'ಅಯೋಧ್ಯೆ' ಮಸೀದಿ ಮುಸ್ಲಿಮರಿಗೂ ಇಷ್ಟವಿಲ್ಲ ಹೇಳಿಕೆ: ಇಂದ್ರೇಶ್ ಕುಮಾರ್ ಬೆನ್ನಿಗೆ ನಿಂತ ಸ್ವಾಮಿ

ಬಾಬ್ರಿ ಮಸೀದಿಯ ವಿವಾದಿತ ಸ್ಥಳ ಅವಪವಿತ್ರವಾಗಿರುವುದರಿಂದ, ಅಲ್ಲಿ ಮಸೀದಿ ನಿರ್ಮಾಣ ಸ್ವಯಂ ಮುಸ್ಲಿಮರಿಗೇ ಇಷ್ಟವಿಲ್ಲ ಎಂಬ ಹೇಳಿಕೆ ನೀಡಿ ತೀವ್ರ ಟೀಕೆಗಳಿಗೆ ಗುರಿಯಾಗಿರುವ ಆರ್'ಎಸ್ಎಸ್ ಮುಖಂಡ ಇಂದ್ರೇಶ್ ಕುಮಾರ್ ಅವರ ಬೆನ್ನಿಗೆ ಇದೀಗ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್...
ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ
ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ
ನವದೆಹಲಿ: ಬಾಬ್ರಿ ಮಸೀದಿಯ ವಿವಾದಿತ ಸ್ಥಳ ಅವಪವಿತ್ರವಾಗಿರುವುದರಿಂದ, ಅಲ್ಲಿ ಮಸೀದಿ ನಿರ್ಮಾಣ ಸ್ವಯಂ ಮುಸ್ಲಿಮರಿಗೇ ಇಷ್ಟವಿಲ್ಲ ಎಂಬ ಹೇಳಿಕೆ ನೀಡಿ ತೀವ್ರ ಟೀಕೆಗಳಿಗೆ ಗುರಿಯಾಗಿರುವ ಆರ್'ಎಸ್ಎಸ್ ಮುಖಂಡ ಇಂದ್ರೇಶ್ ಕುಮಾರ್ ಅವರ ಬೆನ್ನಿಗೆ ಇದೀಗ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿಯವರು ನಿಂತಿದ್ದಾರೆ. 
ಇಂದ್ರೇಶ್ ಕುಮಾರ್ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ದೇಶದಲ್ಲಿ ಮೊಘಲರು ನಡೆಸಿದ್ದ ಲೂಟಿ ಮತ್ತು ಹತ್ಯಾಕಾಂಡದಲ್ಲಿ ತಾವೂ ಕೂಡ ಫಲಾನುಭವಿಗಳೆಂದು ಕೆಲವು ಮುಸ್ಲಿಂ ನಾಯಕರು ಭಾವಿಸುತ್ತಿದ್ದು ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ. ಇಂದ್ರೇಶ್ ಅವರು ನೀಡಿದ್ದ ಹೇಳಿಕೆ ಸರಿಯಾಗಿದೆ. ಸತ್ಯಾಂಶವನ್ನು ಹೊರಗೆ ತರುವ ಮೂಲಕ ಇಂದ್ರೇಶ್ ಅವರು ದೊಡ್ಡ ಕೆಲಸವನ್ನು ಮಾಡಿದ್ದಾರೆಂದು ಹೇಳಿದ್ದಾರೆ. 
ಅಯೋಧ್ಯೆ ವಿವಾದ ಸಂಬಂಧ ಇದೀಗ ಮುಸ್ಲಿಂ ನಾಯಕರ ವಿರುದ್ಧವೇ ಹಲವು ವಿರೋಧಗಳು ವ್ಯಕ್ತವಾಗುತ್ತಿವೆ. ಖಾಸಗಿಯಾಗಿ ಹೇಳಿಕೆ ನೀಡುವ ಮುಸ್ಲಿಂ ನಾಯಕರು ಮಸೀದಿ ನಿರ್ಮಾಣ ಪ್ರಶ್ನೆಯೇ ಏಳುವುದಿಲ್ಲ ಎನ್ನುತ್ತಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ಇತ್ತು ಎಂಬುದನ್ನು ಪುರಾತತ್ವ ಸಮೀಕ್ಷೆ ಸಾಬೀತು ಪಡಿಸಿದೆ. 
