ತಂಬಾಕು ಸಂಬಂಧಿತ ಕಾಯಿಲೆಗಳ ಚಿಕಿತ್ಸೆಗೆ ಸರ್ಕಾರಕ್ಕೆ 1,04,500 ಕೋಟಿ ರೂ. ವೆಚ್ಚ: ವರದಿ

ತಂಬಾಕು ಸಂಬಂಧಿತ ಕಾಯಿಲೆಗಳಿಂದ 2011 ಒಂದೇ ವರ್ಷದಲ್ಲಿ ಸರ್ಕಾರಕ್ಕೆ 1,04,500 ಕೋಟಿ ರೂಪಾಯಿ ವೆಚ್ಚವಾಗಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ತಂಬಾಕು ಸಂಬಂಧಿತ ಕಾಯಿಲೆಗಳಿಂದ 2011ರ ಒಂದೇ ವರ್ಷದಲ್ಲಿ ಸರ್ಕಾರಕ್ಕೆ 1,04,500 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ವರದಿಯೊಂದು ಹೇಳಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಆ ವರದಿಯನ್ನು ಬಹಿರಂಗಪಡಿಸಬೇಕಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ತಿಳಿದುಬಂದಿದೆ.
ಭಾರತದಲ್ಲಿ  ತಂಬಾಕು ಸಂಬಂಧಿತ ಕಾಯಿಲೆಗಳಿಂದ ಆರ್ಥಿಕವಾಗಿ ಎಷ್ಟು ಹೊರೆ ಬೀಳುತ್ತದೆ ಎಂಬ ವರದಿಯನ್ನು ಪ್ರಕಟಿಸಿಲ್ಲ ಎಂದು ಸಚಿವಾಲಯದಿಂದ ಸಿಕ್ಕಿರುವ ಮಾಹಿತಿ ಹೇಳುತ್ತದೆ.
2011ರಿಂದ ನಂತರದ ವರ್ಷಗಳಲ್ಲಿ  ತಂಬಾಕು ಸಂಬಂಧಿತ ಕಾಯಿಲೆಗಳಿಂದ ವೆಚ್ಚ ಜಾಸ್ತಿಯಾಗಿದೆಯೇ ಎಂಬ ಬಗ್ಗೆ ವಿವರಗಳಿಲ್ಲ. ಅಧ್ಯಯನಕ್ಕೆ ಬಳಸಲಾದ ವಿಧಾನದ ಬಗ್ಗೆ ಕೂಡ ಯಾವುದೇ ವಿವರ ತಿಳಿಸಿಲ್ಲ. ಸಂಪೂರ್ಣ ವರದಿ ಇಲ್ಲದಿರುವುದರಿಂದ ತಂಬಾಕು-ಸಂಬಂಧಿತ ಕಾಯಿಲೆಗೆ ಚಿಕಿತ್ಸೆ ನೀಡಲು ಸರ್ಕಾರವು ಎಷ್ಟು ಖರ್ಚು ಮಾಡಿದೆ ಎಂಬುದರ ಬಗ್ಗೆ ಪ್ರತ್ಯೇಕವಾದ ಮಾಹಿತಿ ಇಲ್ಲ. ಶ್ವಾಸಕೋಶ, ಬಾಯಿ, ನಾಲಗೆ, ಕರುಳು ಮತ್ತು ನರ ಸಂಬಂಧಿತ ಕಾಯಿಲೆಗಳು ತಂಬಾಕಿನ ಅತಿಯಾದ ಸೇವನೆಯಿಂದ ಬರುತ್ತದೆ.
2011ರಲ್ಲಿ ತಂಬಾಕು ಸಂಬಂಧಿತ ಕಾಯಿಲೆಯಿಂದ ಸರ್ಕಾರಕ್ಕೆ 1,04,500 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು  ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ 2014ರಲ್ಲಿ ತಿಳಿಸಿದ್ದರು. ತಂಬಾಕು ಸಂಬಂಧಿತ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಸರ್ಕಾರಕ್ಕೆ ನೇರವಾಗಿ 16,800 ಕೋಟಿ ರೂಪಾಯಿ ವೆಚ್ಚವಾದರೆ ಪರೋಕ್ಷವಾಗಿ 14,700 ಕೋಟಿ ರೂಪಾಯಿ ವೆಚ್ಚವಾಗುತ್ತದೆ. ಜನರ ಅಕಾಲಿಕ ಮರಣದಿಂದ 73,000 ಕೋಟಿ ರೂಪಾಯಿ ವೆಚ್ಚವಾಗಿದ್ದು, ಇದು ದೇಶಕ್ಕೆ ಗಣನೀಯ ಉತ್ಪಾದಕ ನಷ್ಟವಾಗಿದೆ ಎಂದು ತಿಳಿಸಿದರು.
ತಂಬಾಕು ಸೇವನೆ ಸಂಬಂಧಿತ ಕಾಯಿಲೆಗಳಿಂದ ಚಿಕಿತ್ಸೆಗೆ ಉಂಟಾಗುವ ಪ್ರತ್ಯಕ್ಷ ಮತ್ತು ಪರೋಕ್ಷ ವೆಚ್ಚಗಳನ್ನು ಸಚಿವಾಲಯ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com