ಯೋಗಿ ಆದಿತ್ಯನಾಥ್​ ಹೇರ್​ಸ್ಟೈಲ್​ ಇದ್ರೆ ಮಾತ್ರ ಎಂಟ್ರಿ : ಮೀರತ್ ಖಾಸಗಿ ಶಾಲೆಯ ನಿಯಮ

ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯ ನಾಥ್ ಅವರ ಹೇರ್ ಸ್ಟೈಲ್ ಅನ್ನು ಅನುಕರಿಸಬೇಕು ಎಂದು ಖಾಸಗಿ ಶಾಲೆಯೊಂದು ಆದೇಶ ಹೊರಡಿಸಿದೆ...
ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್
ಮೀರತ್: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯ ನಾಥ್ ಅವರ ಹೇರ್ ಸ್ಟೈಲ್ ಅನ್ನು ಅನುಕರಿಸಬೇಕು ಎಂದು  ಮೀರತ್ ನ ಖಾಸಗಿ ಶಾಲೆಯೊಂದು ಆದೇಶ ಹೊರಡಿಸಿದೆ.
ಅಲ್ಲಿ ವ್ಯಾಸಂಗ ಮಾಡುತ್ತಿರುವ, 1ರಿಂದ12ನೇ ತರಗತಿವರೆಗಿನ ವಿದ್ಯಾರ್ಥಿಗಳಲ್ಲಿ ಸುಮಾರು 2,800 ವಿದ್ಯಾರ್ಥಿಗಳು ಯೋಗಿ ಹೇರ್ ಸ್ಟೈಲ್ ಅನುಕರಿಸುವ ಒತ್ತಡಕ್ಕೆ ಸಿಲುಕಿದ್ದಾರೆಂದು ಮಾಧ್ಯಮವೊಂದು ವರದಿ ಮಾಡಿದೆ.
ಅಷ್ಟೇ ಅಲ್ಲ, ಶಾಲಾ ಆಡಳಿತ ಮಂಡಳಿಯು ತನ್ನ ವಿದ್ಯಾರ್ಥಿಗಳಿಗೆ ಗಡ್ಡ ಬಿಡಕೂಡದೆಂದು ಸೂಚಿಸಿದೆಯಂತೆ. ಶಾಲೆ  ಮದರಾಸಾಗಳಲ್ಲ. ಹಾಗಾಗಿ, ಇಲ್ಲಿ ಯಾರೂ ಗಡ್ಡ ಬಿಡುವಂತಿಲ್ಲ ಎಂದು ಮಂಡಳಿ ತಾಕೀತು ಮಾಡಿದೆಯಂತೆ. 
ವಿದ್ಯಾರ್ಥಿಗಳು ಮನೆಯಿಂದ ತರುವ ಬುತ್ತಿಯಲ್ಲಿ ಮಾಂಸಾಹಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಲ್ಲದೆ, ಲವ್ ಜಿಹಾದ್ ಅನ್ನು ತಡೆಗಟ್ಟಲು ತರಗತಿಗಳಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರನ್ನು ಪ್ರತ್ಯೇಕವಾಗಿ ಕೂರಿಸಲಾಗುತ್ತಿದೆ. 
ರಿಷಬ್ ಅಕಾಡೆಮ್ ಕೋ ಎಜುಕೇಷನಲ್ ಇಂಗ್ಲೀಷ್ ಮೀಡಿಯಮ್ ಶಾಲೆಯ ವಿದ್ಯಾರ್ಥಿಗಳು ಸರಿಯಾದ ರೀತಿಯಲ್ಲಿ ಹೇರ್ ಕಟ್ ಮಾಡಲಿಲ್ಲ ಎಂಬ ಕಾರಣಕ್ಕೆ ಅವರನ್ನು ಶಾಲೆಗೆ ಸೇರಿಸಲು ನಿರಾಕರಿಸಿದಾಗ ವಿಷಯ ಬೆಳಕಿಗೆ ಬಂದಿದೆ. 
ಈ ಸಂಬಂಧ ಪ್ರತಿಕ್ರಿಯಿಸಿರುವ ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ರಣಜೀತ್ ಜೈನ್ ಈ ಶಾಲೆಯನ್ನು ಜೈನ್ ಟ್ರಸ್ ವೊಂದು ನಡೆಸುತ್ತಿದೆ. ಹೀಗಾಗಿ ಶಾಲೆಯಲ್ಲಿ ಮೊಟ್ಟೆ ಸೇರಿದಂತೆ ಯಾವುದೇ ಮಾಂಸಹಾರಗಳನ್ನು ತರುವಂತಿಲ್ಲ, ಹೀಗಾಗಿ ಪ್ರತಿನಿತ್ಯ ವಿದ್ಯಾರ್ಥಿಗಳ ಲಂಚ್ ಬಾಕ್ಸ್ ಪರಿಶೀಲನೆ ಮಾಡಲಾಗುತ್ತಿದೆ. ಜೊತೆಗೆ ಮಿಲಿಟರಿ ಶೈಲಿಯಲ್ಲಿ ಹೇರ್ ಕಟ್ ಮಾಡಿಕೊಂಡು ಬರಬೇಕೆಂದು ಸೂಚಿಸಿರುವುದಾಗಿ ಹೇಳಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com