ಚಂದ್ರಶೇಖರ್ ಅವರು ಅವರು ಪ್ರಧಾನಮಂತ್ರಿಯಾಗಿದ್ದಾಗ ಶಹಾಬುದ್ದೀನ್ ಜೊತೆ ಸಮಾಲೋಚನೆ ನಡೆಸುವಂತೆ ನನಗೆ ಹೇಳಿದ್ದರು. ಶಹಬುದ್ದೀನ್ ಜೊತೆ ಮಾತುಕತೆ ನಡೆಸಿದಾಗ, ಅಯೋಧ್ಯೆಯಲ್ಲಿ ರಾಮ ಮಂದಿರ ಇತ್ತು ಎಂಬುದನ್ನು ಸಾಬೀತು ಪಡಿಸಿದ್ದೇ ಆದರೆ, ಸ್ವತಃ ನಾನೇ ಬಾಬ್ರಿ ಮಸೀದಿಯನ್ನು ಹೊಡೆದು ಹಾಕುತ್ತೇನೆ. ಏಕೆಂದರೆ, ಇದು ಇಸ್ಲಾಂ ವಿರುದ್ಧವಾದದ್ದು ಎಂದು ತಿಳಿಸಿದ್ದರು. 
ಅಯೋಧ್ಯೆ ವಿವಾದ ಸಂಬಂಧ ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ. ಆದರೆ, ವಿವಾದ ಸಂಬಂಧ ದನಿ ಎತ್ತಿದ್ದವರು, ನ್ಯಾಯಾಲಯದ ಮುಂದೆ ನಿಂತು ಮಸೀದಿಯನ್ನು ಧ್ವಂಸ ಮಾಡಲಾಗಿತ್ತು ಎಂದು ಹೇಳುತ್ತಿಲ್ಲ. ಕೇವಲ ಈ ಆಸ್ತಿ ನಮಗೆ ಸೇರಿದ್ದು ಎಂದು ಮಾತ್ರ ಹೇಳುತ್ತಿದ್ದಾರೆಂದು ತಿಳಿಸಿದ್ದಾರೆ. 
ನಿನ್ನೆಯಷ್ಟೇ ಅಯೋಧ್ಯೆ ವಿವಾದ ಸಂಬಂಧ ಹೇಳಿಕೆ ನೀಡಿದ್ದ ಇಂದ್ರೇಶ್ ಅವರು, ಬಾಬ್ರಿ ಮಸೀದಿಯ ವಿವಾದಿತ ಸ್ಥಳ ಅಪವಿತ್ರವಾಗಿರುವುದರಿಂದ ಅಲ್ಲಿ ಮಸೀದಿ ನಿರ್ಮಾಣ ಮಾಡುವುದರ ಬಗ್ಗೆ ಸ್ವಯಂ ಮುಸ್ಲಿಮರಿಗೇ ಇಷ್ಟವಿಲ್ಲ ಎಂದಿದ್ದರು. ಅಲ್ಲದೆ, ಮುಫಲ್ ದೊರೆ ಬಾಬರ್ ಹೆಸರಿನಲ್ಲಿಸುವ ಮಸೀದಿಯಿರುವುದರನ್ನು ಪ್ರಸ್ತಾಪಿಸಿದ್ದ ಅವರು, ಒಬ್ಬ ವ್ಯಕ್ತಿಯ ಹೆಸರಲ್ಲಿರುವ ಮಸೀದಿಯನ್ನು ಮುಸ್ಲಿಮರು ಯಾವತ್ತೂ ಒಪ್ಪುವುದಿಲ್ಲ ಎಂದು ಹೇಳಿದ್ದರು. 
ನಂತರ ಮುಸ್ಲಿಂ ಮಂಡಳಿ ಬಗ್ಗೆ ಟೀಕಿಸಿದ್ದ ಇಂದ್ರೇಶ್, ತ್ರಿವಳಿ ತಲಾಖ್ ವಿಷಯದಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಜತೆ ನಿಲ್ಲುವುದು ದೆವ್ವದ ಜತೆ ನಿಂತಂತೆ ಎಂದು ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com