ಸಿಬಿಐ ಮಾಜಿ ನಿರ್ದೇಶಕ ರಂಜಿತ್ ಸಿನ್ಹಾ ವಿರುದ್ಧ ಭ್ರಷ್ಟಾಚಾರದ ಕೇಸ್ ದಾಖಲಿಸಿದ ಸಿಬಿಐ

ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮಾಜಿ ನಿರ್ದೇಶಕ ರಂಜಿತ್ ಸಿನ್ಹಾ ಅವರ ವಿರುದ್ಧ ಸಿಬಿಐ ಮಂಗಳವಾರ ಭ್ರಷ್ಟಾಚಾರ ಪ್ರಕರಣ ದಾಖಲಿಸಿದೆ.
ರಂಜಿತ್ ಸಿನ್ಹಾ
ರಂಜಿತ್ ಸಿನ್ಹಾ
ನವದೆಹಲಿ: ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮಾಜಿ ನಿರ್ದೇಶಕ ರಂಜಿತ್ ಸಿನ್ಹಾ ಅವರ ವಿರುದ್ಧ ಸಿಬಿಐ ಮಂಗಳವಾರ ಭ್ರಷ್ಟಾಚಾರ ಪ್ರಕರಣ ದಾಖಲಿಸಿದೆ.
ಕಳೆದ ಜನವರಿ 23ರಂದು, ಕಲ್ಲಿದ್ದಲು ಹಗರಣ ಆರೋಪಿಗಳ ಜೊತೆ ಅಕ್ರಮ ವ್ಯವಹಾರದಲ್ಲಿ ರಂಜಿತ್ ಸಿನ್ಹಾ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ವಿಶೇಷ ತನಿಖಾ ತಂಡಕ್ಕೆ ಆದೇಶಿಸಿತ್ತು. 
ಈ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಇಂದು ರಂಜಿತ್ ಸಿನ್ಹಾ ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಎಫ್ಐಆರ್ ದಾಖಲಿಸಿದ್ದಾರೆ. ಒಂದು ವೇಳೆ ಸಿನ್ಹಾ ವಿರುದ್ಧದ ಆರೋಪ ಸಾಬೀತಾದರೆ ಸಿಬಿಐ ಮಾಜಿ ಮುಖ್ಯಸ್ಥನಿಗೆ ಗರಿಷ್ಠ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ.
ಸಿಬಿಐ ನಿರ್ದೇಶಕರಾಗಿದ್ದ ವೇಳೆ ರಂಜಿತ್ ಸಿನ್ಹಾ ಅವರು ಕಲ್ಲಿದ್ದಲು ಮತ್ತು ತರಂಗಾಂತರ ಹಗರಣಗಳ ಆರೋಪಿಗಳನ್ನು ಭೇಟಿ ಮಾಡಿದ್ದರು ಎಂಬ ಆರೋಪವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com