ಸ್ವಾಮಿ ಪ್ರಸಾದ್ ಮೌರ್ಯ
ದೇಶ
ಕಾಮ ತೃಪ್ತಿಗಾಗಿ ತಲಾಖ್ ಪದ್ಧತಿ ಬಳಕೆ: ಉತ್ತರಪ್ರದೇಶ ಸಚಿವರಿಂದ ವಿವಾದಾತ್ಮಕ ಹೇಳಿಕೆ
ಮುಸ್ಲಿಂರು ತಮ್ಮ ಕಾಮ ತೃಪ್ತಿಗಾಗಿ ಪತ್ನಿಯರನ್ನು ಬದಲಿಸಲು ತ್ರಿವಳಿ ತಲಾಖ್ ಪದ್ಧತಿಯನ್ನು ಬಳಸುತ್ತಿದ್ದಾರೆ ಎಂದು ಉತ್ತರ ಪ್ರದೇಶದ ಸಚಿವ ಸ್ವಾಮಿ ಪ್ರಸಾದ್ ಮೌರ್ಯ...
ಲಖನೌ: ಮುಸ್ಲಿಂರು ತಮ್ಮ ಕಾಮ ತೃಪ್ತಿಗಾಗಿ ಪತ್ನಿಯರನ್ನು ಬದಲಿಸಲು ತ್ರಿವಳಿ ತಲಾಖ್ ಪದ್ಧತಿಯನ್ನು ಬಳಸುತ್ತಿದ್ದಾರೆ ಎಂದು ಉತ್ತರ ಪ್ರದೇಶದ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ದೇಶಾದ್ಯಂತ ತ್ರಿವಳಿ ತಲಾಖ್ ನಿಷೇಧಗೊಳ್ಳಬೇಕು ಎಂದು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಸಚಿವರು ಇಂತಹ ಹೇಳಿಕೆ ನೀಡಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ತಲಾಖ್ ಗೆ ಯಾವುದೇ ರೀತಿಯ ಆಧಾರವಿಲ್ಲ, ಕೇವಲ ತಮ್ಮ ಕಾಮಕ್ಕಾಗಿ ಬಳಸಿಕೊಂಡು ಪತ್ನಿ ಮತ್ತು ಮಕ್ಕಳನ್ನು ಬೀದಿಗೆ ಬಿಡುತ್ತಿದ್ದಾರೆ. ಅಂತಹ ಸಂತ್ರಸ್ತ ಮಹಿಳೆಯರ ಪರ ಬಿಜೆಪಿ ಇದೆ ಎಂದು ಸ್ವಾಮಿ ಹೇಳಿದ್ದಾರೆ.
ಸಚಿವರ ವಿವಾದಾತ್ಮಕ ಹೇಳಿಕೆ ಹಿನ್ನೆಲೆ ಪ್ರತಿಕ್ರಿಯಿಸಿರುವ ಅಖಿಲ ಭಾರತ ಇಸ್ಲಾಂ ವೈಯಕ್ತಿಕ ಕಾನೂನು ಮಂಡಳಿಯ ಹಿರಿಯ ಸದಸ್ಯ ಮೌಲಾನಾ ಖಾಲಿದ್ ರಶೀದ್ ಸಚಿವರು ಬೇಷರತ್ ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