ಮದುವೆ ಮಂಟಪ
ದೇಶ
ಮದುವೆ ಸಂಭ್ರಮದ ವೇಳೆ ಕುಸಿದ ಮಂಟಪ ಗೋಪುರ: 9 ಸಾವು
ಮದುವೆ ನಡೆಯುತ್ತಿದ್ದ ವೇಳೆ ಮದುವೆಗೆ ಸಿದ್ಧಪಡಿಸಿದ್ದ ಮಂಟಪದ ಗೋಪುರ ಕುಸಿದು ಬಿದ್ದ ಪರಿಣಾಮ 9 ಮಂದಿ ಸಾವನ್ನಪ್ಪಿರುವ ಘಟನೆ ರಾಜಸ್ತಾನದ ಭರತ್ ಪುರ...
ಜೈಪುರ: ಮದುವೆ ನಡೆಯುತ್ತಿದ್ದ ವೇಳೆ ಮದುವೆಗೆ ಸಿದ್ಧಪಡಿಸಿದ್ದ ಮಂಟಪದ ಗೋಪುರ ಕುಸಿದು ಬಿದ್ದ ಪರಿಣಾಮ 9 ಮಂದಿ ಸಾವನ್ನಪ್ಪಿರುವ ಘಟನೆ ರಾಜಸ್ತಾನದ ಭರತ್ ಪುರ ಜಿಲ್ಲೆಯಲ್ಲಿ ನಡೆದಿದೆ.
ನಿನ್ನೆ ತಡರಾತ್ರಿ ಭರತ್ ಪುರ ಜಿಲ್ಲೆಯ ಪಿಢಿ ಗ್ರಾಮದಲ್ಲಿ ಮದುವೆ ಕಾರ್ಯಕ್ರಮವೊಂದು ನಡೆಯುತ್ತಿತ್ತು. ಮಂಟಪದಲ್ಲಿ ಭಾತ್ ವಿದ್ಯುಕ್ತ ಕಾರ್ಯಕ್ರಮ ನಡೆಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಇದರಲ್ಲಿ 9 ಮಂದಿ ಸಾವನ್ನಪ್ಪಿದ್ದು 15 ಮಂದಿ ಗಾಯಗೊಂಡಿದ್ದಾರೆ.
ಹಲವರು ಮದುವೆ ಮಂಟಪದ ಕಳಗೆ ಕುಳಿತಿದ್ದರು. ಈ ವೇಳೆ ಗೋಪುರ ಕುಸಿದು ಬಿದ್ದಿದ್ದರಿಂದ ಅದರಡಿ ಸಿಲುಕಿ 9 ಮಂದಿ ಸಾವನ್ನಪ್ಪಿದ್ದಾರೆ ಎಂದು ಭರತ್ ಪುರ ಗ್ರಾಮಾಂತರ ಸಹಾಯಕ ಎಸ್ ಪಿ ಧರ್ಮೇಂದ್ರ ಸಿಂಗ್ ತಿಳಿಸಿದ್ದಾರೆ.
ಮೃತರ ಪೈಕಿ ಮಹಿಳೆಯರೇ ಹೆಚ್ಚಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಗಾಯಗೊಂಡಿರುವ 15 ಮಂದಿಯನ್ನು ಜೈಪುರದ ಎಸ್ಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