ಭಿಮ್ ಆ್ಯಪ್: ಯುವ ಜನತೆ ಬಹುಮಾನ ಯೋಜನೆಯ ಅನುಕೂಲ ಪಡೆಯಬೇಕು: ಪ್ರಧಾನಿ ಮೋದಿ

ದೇಶದ ಯುವಜನರು ಡಿಜಿಟಲ್ ಪಾವತಿ ಮಾಡುವ ಮೂಲಕ ಬಹುಮಾನ ಯೋಜನೆಯ ಅನುಕೂಲ ಪಡೆಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದೇಶದ ಯುವಜನರು ಡಿಜಿಟಲ್ ಪಾವತಿ ಮಾಡುವ ಮೂಲಕ ಬಹುಮಾನ ಯೋಜನೆಯ ಅನುಕೂಲ ಪಡೆಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಭಾನುವಾರ ತಮ್ಮ ಮನ್ ಕೀ ಬಾತ್ ನಲ್ಲಿ ನಗದು ರಹಿತ ವಹಿವಾಟನ್ನು ಉತ್ತೇಸುವ ನಿಟ್ಟಿನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ನಗದು ರಹಿತ ವಹಿವಾಟು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಭಿಮ್ ಆ್ಯಪ್  ಅನ್ನು ಜಾರಿಗೊಳಿಸಿದ್ದು, ಅಂತೆಯೇ ನಗದು ರಹಿತ ಪಾವತಿ ಯೋಜನೆಯಲ್ಲಿ ಬಹುಮಾನ ಕೂಡ ಘೋಷಣೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ದೇಶದ ಯುವ ಜನರು ಕೇಂದ್ರ ಸರ್ಕಾರದ ಈ ಯೋಜನೆಯನ್ನು ಬಳಕೆ ಮಾಡುವ ಮೂಲಕ  ಅದರ ಅನುಕೂಲ ಪಡೆಯಬೇಕು. ಕೇಂದ್ರ ಸರ್ಕಾರದ ಬಹುಮಾನ ಯೋಜನೆ ಇದೇ ಅಕ್ಟೋಬರ್ 14ರವರೆಗೂ ಜಾರಿಯಲ್ಲಿದ್ದು, ಯುವಜನರು ಇದರ ಸಂಪೂರ್ಣ ಅನುಕೂಲ ಪಡೆಯಬೇಕು ಎಂದು ಹೇಳಿದರು.

ಕೇಂದ್ರ ಸರ್ಕಾರದ ಭಿಮ್ ಆ್ಯಪ್ ಅನ್ನು ಮತ್ತೊಬ್ಬರಿಗೆ ಪರಿಚಯಿಸಿದರೆ ಪ್ರತೀ ಪರಿಚಯಕ್ಕೆ 10 ರುಗಳಂತೆ ಖಾತೆಗೆ ಹಣ ವರ್ಗಾವಣೆಯಾಗುತ್ತದೆ. ಒಂದು ದಿನದಲ್ಲಿ 20 ಜನರಿಗೆ ಪರಿಚಯಿಸಿದರೆ 200 ರು.ಗಳನ್ನು  ಸಂಪಾದಿಸಬಹುದಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ತಮ್ಮ ಈ ವಾರದ ಮನ್ ಕೀ ಬಾತ್ ನಲ್ಲಿ ಡಿಜಿಟಲ್ ಇಂಡಿಯಾ, ಸ್ವಚ್ಛ ಭಾರತ ಅಭಿಯಾನಗಳಂತೆ ವಿಐಪಿ ಸಂಸ್ಕೃತಿಗೆ ಇತಿಶ್ರೀ ಹಾಡುವ ತಮ್ಮ ಸರ್ಕಾರದ ನೂತನ ನಿರ್ಧಾರಗಳ ಕುರಿತು ಮಾತನಾಡಿದರು. ಅಂತೆಯೇ ದೇಶದ  ಮಹಿಳೆಯೊಬ್ಬರು ಈ ಕುರಿತು ತಮ್ಮ ಸಂತಸ ಹಂಚಿಕೊಂಡ ವಿಚಾರವನ್ನು ಮೋದಿ ಹೇಳಿದರು.

ಸ್ವಚ್ಛ ಭಾರತದ ರಸ್ತೆ ಮೇಲಿರುವ ಪ್ರತಿಯೊಬ್ಬ ಭಾರತೀಯನೂ ಈಗ ವಿಐಪಿ ಎಂದು ಮೋದಿ ಹೇಳಿದ್ದಾರೆ. ಇದೇ ವೇಳೆ ಡಿಜಿಟಲ್ ಇಂಡಿಯಾ ಕುರಿತು ಮಾತನಾಡಿದ ಪ್ರಧಾನಿ ದೇಶದ ಯುವಕರು ಮುಂಬರುವ ಬೇಸಿಗೆ ರಜೆಯಲ್ಲಿ  ದೇಶ ಸುತ್ತಿ ಹೊಸ ಕೌಶಲ್ಯಗಳನ್ನು ಕಲಿಯಬೇಕಿದೆ ಹಾಗೂ ಡಿಜಿಟಲ್ ಹಣವನ್ನು ಬಳಕೆ ಮಾಡುವ ವಿಧಾನ ಕಲಿಯಬೇಕಿದೆ. ಭಿಮ್ ಆ್ಯಪ್‌ಅನ್ನು ಉಪಯೊಗಿಸಿ ಇತರರಿಗೂ ಉಪಯೋಗಿಸಲು ತಿಳಿಸಬೇಕಿದೆ ಎಂದು ಪ್ರಧಾನಿ ಇದೇ  ವೇಳೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com