ತಾಜ್‌ಮಹಲ್ ಸಮೀಪದ ಅನಧಿಕೃತ ರೆಸ್ಟೋರೆಂಟ್‌ಗಳ ತೆರವಿಗೆ ಯುಪಿ ಸರ್ಕಾರಕ್ಕೆ ಎನ್‌ಜಿಟಿ ಆದೇಶ

ಆಗ್ರದ ಜಗತ್ ಪ್ರಸಿದ್ಧ ತಾಜ್ ಮಹಲ್ ಬಳಿ ಅನಧಿಕೃತವಾಗಿ ನಿರ್ಮಿಸಿರುವ ರೆಸ್ಟೋರೆಂಟ್ ಗಳನ್ನು ಕೆಡವಲು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‌ಜಿಟಿ) ಉತ್ತರ ಪ್ರದೇಶ ಸರ್ಕಾರಕ್ಕೆ ಆದೇಶಿಸಿದೆ...
ತಾಜ್‌ಮಹಲ್
ತಾಜ್‌ಮಹಲ್
ನವದೆಹಲಿ: ಆಗ್ರದ ಜಗತ್ ಪ್ರಸಿದ್ಧ ತಾಜ್ ಮಹಲ್ ಬಳಿ ಅನಧಿಕೃತವಾಗಿ ನಿರ್ಮಿಸಿರುವ ರೆಸ್ಟೋರೆಂಟ್ ಗಳನ್ನು ಕೆಡವಲು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‌ಜಿಟಿ) ಉತ್ತರ ಪ್ರದೇಶ ಸರ್ಕಾರಕ್ಕೆ ಆದೇಶಿಸಿದೆ. 
ಗ್ರೀನ್ ಟ್ರಿಬ್ಯೂನಲ್ ತಾಜ್ ಮಹಲ್ ಸುತ್ತಲಿನ ಪ್ರದೇಶದ ಪರಿಸರದ ವಿಷಯದಲ್ಲಿ ರಾಜಿಯಾಗಲು ಸಾಧ್ಯವಿಲ್ಲ ಈ ಹಿನ್ನೆಲೆಯಲ್ಲಿ ಕೂಡಲೇ ರೆಸ್ಟೋರೆಂಟ್ ಗಳನ್ನು ಕೆಡವಿ ತಾಜ್ ಮಹಲ್ ಸುತ್ತಮುತ್ತ ಮರಗಳನ್ನು ನೋಡಲು ಪ್ರೋತ್ಸಾಹಿಸಿ ಎಂದು ಉತ್ತರಪ್ರದೇಶ ಸರ್ಕಾರಕ್ಕೆ ಎನ್‌ಜಿಟಿ ಸೂಚಿಸಿದೆ. 
ಜಗತ್ ಪ್ರಸಿದ್ಧ ತಾಜ್ ಮಹಲ್ ಪರಿಸರ-ಸೂಕ್ಷ್ಮ ತಾಜ್ ಟ್ರಾಪೇಜಿಯಮ್ ವಲಯ(ಟಿಟಿಝಡ್) ಸುತ್ತ ಮತ್ತು ಮರಗಳನ್ನು ನೆಟ್ಟಿರುವ ಬಗ್ಗೆ ಮಾಹಿತಿ ನೀಡುವಂತೆ ಈ ಹಿಂದಿನ ವಿಚಾರಣೆ ವೇಳೆ ಎನ್‌ಜಿಟಿ ಆಗ್ರ ವಿಭಾಗೀಯ ಕಮೀಷನರ್ ಅವರಿಗೆ ಸೂಚಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com