ಓದನ್ನು ಹೊರೆ ಎಂದು ಭಾವಿಸಲಿಲ್ಲ: ಜೆಇಇ ಟಾಪರ್ ಕಲ್ಪಿತ್ ವೀರ್ ವಾಲ್

ಮುಖ್ಯ ಜಂಟಿ ಪ್ರವೇಶ ಪರೀಕ್ಷೆ(ಜೆಇಇ-2017ನೇ ಸಾಲಿನ ಫಲಿತಾಂಶ ಪ್ರಕಟಗೊಂಡಿದ್ದು, ರಾಜಸ್ತಾನದ ಉದಯ್ ಪುರ್ ನ...
ಕಲ್ಪಿತ್ ವೀರ್ ವಾಲ್
ಕಲ್ಪಿತ್ ವೀರ್ ವಾಲ್
ರಾಜಸ್ತಾನ: ಮುಖ್ಯ ಜಂಟಿ ಪ್ರವೇಶ ಪರೀಕ್ಷೆ(ಜೆಇಇ-2017ನೇ ಸಾಲಿನ ಫಲಿತಾಂಶ ಪ್ರಕಟಗೊಂಡಿದ್ದು, ರಾಜಸ್ತಾನದ ಉದಯ್ ಪುರ್ ನ ಕಲ್ಪಿತ್ ವೀರ್ ವಾಲ್ 360ಕ್ಕೆ 360 ಅಂಕಗಳನ್ನು ಗಳಿಸುವ ಮೂಲಕ ದೇಶಕ್ಕೆ ಮೊದಲ ರ್ಯಾಂಕ್ ಪಡೆದಿದ್ದಾರೆ.
ಓದನ್ನು ನಾನು ಯಾವತ್ತಿಗೂ ಹೊರೆ ಎಂದು ಭಾವಿಸಲೇ ಇಲ್ಲ. ಅದನ್ನು ಸ್ಫೂರ್ತಿಯಾಗಿ ಸ್ವೀಕರಿಸುತ್ತಿದ್ದೆ ಎನ್ನುತ್ತಾರೆ ಕಲ್ಪಿತ್. 
ಕಂಪೌಂಡರ್ ಮಗನಾದ ಕಲ್ಪಿತ್ ತಮ್ಮ ಯಶಸ್ಸನ್ನು ಪೋಷಕರು, ಶಿಕ್ಷಕರು ಮತ್ತು ಹಿರಿಯ ಸೋದರನಿಗೆ ಅರ್ಪಿಸುತ್ತಾರೆ. ಪ್ರತಿದಿನ 5 ಗಂಟೆ ಹೋಂ ವರ್ಕ್ ಮತ್ತು ಅಧ್ಯಯನಕ್ಕೆಂದು ಮೀಸಲಿಡುತ್ತಿದ್ದೆ. ಇದೀಗ ನಾನು ಜೆಇಇ ಅಡ್ವಾನ್ಸ್ ಡ್ ಪರೀಕ್ಷೆಗೆ ಸಜ್ಜಾಗುತ್ತಿದ್ದೇನೆ ಎಂದರು.
ಬೆಂಗಳೂರಿನ ಡೆಲ್ಲಿ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿ ನಿನಾದ್ ಹೇಮಂತ್ ಹುಯಿಲಗೊಲ್ ದೇಶಕ್ಕೆ 54ನೇ ರ್ಯಾಂಕ್ ಗಳಿಸಿದ್ದಾರೆ. ಅವರು 360ಕ್ಕೆ 325 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆದಿದ್ದಾರೆ.
ವಿಶ್ವಜಿತ್ ಪಿ.ಹೆಗ್ಡೆ 323ನೇ ಅಂಕ ಗಳಿಸುವ ಮೂಲಕ 65ನೇ ರ್ಯಾಂಕ್ ಗಳಿಸಿದೆ. ಸುಮಂತ್ ಆರ್ ಹೆಗ್ಡೆ 93ನೇ ರ್ಯಾಂಕ್ ಪಡೆದಿದ್ದಾರೆ. 
