಮಾರು 18 ವರ್ಷದ 25 ಉಗ್ರರು ನೇಪಾಳದಿಂದ ಭಾರತಕ್ಕೆ ನುಸುಳಿದ್ದು, ಉತ್ತರ ಪ್ರದೇಶದಲ್ಲಿ ದಾಳಿಗೆ ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ವರದಿ ತಿಳಿಸಿದೆ. ಹೀಗಾಗಿ ಭಾರತ-ನೇಪಾಳ ಗಡಿಯಲ್ಲೂ ಭದ್ರತೆಯನ್ನು ಹೆಚ್ಚಿಸಲಾಗಿದೆ. ಅಲ್ಲದೆ ಉತ್ತರ ಪ್ರದೇಶದ ಎಲ್ಲಾ ಆಯಕಟ್ಟಿನ ಮತ್ತು ಪ್ರಮುಖ ದೇವಾಲಯಗಳಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. 
ಯೋಗಿ ಆದಿತ್ಯನಾತ್‌ ಅವರು ಜಾವೇದ್‌ ಅಹಮದ್‌ ಅವರನ್ನು ಉತ್ತರ ಪ್ರದೇಶ ಪೊಲೀಸ್‌ ಮಹಾನಿರ್ದೇಶಕ ಹುದ್ದೆಯಿಂದ ಬದಲಾವಣೆ ಮಾಡಿ ಸುಲ್‌ಖಾನ್‌ ಸಿಂಗ್‌ ಅವರಿಗೆ ಹುದ್ದೆ ನೀಡಿದ ಕೆಲ ಹೊತ್ತಲ್ಲೇ ಎಚ್ಚರಿಕೆ ಹೊರ ಬಿದ್ದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com