ವಿಶ್ವದ ದಡೂತಿ ಮಹಿಳೆ ಚೇತರಿಕೊಳ್ಳುತ್ತಿದ್ದಾಳೆಂಬ ವೈದ್ಯರ ವರದಿ ಸುಳ್ಳು: ಎಮನ್ ಅಹ್ಮದ್ ಸಹೋದರಿ

ಪ್ರಪಂಚದಲ್ಲೇ ಅತೀ ತೂಕದ ಮಹಳಇೆ ಎಂದು ಗುರ್ತಿಕೊಂಡಿರುವ ಈಜಿಪ್ಟ್'ನ 500 ಕೆಜಿ ಮಹಿಳೆ ಚೇತರಿಸಿಕೊಳ್ಳುತ್ತಿದ್ದಾರೆಂಬ ವೈದ್ಯರ ವರದಿಗಳನ್ನು ಎಮನ್ ಅಹ್ಮದ್ ಸಹೋದರಿ ಸೈಮ್ಮಾ ಸೆಲಿಂ ಅವರು ತಳ್ಳಿಹಾಕಿದ್ದಾರೆ...
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಮನ್ ಅಹ್ಮದ್
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಮನ್ ಅಹ್ಮದ್
ಮುಂಬೈ: ಪ್ರಪಂಚದಲ್ಲೇ ಅತೀ ತೂಕದ ಮಹಳಇೆ ಎಂದು ಗುರ್ತಿಕೊಂಡಿರುವ ಈಜಿಪ್ಟ್'ನ 500 ಕೆಜಿ ಮಹಿಳೆ ಚೇತರಿಸಿಕೊಳ್ಳುತ್ತಿದ್ದಾರೆಂಬ ವೈದ್ಯರ ವರದಿಗಳನ್ನು ಎಮನ್ ಅಹ್ಮದ್ ಸಹೋದರಿ ಸೈಮ್ಮಾ ಸೆಲಿಂ ಅವರು ತಳ್ಳಿಹಾಕಿದ್ದಾರೆ. 
ಈ ಕುರಿತಂತೆ ಮಾತನಾಡಿರುವ ಅವರು, ಎಮನ್ ಅಹ್ಮದ್'ಗೆ ಚಿಕಿತ್ಸೆ ನೀಡುತ್ತಿರುವ ಡಾ.ಮುಫ್ಫಜಲ್ ಲಕ್ಡಾವಾಲಾ ಅವರು ಎಮನ್ ಆರೋಗ್ಯ ಸುಧಾರಿಸಿದ್ದು, ಚೇತರಿಸಿಕೊಳ್ಳುತ್ತಿದ್ದಾರೆಂದು ಹೇಳುವ ಮೂಲಕ ಚಿಕಿತ್ಸೆ ಕುರಿತ ಮಾಹಿತಿಗಳನ್ನು ತಪ್ಪಾಗಿ ನೀಡುತ್ತಿದ್ದಾರೆ. ನನ್ನ ಸಹೋದರಿ ಈಗಲೂ ಚೇತರಿಸಿಕೊಂಡಿಲ್ಲ ಎಂದು ಆರೋಪಿಸಿದ್ದಾರೆ. 
ಡಾ.ಮುಫ್ಫಜಲ್ ಅವರು ಸುಳ್ಳುಗಾರ. ಎಮನ್ ಚೇತರಿಕೆ ಕುರಿತಂತೆ ಸರಿಯಾದ ಹಾಗೂ ಸತ್ಯವಾದ ಮಾಹಿತಿಗಳನ್ನು ನೀಡುತ್ತಿಲ್ಲ. ಎಮನ್ ಆರೋಗ್ಯದಲ್ಲಿ ಶೇ.1 ರಷ್ಟು ಕೂಡ ಚೇತರಿಕೆಗಳು ಕಂಡು ಬಂದಿಲ್ಲ ಎಂದು ಹೇಳಿದ್ದಾರೆ. 