ಜೆಇಇ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಇತರರು ಕಾರ್ತಿಕ್ ವರ್ಮ(192ನೇ ರ್ಯಾಂಕ್), ಅನಿರುದ್ಧ್(273), ದೀಪಕ್.ಕೆ(306), ಸುಹಾಸ್ ಸತೇಶ್ ರಾವ್(283), ಧ್ರುವ ಶ್ರೀರಾಮ್(435), ಸಾಹಿಲ್ ಅಗರ್ವಾಲ್(649 ) ಮತ್ತು ಅರಧ್ ಬಿಸರ್ಯಾ(728) ಅಂಕ ಗಳಿಸಿದ್ದಾರೆ. ಜೆಇಇ ಅಡ್ವಾನ್ಸ್ ಡ್ ಮೇ 21ರಂದು ನಡೆಯಲಿದೆ. 
ರಾಜ್ಯಕ್ಕೆ ಟಾಪರ್ ಬಂದ ನಿನಾದ್ ಹೇಮಂತ್ ಹುಯಿಲಗೊಲ್ ಬೆಂಗಳೂರಿನ ಐಐಎಸ್ಸಿಯಲ್ಲಿ ಬೇಸಿಕ್ ಸೈನ್ಸ್ ಕಲಿಯುವ ಆಸೆ ಹೊಂದಿದ್ದಾರೆ. 
ಉತ್ತರ ಕನ್ನಡದ ಸಿರ್ಸಿ ಮೂಲದ ವಿಶ್ವಜಿತ್ ಪಿ.ಹೆಗ್ಡೆ, ಸಾಧಾರಣ ಕುಟುಂಬದಿಂದ ಬಂದವರಾಗಿದ್ದು ಪಾತ್ರೆಗಳ ಅಂಗಡಿಯನ್ನಿಟ್ಟುಕೊಂಡಿದ್ದಾರೆ.
ಐಐಟಿಯಲ್ಲಿ ಕಲಿಯುವ ಕನಸಿನಿಂದ ವಿಶ್ವಜಿತ್ ಬೆಂಗಳೂರಿಗೆ ಬಂದರು. ಅಲ್ಲಿ ದೀಕ್ಷ ಸೆಂಟರ್ ಫಾರ್ ಲರ್ನಿಂಗ್ ಸೇರಿಕೊಂಡರು. ತರಗತಿಯಲ್ಲಿ ಹೊಂದಿಕೊಳ್ಳಲು ಕಷ್ಟವಾಗುತ್ತಿತ್ತು. ಮತ್ತೆ ಊರಿಗೆ ವಾಪಸಾಗುವ ನಿರ್ಧಾರ ಮಾಡಿದ್ದುಂಟು. ಆದರೆ ಪೋಷಕರು ವಿಶ್ವಜಿತ್ ಗೆ ಮಾನಸಿಕ ಬೆಂಬಲ ನೀಡಿದರು. ಕೆಲ ತಿಂಗಳು ಕಳೆದ ನಂತರ ವಿಶ್ವಜಿತ್ ನ ಬೇರೆ ಮಗ್ಗಲುಗಳನ್ನು ನೋಡಿದೆವು ಎನ್ನುತ್ತಾರೆ ಶಿಕ್ಷಕರು. 
ನನ್ನ ತಂದೆಯ ಕನಸಿನಂತೆ ಐಐಟಿ ಮುಂಬೈ ಸೇರಿಕೊಳ್ಳುತ್ತೇನೆ ಎನ್ನುತ್ತಾರೆ ವಿಶ್ವಜಿತ್. 
ಆಫ್ ಲೈನ್ ಪರೀಕ್ಷೆ ಏಪ್ರಿಲ್ 2 ಮತ್ತು ಆನ್ ಲೈನ್ ಪರೀಕ್ಷೆ ಏಪ್ರಿಲ್ 8 ಮತ್ತು 9ರಂದು ನಡೆದಿದ್ದವು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com