ಸುಕ್ಮಾ ಹತ್ಯೆ: ಯೋಧರ 'ಸ್ನೇಹಿತ'ರನ್ನೇ ಬಲವಂತವಾಗಿ 'ಶತ್ರು'ಗಳನ್ನಾಗಿಸಿದ ಮಾವೋವಾದಿಗಳು

ಯೋಧರ ಮೇಲೆ ದಾಳಿ ನಡೆದ ಸುಕ್ಮಾ ಜಿಲ್ಲೆಯ ಬುರ್ಕಪಾಲ್ ಗ್ರಾಮದಲ್ಲಿನ ಜನತೆಯನ್ನು ನಕ್ಸಲರು ತಮ್ಮ ಪಾಲಿಗೆ ಗುರಾಣಿಯಾಗಿ ಬಳಸಿಕೊಂಡು, ಆಪ್ತರಾಗಿದ್ದ ಗ್ರಾಮಸ್ಥರನ್ನೇ ಯೋಧರ ಶತ್ರುಗಳನ್ನಾಗಿಸಿದ್ದರ ಬಗ್ಗೆ
ಚಿಕಿತ್ಸೆ ಪಡೆಯುತ್ತಿರುವ ಸಿಆರ್ ಪಿಎಫ್ ಯೋಧರು
ಚಿಕಿತ್ಸೆ ಪಡೆಯುತ್ತಿರುವ ಸಿಆರ್ ಪಿಎಫ್ ಯೋಧರು
ಸುಕ್ಮಾ: ಕಾಶ್ಮೀರದಲ್ಲಿ ಉಗ್ರರು ತಮ್ಮ ರಕ್ಷಣೆಗೆ ಸ್ಥಳೀಯ ಜನತೆಯನ್ನು ಗುರಾಣಿಯಾಗಿ ಬಳಸಿಕೊಳ್ಳುವ ಉದಾಹರಣೆಗಳನ್ನು ಕೇಳಿದ್ದೆವು. ಆದರೆ ಈಗ ನಕ್ಸಲರೂ ಇದೇ ಮಾದರಿಯನ್ನು ಅನುಸರಿಸಿರುವ ಉದಾಹರಣೆ ಸುಕ್ಮಾದ ಭೀಭತ್ಸ ಘಟನೆಯಲ್ಲಿ ಕಾಣಸಿಕ್ಕಿದೆ.
ಸಿಆರ್ ಪಿಎಫ್ ಯೋಧರ ಮೇಲೆ ದಾಳಿ ನಡೆದ ಸುಕ್ಮಾ ಜಿಲ್ಲೆಯ ಬುರ್ಕಪಾಲ್ ಗ್ರಾಮದಲ್ಲಿನ ಜನತೆಯನ್ನು ನಕ್ಸಲರು ಹೇಗೆ ತಮ್ಮ ಪಾಲಿಗೆ ಗುರಾಣಿಯಾಗಿ ಬಳಸಿಕೊಂಡು, ಆಪ್ತರಾಗಿದ್ದ ಗ್ರಾಮಸ್ಥರನ್ನೇ ಯೋಧರ ಶತ್ರುಗಳನ್ನಾಗಿಸಿದ್ದರ ಬಗ್ಗೆ ಎಎನ್ ಐ ವರದಿ ಪ್ರಕಟಿಸಿದೆ. 
ಬುರ್ಕಪಾಲ್ ಗ್ರಾಮದ ಜನತೆ ಹಾಗೂ ಸಿಆರ್ ಪಿಎಫ್ ಯೋಧರ ನಡುವೆ ಮಧುರವಾದ ಸ್ನೇಹ ಬಾಂಧವ್ಯ ಇತ್ತು. ಎಷ್ಟರ ಮಟ್ಟಿಗೆ ಎಂದರೆ ಗ್ರಾಮಸ್ಥರು ಯೋಧರಿಗೆ ಕೇವಲ ಬೆಂಬಲ ನೀಡುವುದಷ್ಟೇ ಅಲ್ಲ. ಬಸ್ತಾರ್ ನಲ್ಲಿ ನಡೆಯುತ್ತಿದ್ದ ನಕ್ಸಲ್ ಚಟುವಟಿಕೆಗಳ ಬಗ್ಗೆ ಮಾಹಿತಿಗಳನ್ನು ನೀಡಿ ಯೋಧರಿಗೆ ನೆರವಾಗುತ್ತಿದ್ದರು. ಸಿಆರ್ ಪಿಎಎಫ್ 74 ಬೆಟಾಲಿಯನ್ ನ ಯೋಧರು ಹಾಗೂ ಗ್ರಾಮಸ್ಥರ ನಡುವಿನ ಸ್ನೇಹ ಸಂಬಂಧ ಯೋಧರ ಮೇಲೆ ದಾಳಿ ನಡೆದರೂ ಗ್ರಾಮಸ್ಥರು ಮೂಕಪ್ರೇಕ್ಷಕರಾಗುವಂತೆ ಮಾಡಿದ್ದಾರೂ ಏನು ಎಂಬ ಬಗ್ಗೆ ಎಎನ್ಐ ವಿಸ್ತೃತ ವರದಿ ಪ್ರಕಟಿಸಿದೆ. ವರದಿಯ ಮೂಲಕ ನಕ್ಸಲರು ಈ ದಾಳಿ ನಡೆಸುವುದಕ್ಕೂ ಮುನ್ನ ಗ್ರಾಮದ ಮುಖ್ಯಸ್ಥರಾಗಿದ್ದ ಮಾಧ್ವಿ ಎಂಬುವವರನ್ನು ಹತ್ಯೆ ಮಾಡಿದ್ದೇ ಇದಕ್ಕೆ ಕಾರಣ ಎಂಬುದು ಸ್ಪಷ್ಟವಾಗಿದೆ. 
