ನೀವು ವರ್ಜಿನ್ ಹೌದೋ ಅಲ್ಲವೋ? ಒಬ್ಬರಿಗಿಂತ ಹೆಚ್ಚು ಪತ್ನಿಯರನ್ನು ಹೊಂದಿದ್ದೀರಾ?

:ಬಿಹಾರದ ಟಾಪ್ ಮೆಡಿಕಲ್ ಸಂಸ್ಥೆಯೊಂದು ಸಿಬ್ಬಂದಿಗೆ ಮುಜುಗರಕ್ಕೊಳಗಾಗುವಂತ ಪ್ರಶ್ನೆ ಕೇಳಿದೆ. ಸಿಬ್ಬಂದಿಗೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಪಾಟ್ನಾ: ಬಿಹಾರದ ಟಾಪ್ ಮೆಡಿಕಲ್ ಸಂಸ್ಥೆಯೊಂದು ಸಿಬ್ಬಂದಿಗೆ ಮುಜುಗರಕ್ಕೊಳಗಾಗುವಂತ ಪ್ರಶ್ನೆ ಕೇಳಿದೆ. ಸಿಬ್ಬಂದಿಗೆ ತಮ್ಮ ವೈವಾಹಿಕ ಜೀವನದ ಸ್ಥಾನಮಾನಗಳ ಬಗೆಗಿನ ಅಸಂಬದ್ಧ ಪ್ರಶ್ನೆ ಕೇಳಿ ಇರಿಸುಮುರುಸು ಉಂಟು ಮಾಡಿದೆ.
ಇಂದಿರಾಗಾಂಧಿ ಇನ್ ಸ್ಟಿಟ್ಯೂಯ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜು 1983 ರಲ್ಲಿ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಸ್ಥಾಪನೆಯಾಗಿದೆ.ಈ ಸಂಸ್ಥೆ ಬುಧವಾರ ತನ್ನ ಸಂಸ್ಥೆಯ ಸಿಬ್ಬಂದಿಗೆ ಪ್ರಶ್ನಾವಳಿ ಏರ್ಪಡಿಸಿತ್ತು. ಸಂಸ್ಥೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಫಾರಂ ಒಂದನ್ನು ನೀಡಿ ವೈವಾಹಿಕ ಸ್ಥಿತಿಯ ಬಗ್ಗೆ ಘೋಷಿಸಲು ಸೂಚಿಸಿತ್ತು. 
ಫಾರಂ ನಲ್ಲಿದ್ದ ಪ್ರಶ್ನೆಗಳನ್ನು ನೋಡಿದ ಸಿಬ್ಬಂದಿ ತೀವ್ರ ಮುಜುಗರಕ್ಕೊಳಗಾಗಿದ್ದಾರೆ. ನಾನು ಅವಿವಾಹಿತ/ವಿಧವೆ/ವರ್ಜಿನ್  ಎಂಬ ಕಾಲಂ ನಲ್ಲಿ ಉತ್ತರ ಬರೆಯುವಂತೆ ಸೂಚಿಸಿದೆ. ನಾನು ವಿವಾಹಿತ ಒಬ್ಬಳೇ ಪತ್ನಿಯೊಂದಿಗಿದ್ದೇನೆ,  ನಾನು ಪತ್ತೊಬ್ಬ ಪತ್ನಿಯನ್ನು ಹೊಂದಿರುವ ವ್ಯಕ್ತಿಯೊಂದಿಗೆ ವಿವಾಹವಾಗಿದ್ದೇನೆ, ನಾನು ವಿವಾಹಿತ ನನಗೆ ಒಬ್ಬರಿಗಿಂತ ಹೆಚ್ಚು ಹೆಂಡತಿಯರಿಲ್ಲ ಎಂಬ ಕಾಲಂಗಳನ್ನು ಭರ್ತಿ ಮಾಡಿಕೊಡುವಂತೆ ಸಿಬ್ಬಂದಿಗೆ ತಿಳಿಸಿದೆ. 
ಇದನ್ನು ಕಡ್ಡಾಯವಾಗಿ ಭರ್ತಿ ಮಾಡಬೇಕು ಎಂದು ಸೂಚಿಸಿರುವುದು ಮಹಿಳಾವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದು ತೀರಾ ವೈಯಕ್ತಿಕ ಮಾಹಿತಿಯಾಗಿದ್ದು ಅದನ್ನು ಕೇಳುವುದರಿಂದ ಅಭ್ಯರ್ಥಿಗಳಿಗೆ ಇರಿಸುಮುರಿಸಾಗುವುದು ಸಹಜ. 
ಕೇಂದ್ರ ಸರ್ಕಾರ ಕಳುಹಿಸಿದ ಅರ್ಜಿ ನಮೂನೆಯಲ್ಲಿ ಇದನ್ನು ನಮೂದಿಸಲಾಗಿದ್ದು  ಅದನ್ನೇ ನಾವು ಪಾಲಿಸುತ್ತಿದ್ದೇವೆ ಎಂದು ಆಸ್ಪತ್ರೆ ಸೂಪರಿಟೆಂಡೆಂಟ್ ಮನೀಶ್ ಮಂದಾಲ್ ಹೇಳಿದ್ದಾರೆ. ಇದರಲ್ಲಿ ವರ್ಜಿನ್ ಹೌದೋ ಅಲ್ಲವೋ ಎಂಬುದನ್ನು ತಿಳಿದುಕೊಳ್ಳುವುದು ನಮ್ಮ ಉದ್ದೇಶವಲ್ಲ,.ಅವಿವಾಹಿತ ಮಹಿಳೆಯರಿಗಾಗಿ ಇದನ್ನು ರೆಫರ್ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. 
ಬಿಹಾರ ಆರೋಗ್ಯ ಸಚಿವ ಮಂಗಲ್ ಪಾಂಡೆ  ಇಂದಿರಾ ಗಾಂಧಿ ಮೆಡಿಕಲ್ ಇನ್ಸ್ ಸ್ಟಿಟ್ಯೂಟ್ ನೀಡಿರುವ ಪ್ರಶ್ನಾವಳಿಯಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com