ವಿವಾಹ ನೋಂದಣಿ ಕಡ್ಡಾಯ: ಯೋಗಿ ಸರ್ಕಾರದ ನಿರ್ಧಾರ ಸ್ವಾಗತಿಸಿದ ಮುಸ್ಲಿಂ ಸಂಘಟನೆಗಳು

ಎಲ್ಲಾ ಧರ್ಮದವರ ವಿವಾಹ ನೋಂದಣಿಯನ್ನು ಕಡ್ಡಾಯಗೊಳಿಸಲು ಮುಂದಾಗಿರುವ ಉತ್ತರ ಪ್ರದೇಶ ಸರ್ಕಾರದ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಲಖನೌ: ಎಲ್ಲಾ ಧರ್ಮದವರ ವಿವಾಹ ನೋಂದಣಿಯನ್ನು ಕಡ್ಡಾಯಗೊಳಿಸಲು ಮುಂದಾಗಿರುವ ಉತ್ತರ ಪ್ರದೇಶ ಸರ್ಕಾರದ ನಿರ್ಧಾರವನ್ನು ರಾಜ್ಯದಲ್ಲಿನ ಹಲವು ಮುಸ್ಲಿಂ ಸಂಘಟನೆಗಳು ಸ್ವಾಗತಿಸಿವೆ.
ವಿವಾಹ ನೋಂದಣಿ ಕಡ್ಡಾಯಗೊಳಿಸುವ ಪ್ರಸ್ತಾವನೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸಚಿವ ಸಂಪುಟ ಈಗಾಗಲೇ ಒಪ್ಪಿಗೆ ನೀಡಿದೆ.
ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್ ಬಿ) ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿದೆ. ಆದರೆ ನೋಂದಾಯಿಸದ ಮದುವೆಗಳು ಮದುವೆಗೆ ಸಮನಾಗಿರುವುದಿಲ್ಲ ಎಂಬ ನಿಬಂಧನೆ ಇರಬಾರದು ಎಂದು ಹೇಳಿದೆ.
ರಾಜ್ಯ ಸರ್ಕಾರ ಸೂಕ್ತ ನಿರ್ಧಾರ ಕೈಗೊಂಡಿದೆ. ವಿವಾಹ ನೋಂದಣಿ ಪ್ರಮಾಣ ಪತ್ರ ಮದುವೆಗೆ ಒಂದು ಸಾಕ್ಷಿಯಾಗಲಿದೆ ಮತ್ತು ಇದು ದಂಪತಿಗಳ ಕುಟುಂಬಕ್ಕೆ ಹಾಗೂ ಮಕ್ಕಳಿಗೆ ಸಹಾಯವಾಗಿಲಿದೆ ಎಂದು ಅಖಿಲ ಭಾರತ ಮುಸ್ಲಿಂ ಮಹಿಳಾ ವೈಯಕ್ತಿಕ ಕಾನೂನು ಮಂಡಳಿ ಅಧ್ಯಕ್ಷೆ ಶಾಯಿಸ್ತಾ ಅಂಬೆರ್ ಅವರು ಹೇಳಿದ್ದಾರೆ.
ಇತ್ತೀಚಿಗಷ್ಟೆ ಮದುವೆಯಾದ 30 ದಿನದೊಳಗೆ ದಂಪತಿಗಳು ಕಡ್ಡಾಯವಾಗಿ ತಮ್ಮ ಮದುವೆಯನ್ನು ನೋಂದಣಿ ಮಾಡಿಸಬೇಕು ಎಂದು ಕಾನೂನು ಆಯೋಗ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಅಲ್ಲದೆ ಮದುವೆ ನಂತರ ಸಕಾರಣವಿಲ್ಲದೆ ತಮ್ಮ ಮದೆಯನ್ನು ನೋಂದಣಿ ಮಾಡಿಸದೆ ಇರುವವರಿಗೆ ದಿನದ ಆಧಾರದ ಮೇಲೆ ದಂಡ ವಿಧಿಸುವಂತೆ ಕಾನೂನು ಆಯೋಗ ಸರ್ಕಾರಕ್ಕೆ ಸಲಹೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com