ಎಂಸಿಡಿ ಚುನಾವಣೆ: ಮತದಾನ ಅಂತ್ಯ; 4 ಗಂಟೆ ಹೊತ್ತಿಗೆ ಶೇ. 45.1ರಷ್ಟು ಮತದಾನ

ರಾಷ್ಟ್ರ ರಾಜಧಾನಿ ದೆಹಲಿಯ 3 ಮಹಾನಗರ ಪಾಲಿಕೆಗಳಿಗೆ ಭಾನುವಾರ ನಡೆದ ಮತದಾನ ಅಂತ್ಯವಾಗಿದ್ದು, ಸಂಜೆ 4 ಗಂಟೆ ಹೊತ್ತಿಗೆ ಸುಮಾರು 45.1ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ 3 ಮಹಾನಗರ ಪಾಲಿಕೆಗಳಿಗೆ ಭಾನುವಾರ ನಡೆದ ಮತದಾನ ಅಂತ್ಯವಾಗಿದ್ದು, ಸಂಜೆ 4 ಗಂಟೆ ಹೊತ್ತಿಗೆ ಸುಮಾರು 45.1ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.

ಆಡಳಿತಾ ರೂಢ ಆಮ್ ಆದ್ಮಿ ಹಾಗೂ ಪ್ರತಿ ಪಕ್ಷ ಕಾಂಗ್ರೆಸ್ ಗೆ ದೆಹಲಿ ಎಂಸಿಡಿ ಚುನಾವಣೆ ಪ್ರತಿಷ್ಠೆಯ ಕಣವಾಗಿದ್ದು, ಪಾಲಿಕೆಯಲ್ಲಿ ಅಧಿಕಾರದಲ್ಲಿರುವ ಬಿಜೆಪಿಯಿಂದ ಅಧಿಕಾರ ಕಿತ್ತುಕೊಳ್ಳಲು ಹವಣಿಸುತ್ತಿವೆ. ಹೀಗಾಗಿ ತೀವ್ರ  ಕುತೂಹಲ ಕೆರಳಿಸಿದ್ದ ಚುನಾವಣೆಯ ಮತದಾನ ಅಂತ್ಯವಾಗಿದೆ. ಚುನಾವಣಾ ಆಯೋಗದ ಮೂಲಗಳ ಪ್ರಕಾರ ಸಂಜೆ 4 ಗಂಟೆ ಹೊತ್ತಿಗೆ ದೆಹಲಿಯಾದ್ಯಂತ ಶೇ. 45.1ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.

ಮತದಾನಕ್ಕೆ ಬಿರು ಬೇಸಿಗೆ ತಡೆ?
ಇನ್ನು ದೆಹಲಿಯಲ್ಲಿ ಬಿಸಿಗಾಳಿ ಬೀಸುತ್ತಿದ್ದು, ಬೇಸಿಗೆ ಮತದಾನದ ಮೇಲೂ ಪರಿಣಾಮ ಬೀರಿದೆ ಎಂದು ಹೇಳಲಾಗುತ್ತಿದೆ. ಬಿರು ಬೇಸಿಗೆಯಿಂದಾಗಿ ಮತದಾನ ಮಾಡಲು ದೆಹಲಿ ಜನತೆ ನಿರಾಶಕ್ತಿ ತೋರಿದ್ದು, ಇದೇ ಕಾರಣಕ್ಕೆ ಕಡಿಮೆ  ಪ್ರಮಾಣದ ಮತದಾನವಾಗಿದೆ ಎಂದು ಹೇಳಲಾಗುತ್ತಿದೆ.

ಮತ ಯಂತ್ರಗಳಲ್ಲಿ ದೋಷ, ಬಿಜೆಪಿಯಿಂದ ಮತ ಯಂತ್ರ ದುರ್ಬಳಕೆ: ಕೇಜ್ರಿವಾಲ್  ಆರೋಪ
ಇನ್ನು ದೆಹಲಿ ಎಂಸಿಡಿ ಚುನಾವಣೆಯಲ್ಲಿ ಬಳಕೆ ಮಾಡಲಾದ ಮತ ಯಂತ್ರಗಳಲ್ಲಿ ದೋಷ ಕಂಡುಬಂದಿದ್ದು, ಆಡಳಿತಾ ರೂಢ ಬಿಜೆಪಿ ಮತ ಯಂತ್ರಗಳನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.  "ಮತಯಂತ್ರಗಳಲ್ಲಿ ದೋಷವಿದೆ. ಅಷ್ಟೇ ಅಲ್ಲದೇ ಮತದಾರರ ಗುರುತಿನ ಚೀಟಿಯನ್ನು ಹೊಂದಿರುವವರಿಗೆ ಮತದಾನ ಮಾಡಲು ಅವಕಾಶ ನೀಡಲಾಗುತ್ತಿಲ್ಲ. ಚುನಾವಣಾ ಆಯೋಗ ಏನು ಮಾಡುತ್ತಿದೆ?" ಎಂದು ಕೇಜ್ರಿವಾಲ್  ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com