ಗ್ರಾಮದ ಮುಖ್ಯಸ್ಥರಾಗಿದ್ದ ಮಾಧ್ವಿ ನಕ್ಸಲರ ಚಟುವಟಿಕೆಗಳ ಬಗ್ಗೆ ಸಿಆರ್ ಪಿಎಎಫ್ ಯೋಧರಿಗೆ ಮಾಹಿತಿ ನೀಡುತ್ತಿದ್ದರು. ಆದರೆ ಗ್ರಾಮದ ಮುಖ್ಯಸ್ಥರನ್ನೇ ಹತ್ಯೆ ಮಾಡುವ ಮೂಲಕ ನಕ್ಸಲರು ಗ್ರಾಮದ ಜನತೆಯಲ್ಲಿ ಭಯದ ವಾತಾವರಣ ಮೂಡಿಸಿ ಯೋಧರ ಆಪ್ತರಾಗಿದ್ದ ಗ್ರಾಮಸ್ಥರನ್ನು ಬಲವಂತವಾಗಿ ಯೋಧರ ಶತ್ರುಗಳನ್ನಾಗಿಸಿದ್ದರು. ಈ ಎಲ್ಲಾ ಘಟನೆಗಳು ನಡೆದ 2 ತಿಂಗಳ ನಂತರ ಸಿಆರ್ ಪಿಎಫ್ ಯೋಧರ ಮೇಲೆ ನಕ್ಸಲರು ದಾಳಿ ನಡೆಸಿದ್ದಾರೆ. 
ನಕ್ಸಲರಿಂದ ಮಾಧ್ವಿ ಅವರ ಕೊಲೆ ನಡೆದ ನಂತರ ಭಯಗೊಂಡ ಗ್ರಾಮಸ್ಥರು ಸಿಆರ್ ಪಿಎಫ್ ಯೋಧರನ್ನು ಸಂಪರ್ಕಿಸುವುದನ್ನೇ ನಿಲ್ಲಿಸಿ, ಅಂತರ ಕಾಯ್ದುಕೊಳ್ಳಲು ಪ್ರಾರಂಭಿಸಿದರು. ಅಷ್ಟೇ ಅಲ್ಲದೇ ನಕ್ಸಲರು ಗ್ರಾಮಸ್ಥರನ್ನು ಮುಂದಿಟ್ಟುಕೊಂಡು ತಮ್ಮ ರಕ್ಷಣೆ ಮಾಡಿಕೊಳ್ಳುವ ಭಾಗವಾಗಿ, ದಾಳಿ ನಡೆದ ದಿನದಂದು ಗ್ರಾಮಸ್ಥರ ಮೂಲಕವೂ ಯೋಧರ ಮೇಲೆ ಗುಂಡು ಹಾರಿಸಿದ್ದಾರೆ. 
ಈ ಬಗ್ಗೆ ಎನ್ಐಎಯೊಂದಿಗೆ ಮಾತನಾಡಿರುವ ಸಿಆರ್ ಪಿಎಫ್ ಅಧಿಕಾರಿ ಡಿಪಿ ಉಪಾಧ್ಯಾಯ್ ಗ್ರಾಮಸ್ಥರನ್ನು ಈ ರೀತಿ ನಡೆದುಕೊಳ್ಳುವಂತೆ ನಕ್ಸಲರು ಒತ್ತಡ ಹೇರಿದ್ದಾರೆ. ನಕ್ಸಲರು ಗ್ರಾಮಸ್ಥರನ್ನು ಮುಂದಿಟ್ಟುಕೊಂಡು ತಮ್ಮ ರಕ್ಷಣೆ ಮಾಡಿದ್ದಾರೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com