'ಕಂಟ್ರಿ ಫುಡ್' ನ 106 ವರ್ಷದ ಅಜ್ಜಿ ಈಗ ಯೂಟ್ಯೂಬ್ ಸೆನ್ಸೆಶನಲ್ ಸ್ಟಾರ್

ದೇಸೀ ಶೈಲಿಯ ಆಹಾರ ಇಷ್ಟ ಪಡುವವರಿಗೆ ಆಂಧ್ರಪ್ರದೇಶದ ಈ ಅಜ್ಜಿ ಹಾರ್ಟ್ ಫೇವರೆಟ್, 106 ವರ್ಷದ ಈ ಹಿರಿಯಜ್ಜಿ ಈಗ ಇಂಟರ್ನೆಟ್ ನಲ್ಲಿ..
106 ವರ್ಷದ ಮಸ್ತಾನಮ್ಮ
106 ವರ್ಷದ ಮಸ್ತಾನಮ್ಮ
Updated on: 
ವಿಜಯವಾಡ:  ದೇಸೀ ಶೈಲಿಯ ಆಹಾರ ಇಷ್ಟ ಪಡುವವರಿಗೆ ಆಂಧ್ರಪ್ರದೇಶದ ಈ ಅಜ್ಜಿ ಹಾರ್ಟ್ ಫೇವರೆಟ್,  106 ವರ್ಷದ ಈ ಹಿರಿಯಜ್ಜಿ ಈಗ ಇಂಟರ್ನೆಟ್ ನಲ್ಲಿ ದೊಡ್ಡ ಸ್ಟಾರ್. 
ಮಸ್ತಾನಮ್ಮ  ಎಂಬ ಈಕೆ ಯುಟ್ಯೂಬ್ ನಲ್ಲಿ ‘ಕಂಟ್ರಿ ಫುಡ್ಸ್’ ಎಂಬ ಚಾನೆಲ್ ಹೊಂದಿದ್ದಾರೆ. ಅದಕ್ಕೆ 2,63,000 ಸಬ್ ಸ್ಕ್ರೈಬರ್ ಗಳಿದ್ದಾರೆ. ಹೈದ್ರಾಬಾದ್ ನ ಕೆ.ಲಕ್ಷ್ಮಣ್ ಮತ್ತು ಶ್ರೀನಾಥ್ ರೆಡ್ಡಿ ಈ ಯುಟ್ಯೂಬ್ ಚಾನೆಲ್ ನ ನಿರ್ವಹಣೆಯ ಹೊಣೆ ಹೊತ್ತಿದ್ದಾರೆ.
ಕಂಟ್ರಿ ಫುಡ್ಸ್ ಚಾನೆಲ್ ನಲ್ಲಿ ಮಸ್ತಾನಮ್ಮ ಪಕ್ಕಾ ದೇಸೀ ಅಡುಗೆಗಳನ್ನು ಮಾಡ್ತಾರೆ. ಎಗ್ ಕರಿ, ಫಿಶ್ ಫ್ರೈ, ಕಲ್ಲಂಗಡಿ ಚಿಕನ್, ಪಂಪ್ ಕಿನ್ ಚಿಕನ್, ಹೀಗೆ ಅಜ್ಜಿ ಮಾಡೋ ನಾನ್ ವೆಜ್ ಡಿಶ್ ಗಳು ಮಾಂಸಪ್ರಿಯರಿಗೆ ಸಿಕ್ಕಾಪಟ್ಟೆ ಇಷ್ಟವಾಗಿವೆ.
ಮಸ್ತಾನಮ್ಮ ಅಡುಗೆಗಾಗಿ ವಿಶೇಷ ಸಾಮಗ್ರಿಗಳನ್ನೇನೂ ಬಳಸುವುದಿಲ್ಲ. ಮನೆಯಲ್ಲಿ ಸುಲಭವಾಗಿ ದೊರೆಯುವ ವಸ್ತುಗಳನ್ನೇ ಹಾಕಿ ಸಿಂಪಲ್ ಆಗಿ ಸಖತ್ ಟೇಸ್ಟಿಯಾಗಿ ಅಡುಗೆ ಮಾಡ್ತಾಳೆ. ಆಕೆಯ ಕುಕಿಂಗ್ ಸ್ಟೈಲೇ ಬೇರೆ. ಸೌದೆ ಒಲೆಯಲ್ಲಿ ಎಲ್ಲಾ ಅಡುಗೆ ಮಾಡುವ ಮಸ್ತಾನಮ್ಮ ಗೆ ಅಡುಗೆ ಮಾಡುವುದು ಬಹಳ ಖುಷಿಯ ವಿಚಾರವಂತೆ
11 ವರ್ಷದವರಿದ್ದಾಗ ಮಸ್ತಾನಮ್ಮಗೆ ಮದುವೆಯಾಗಿತ್ತು. 22 ವರ್ಷದವರಿದ್ದಾಗ ಆಕೆ ಪತಿಯನ್ನು ಕಳೆದುಕೊಂಡಿದ್ದರು. ಐದು ಜನ ಮಕ್ಕಳಲ್ಲಿ ಈಗ ಒಬ್ಬ ಮಾತ್ರ ಬದುಕಿದ್ದಾನೆ. ಆಂಧ್ರದ ಗುಂಟೂರು ಜಿಲ್ಲೆಯ ಗುಡಿವಾಡದ ಮಸ್ತಾನಮ್ಮ ಈಗ ವರ್ಲ್ಡ್ ಫೇಮಸ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com