ಡಾ.ಮುಫ್ಫಜಲ್ ಅವರು ಈ ಆರೋಪವನ್ನು ತಿರಸ್ಕರಿಸಿದ್ದಾರೆ. ಎಮನ್ ಅವರ ಆರೋಗ್ಯ ಚೇತರಿಸಿದ್ದು, ನರವೈಜ್ಞಾನಿಕ ಸ್ಥಿತಿ ಕುರಿತಂತೆ ಸಿಟಿ ಸ್ಕ್ಯಾನ್ ನ್ನು ಮಾಡಲಾಗಿದೆ. ಸೈಮ್ಮಾ ಅವರು ಬೇಕಂತಲೇ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ, ಅವರಿಗೆ ಎಮನ್ ಈಜಿಪ್ಟ್'ಗೆ ಮರಳಿ ಹೋಗುವುದು ಇಷ್ಟವಿಲ್ಲ. ಆರ್ಥಿಕ ಕಾರಣಗಳಿಂದಾಗಿ ಈ ರೀತಿ ಮಾಡುತ್ತಿದ್ದಾರೆ. ಎಮನ್ ಆರೋಗ್ಯ ಉತ್ತಮವಾಗಿದ್ದು, ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆಂದು ಹೇಳಿದ್ದಾರೆ. 
ಆರಂಭಿಕ 15 ದಿನಗಳ ಕಾಲ ಸೈಮ್ಮಾ ಅವರೊಂದಿಗೆ ಎಲ್ಲವೂ ಸರಿಯಾಗಿತ್ತು. ಎಮನ್ ಅವರಿಗೆ ಚಿಕಿತ್ಸೆಯನ್ನು ಆರಂಭಿಸಲಾಗಿತ್ತು. ಇದೀಗ ಎಮನ್ ಆರೋಗ್ಯ ಹಾಗೂ ತೂಕದಲ್ಲಿ ಸುಧಾರಿಕೆ ಕಂಡು ಬಂದಿದ್ದರಿಂದ ಈಜಿಪ್ಟ್ ಗೆ ಮರಳಿ ಕರೆದುಕೊಂಡು ಹೋಗಬಹುದೆಂದು ಸಲಹೆ ನೀಡಿದ್ದೆವು. ಹೀಗಾಗಿ ಇದೀಗ ಸೈಮ್ಮಾ ನಾಟಕ ಆಡಲು ಪ್ರಾರಂಭಿಸಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.
ಎಮನ್ ಆರೋಗ್ಯ ನಿಜಕ್ಕೂ ಆಶ್ಚರ್ಯಕರ ರೀತಿಯಲ್ಲಿ ಸುಧಾರಿಸಿದೆ. 6 ತಿಂಗಳಲ್ಲಿ 200 ಕೆಜಿ ತೂಕವನ್ನು ಕಳೆದುಕೊಳ್ಳುತ್ತಾರೆಂದು ನಾವೂ ಕೂಡ ಊಹಿಸಿರಲಿಲ್ಲ. ತೂಕ ಇಳಿಕೆಯಿಂದಾಗಿ ಆವರ ಆರೋಗ್ಯ ಉತ್ತಮ ರೀತಿಯಲ್ಲಿ ಸುಧಾರಿಸಿದೆ. ಎಮನ್ ದೇಹದಲ್ಲಿ ಕಿಡ್ನಿ, ಹೃದಯ ಶ್ವಾಸಕೋಶ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. 
ಎಮನ್ ಆರೋಗ್ಯ ನಮಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಮಾನವೀಯತೆ ಆಧಾರದ ಮೇಲೆ ನಾವು ಈ ಕೇಸ್ ನ್ನು ತೆಗೆದುಕೊಂಡಿದ್ದೆವು. ಆಕೆ ಮಲಗಿರುವ ರೀತಿ ನಮಗೆ ನೋಡಲು ಸಾಧ್ಯವಾಗುತ್ತಿರಲಿಲ್ಲ. ಈ ಕೇಸ್ ನಲ್ಲಿ ಶೇ.99 ರಷ್ಟು ಸವಾಲುಗಳಿದ್ದವು. ಇದೀಗ ಆಕೆಗೆ ಬದುಕಲು ನಾವು ಅವಕಾಶ ಮಾಡಿಕೊಟ್ಟಿದ್ದೇವೆ. ಫಿಸಿಯೋಥೆರಪಿ ಆದ ಕೂಡಲೇ ಆಕೆ ನಡೆಯಬಹುದು. ಆದರೆ, ಇದಕ್ಕೆ ಎಮನ್ ತನ್ನಿಂದ ಸಾಧ್ಯವಾದಷ್ಟು ಶ್ರಮವನ್ನು ಹಾಕಬೇಕು ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com