ಬಿಸಿಸಿಐಗೆ ಹಿನ್ನಡೆ: ಆಡಳಿತ, ಹಣಕಾಸು ಹಂಚಿಕೆ ವಿಷಯದಲ್ಲಿ ಐಸಿಸಿಗೆ ಗೆಲುವು

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯಲ್ಲಿನ ಬಿಸಿಸಿಐ ಪ್ರಭಾವಕ್ಕೆ ಹೊಡೆತ ಬಿದ್ದಿದ್ದು, ಆಡಳಿತ ಹಾಗೂ ಹಣಕಾಸು ಹಂಚಿಕೆಗೆ ಸಂಬಂಧಿಸಿದ ವ್ಯವಸ್ಥೆಯ ಬದಲಾವಣೆಗೆ ಬಹುಮತ ದೊರೆತಿದೆ.
ಬಿಸಿಸಿಐ
ಬಿಸಿಸಿಐ
ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯಲ್ಲಿನ ಬಿಸಿಸಿಐ ಪ್ರಭಾವಕ್ಕೆ ಹೊಡೆತ ಬಿದ್ದಿದ್ದು, ಆಡಳಿತ ಹಾಗೂ ಹಣಕಾಸು ಹಂಚಿಕೆಗೆ ಸಂಬಂಧಿಸಿದ ವ್ಯವಸ್ಥೆಯ ಬದಲಾವಣೆಗೆ ಬಹುಮತ ದೊರೆತಿದೆ.
ದುಬೈ ನಲ್ಲಿ ಏ.26 ರಂದು ನಡೆದ ಐಸಿಸಿ ಆಡಳಿತ ಮಂಡಳಿ ಸಭೆಯಲ್ಲಿ, ಆಡಳಿತ ಹಾಗೂ ಹಣಕಾಸು ಹಂಚಿಕೆಗೆ ಸಂಬಂಧಿಸಿದ ವ್ಯವಸ್ಥೆಯ ಬದಲಾವಣೆ ವಿಷಯಕ್ಕೆ ಸಂಬಂಧಿಸಿದಂತೆ ಬಹುಮತ ಪಡೆಯಲಾಯಿತು. ಈ ವೇಳೆ ಬಿಸಿಸಿಐ ಗೆ ಭಾರಿ ಹಿನ್ನಡೆಯುಂಟಾಗಿದ್ದು, ಐಸಿಸಿಗೆ ಗೆಲುವು ದೊರೆತಿದೆ. 
ಆಡಳಿತಾತ್ಮಕ, ಸಾಂವಿಧಾನಿಕ  ವ್ಯವಸ್ಥೆಯ ಬದಲಾವಣೆಯ ಪರವಾಗಿ 9 ಮತಗಳು ಚಲಾವಣೆಯಾದರೆ ವಿರುದ್ಧವಾಗಿ 1 ಮತ ಚಲಾವಣೆಯಾಗಿದೆ. ಇನ್ನು ಹಣಕಾಸು ಹಂಚಿಕೆ ವ್ಯವಸ್ಥೆಯ ಬದಲಾವಣೆಯ ಪರವಾಗಿ 8 ಮತಗಳು ಚಲಾವಣೆಯಾಗಿದ್ದರೆ 2 ಮತಗಳು ಚಲಾವಣೆಯಾಗಿದೆ. ಈ ವಿಷಯದಲ್ಲಿ ಬಿಸಿಸಿಐ ಗೆ ಬೆಂಬಲವಾಗಿ ಶ್ರೀಲಂಕಾ ಮಾತ್ರ ಮತಚಲಾಯಿಸಿದೆ. 
ಬಿಸಿಸಿಐ ಮಾತ್ರ ಆಡಳಿತಾತ್ಮಕ, ಸಾಂವಿಧಾನಿಕ  ವ್ಯವಸ್ಥೆ ಹಾಗೂ ಹಣಕಾಸು ಹಂಚಿಕೆ ವ್ಯವಸ್ಥೆ ಎರಡರ ವಿರುದ್ಧವೂ ಮತಚಲಾಯಿಸಿದ್ದು, ಎಲ್ಲಾ ಮೂರು ಬದಲಾವಣೆಗಳೂ ಸಹ ಸಂಪೂರ್ಣವಾಗಿ ಒಪ್ಪಲು ಸಾಧ್ಯವಿಲ್ಲ ಎಂದು ಬಿಸಿಸಿಐ ತಿಳಿಸಿರುವುದಾಗಿ ಬಿಸಿಸಿಐ ನ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com