ನಿನ್ನೆಯಷ್ಟೇ ಕಾಶ್ಮೀರ ಪರಿಸ್ಥಿತಿ ನಿಭಾಯಿಸಲು ಸಮಸ್ಯೆ ಬಗೆಹರಿಸಲು ವಾಜಪೇಯಿಯವರ ನೀತಿಯನ್ನು ಅನುಸರಿಸುವ ಕುರಿತಂತೆ ಮುಫ್ತಿ ನೀಡಿದ್ದ ಹೇಳಿಕೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿಯವರು, ವಾಜುಪೇಯಿಯವರು ಸರಿಯಿದ್ದರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಾದಿ ತಪ್ಪು ಎಂದು ಮುಫ್ತಿಯವರೇ ಒಪ್ಪಿಕೊಂಡಿದ್ದಾರೆ. ಮೋದಿ ತಪ್ಪು ಹಾದಿಯಲ್ಲಿ ನಡೆಯುತ್ತಿದ್ದಾರೆಂದು ಅನಿಸುತ್ತಿದೆ ಎಂದಾದರೆ, ಅವರೊಂದಿಗಿನ ಮೈತ್ರಿಯನ್ನು ಏಕೆ ಮುಂದುವರೆಸುತ್ತಿದ್ದಾರೆ. ಇಂದಿರಾಗಾಂಧಿ, ರಾಜೀವ್ ಗಾಂಧಿಯವರು ಜನರನ್ನು ವಿಶ್ವಾಸದತ್ತ ಕರೆದುಕೊಂಡು ಹೋಗುತ್ತಿದ್ದ ಹಾದಿ ಸರಿಯಾಗಿತ್ತು. ಆದರೆ, ಪ್ರಸ್ತುತ ಅಧಿಕಾರದಲ್ಲಿರುವ ಸರ್ಕಾರ ತಪ್ಪು ಹಾದಿಯಲ್ಲಿ ನಡೆಯುತ್ತಿದೆ ಎಂದು ಹೇಳಿದ್ದಾರೆ.