ಕೆಟ್ಟ ಸಂದೇಶ ರವಾನೆ: ಎಫ್ಐಆರ್ ದಾಖಲಿಸಿದ ಬಿಜೆಪಿ ಸಂಸದೆ ಶೈನಾ ಎನ್'ಸಿ

ಅನಾಮಧೇಯ ವ್ಯಕ್ತಿಗಳು ತಮಗೆ ಕೆಟ್ಟ ಸಂದೇಶಗಳನ್ನು ರವಾನಿಸುತ್ತಿದ್ದಾರೆಂದು ಹೇಳಿ ಬಿಜೆಪಿ ಸಂಸದೆ ಶೈನಾ ಎನ್.ಸಿಯವರು ಭಾನುವಾರ ಎಫ್ಐಆರ್ ದಾಖಲಿಸಿದ್ದಾರೆ...
ಬಿಜೆಪಿ ಸಂಸದೆ ಶೈನಾ ಎನ್.ಸಿ
ಬಿಜೆಪಿ ಸಂಸದೆ ಶೈನಾ ಎನ್.ಸಿ
ಮುಂಬೈ: ಅನಾಮಧೇಯ ವ್ಯಕ್ತಿಗಳು ತಮಗೆ ಕೆಟ್ಟ ಸಂದೇಶಗಳನ್ನು ರವಾನಿಸುತ್ತಿದ್ದಾರೆಂದು ಹೇಳಿ ಬಿಜೆಪಿ ಸಂಸದೆ ಶೈನಾ ಎನ್.ಸಿಯವರು ಭಾನುವಾರ ಎಫ್ಐಆರ್ ದಾಖಲಿಸಿದ್ದಾರೆ. 
ಈ ಕುರಿತಂತೆ ಮಾತನಾಡಿರುವ ಅವರು, ಮತ್ತೆ ಈ ರೀತಿಯಾಗಿ ಮಾಡಬಾರದೆಂಬ ಕಾರಣಕ್ಕೆ ನಾನು ಎಫ್ಐಆರ್ ದಾಖಲಿಸಿದ್ದೇನೆ. ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯಡಿಯಲ್ಲಿ ಆರೋಪಿಗಳಿಗೆ ಶಿಕ್ಷೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ. 
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 354ರ ಅಡಿಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. 
ಕಳೆದ ತಿಂಗಳೂ ಕೂಡ ಇದೇ ರೀತಿಯ ಮತ್ತೊಂದು ಘಟನೆ ನಡೆದಿತ್ತು. ಶೈನಾ ಅವರಿಗೆ ಕೆಟ್ಟ ಸಂದೇಶಗಳನ್ನು ರವಾನೆ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ಮುಂಬೈ ಪೊಲೀಸರಿಗೆ ಶೈನಾ ಅವರು ದೂರು ನೀಡಿದ್ದರು. 
ಗೌರವ ಹಾಗೂ ಘನತೆಗೆ ಬೆಲೆ ಕೊಡುವಂತಹ ಮಹಿಳೆಯರು ಪ್ರಸ್ತುತ ನಾನು ಏನು ಮಾಡಿದ್ದೇನೆಯೋ ಅದನ್ನೇ ಮಾಡುತ್ತಾರೆ. ಹೀಗಾಗಿ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸುವ ಧೈರ್ಯವನ್ನು ನಾನು ಮಾಡಿದ್ದೇನೆ. ಪೊಲೀಸರು ಹಾಗೂ ಪೊಲೀಸ್ ಆಯುಕ್ತರು ನನಗೆ ಬೆಂಬಲ ನೀಡಿದ್ದಾರೆಂದು ಶೈನಾ ಅವರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com