ಪುಲ್ವಾಮ ಎನ್'ಕೌಂಟರ್: ಕಾಶ್ಮೀರ ಬಂದ್'ಗೆ ಪ್ರತ್ಯೇಕತಾವಾದಿಗಳ ಕರೆ

ಲಷ್ಕರ್-ಇ-ತೊಯ್ಬಾ ಸಂಘಟನೆಯ ಇಬ್ಬರು ಉಗ್ರರನ್ನು ಎನ್'ಕೌಂಟರ್'ನಲ್ಲಿ ಹತ್ಯೆ ಮಾಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಪ್ರತ್ಯೇಕತಾವಾದಿಗಳು ಕಾಶ್ಮೀರ ಬಂದ್'ಗೆ ಬುಧವಾರ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಶ್ರೀನಗರ: ಲಷ್ಕರ್-ಇ-ತೊಯ್ಬಾ ಸಂಘಟನೆಯ ಇಬ್ಬರು ಉಗ್ರರನ್ನು ಎನ್'ಕೌಂಟರ್'ನಲ್ಲಿ ಹತ್ಯೆ ಮಾಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಪ್ರತ್ಯೇಕತಾವಾದಿಗಳು ಕಾಶ್ಮೀರ ಬಂದ್'ಗೆ ಬುಧವಾರ ಕರೆ ನೀಡಿದ್ದಾರೆ. 
ನಿನ್ನೆಯಷ್ಟೇ ಮೋಸ್ಟ್ ವಾಂಟೆಡ್ ಉಗ್ರನಾಗಿದ್ದ ಎಲ್ಇಟಿ ಉಗ್ರ ಅಬು ದುಜಾನಾ ಮತ್ತು ಅರಿಫ್ ಎಂಬ ಇಬ್ಬರು ಉಗ್ರನ್ನು ಸೇನಾ ಪಡೆ ಎನ್ ಕೌಂಟರ್ ನಡೆಸಿ ಹತ್ಯೆ ಮಾಡಿತ್ತು. ಎನ್ ಕೌಂಟರ್ ಅಂತ್ಯಗೊಳ್ಳುತ್ತಿದ್ದಂತೆಯೇ ಕೆಲ ಸ್ಥಳೀಯರು ಸೇನಾ ಪಡೆಗಳ ಮೇಲೆ ಕಲ್ಲುತೂರಾಟ ನಡೆಸಿದ್ದರು. ಈ ವೇಳೆ ಕಲ್ಲು ತೂರಾಟಗಾರರನ್ನು ಚದುರಿಸುವ ಸಲುವಾಗಿ ಸೇನಾ ಪಡೆ ನಡೆಸಿದ್ದ ಗುಂಡಿನ ದಾಳಿ ಹಾಗೂ ಅಶ್ರುವಾಯು ದಾಳಿಯಲ್ಲಿ ನಾಗರೀಕರೊರ್ವ ಮೃತಪಟ್ಟಿದ್ದ. 
ಉಗ್ರರ ಹತ್ಯೆಗೆ ಪ್ರತ್ಯೇಕತಾವಾದಿಗಳಾದ ಸಯ್ಯದ ಅಲಿ ಗಿಲಾನಿ, ಮಿರ್ವಾಯಿಜ್ ಉಮರ್ ಫರೂಕ್ ಮತ್ತು ಮುಹಮ್ಮದ್ ಯಾಸಿನ್ ಮಲಿಕ್ ಅವರು ಖಂಡನೆ ವ್ಯಕ್ತಪಡಿಸಿದ್ದು, ಜಂಟಿಯಾಗಿ ಸೇರಿ ಕಾಶ್ಮೀರ ಬಂದ್'ಗೆ ಕರೆ ನೀಡಿದ್ದಾರೆ. ಅಲ್ಲದೆ, ಹತ್ಯೆಯಾದ ಉಗ್ರರಿಗೆ ಹಾಗೂ ನಾಗರೀಕನ ಅಂತಿಮ ಸಂಸ್ಖಾರದಲ್ಲಿ ಭಾಗಿಯಾಗುವಂತೆ ಜನರಿಗೆ ಮನೆ ಮನವಿ ಮಾಡಿದ್ದಾರೆ. 
ಪ್ರತ್ಯೇಕತಾವಾದಿಗಳು ಬಂದ್ ಕರೆ ನೀಡಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವ ಸರ್ಕಾರದ ಈಗಾಗಲೇ ಹಲವೆಡೆ ಸೆಕ್ಷನ್ 144 ಜಾರಿ ಮಾಡಿದೆ. ನೌಹಟ್ಟಾ, ಎಂಆರ್ ಗುಂಜ್, ರೈನಾವಾರಿ, ಖನ್ಯಾರ್ ಶ್ರೀನಗರದ ಸಫಕದಲ್ ಸೇರಿದಂತೆ ಒಟ್ಟು ಐದು ಪೊಲೀಣಾ ಠಾಣಾ ವ್ಯಾಪ್ತಿ ಪ್ರದೇಶಗಳಲ್ಲಿ ಸೆಕ್ಷನ್ 144 ಜಾರಿ ಮಾಡಿದೆ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com