51ನೇ ದಿನಕ್ಕೆ ಕಾಲಿಟ್ಟ ಡಾರ್ಜಿಲಿಂಗ್ ಹಿಂಸಾಚಾರ: ಪ್ರಧಾನಿ, ರಾಷ್ಟ್ರಪತಿ ಮಧ್ಯೆ ಪ್ರವೇಶಿಸುವಂತೆ ಆಗ್ರಹ

ಪ್ರತ್ಯೇಕ ಗೋರ್ಖಾ ಲ್ಯಾಂಡ್ ನಿರ್ಮಾಣಕ್ಕೆ ಆಗ್ರಹಿಸಿ ಗೋರ್ಖಾ ಮುಕ್ತಿ ಮೋರ್ಚಾ ನಡೆಸುತ್ತಿರುವ ಹಿಂಸಾಚಾರ 51ನೇ ದಿನಕ್ಕೆ ಕಾಲಿಟ್ಟಿದ್ದು, ಪ್ರಕರಣ ಸಂಬಂಧ ಮಧ್ಯೆ ಪ್ರವೇಶ ಮಾಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್...
51ನೇ ದಿನಕ್ಕೆ ಕಾಲಿಟ್ಟ ಡಾರ್ಜಿಲಿಂಗ್ ಹಿಂಸಾಚಾರ
51ನೇ ದಿನಕ್ಕೆ ಕಾಲಿಟ್ಟ ಡಾರ್ಜಿಲಿಂಗ್ ಹಿಂಸಾಚಾರ
ಡಾರ್ಜಿಲಿಂಗ್: ಪ್ರತ್ಯೇಕ ಗೋರ್ಖಾ ಲ್ಯಾಂಡ್ ನಿರ್ಮಾಣಕ್ಕೆ ಆಗ್ರಹಿಸಿ ಗೋರ್ಖಾ ಮುಕ್ತಿ ಮೋರ್ಚಾ ನಡೆಸುತ್ತಿರುವ ಹಿಂಸಾಚಾರ 51ನೇ ದಿನಕ್ಕೆ ಕಾಲಿಟ್ಟಿದ್ದು, ಪ್ರಕರಣ ಸಂಬಂಧ ಮಧ್ಯೆ ಪ್ರವೇಶ ಮಾಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಯುವ ಮೋರ್ಚಾ ಶನಿವಾರ ಆಗ್ರಹಿಸಿವೆ. 
ಹಿಂಸಾಚಾರ ಮುಂದುರೆದ ಹಿನ್ನಲೆಯಲ್ಲಿ ಡಾರ್ಜಿಲಿಂಗ್ ನಲ್ಲಿ ಹೇರಲಾಗಿದ್ದ ಇಂಟರ್ನೆಟ್ ಸೇವೆಗಳ ಮೇಲಿನ ಸ್ಥಗಿತವನ್ನು ಆಗಸ್ಟ್ 14ರವರೆಗೂ ಮುಂದುವರೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಹಿಂಸಾಚಾರ 51ನೇ ದಿನಗಕ್ಕೆ ಕಾಲಿಟ್ಟಿರುವ ಹಿನ್ನಲೆಯಲ್ಲಿ ಪ್ರಕರಣ ಸಂಬಂಧ ಮಧ್ಯೆ ಪ್ರವೇಶ ಮಾಡುವಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದೇವು. ಪ್ರತ್ಯೇಕ ಗೋರ್ಖಾ ಲ್ಯಾಂಡ್ ಗಾಗಿ ಮಾಡುತ್ತಿರುವ ನಮ್ಮ ಆಗ್ರಹವನ್ನು ಗೌರವಿಸಬೇಕೆಂದು ತಿಳಿಸಿದ್ದೇವೆಂದು ಯುವ ಮೋರ್ಚಾ ಅಧ್ಯಕ್ಷ ಪ್ರಕಾಶಅ ಗುರುಂಗ್ ಅವರು ಹೇಳಿದ್ದಾರೆ. 
ಹಿಂಸಾಚಾರ ಮುಂದುವರೆದ ಹಿನ್ನಲೆಯಲ್ಲಿ ಮತ್ತೆ ಇಂಟರ್ನೆಟ್ ಸೇವೆಗಳ ಮೇಲೆ ಹೇರಲಾಗಿದ್ದ ನಿರ್ಬಂಧವನ್ನು ಮತ್ತೆ 10 ದಿನಗಳ ಕಾಲ ಮುಂದುವರೆಸಲು ನಾವು ನಿರ್ಧರಿಸಿದ್ದೇವೆ. ಭದ್ರತೆ ಹೆಚ್ಚಳವಾಗಿರುವ ಹಿನ್ನಲೆಯಲ್ಲಿ ಈವರೆಗೂ ಮತ್ತೆ ಘರ್ಷಣೆ, ಹಿಂಸಾಚಾರಗಳು ನಡೆದಿಲ್ಲ ಎಂದು ಡಾರ್ಜಿಲಿಂಗ್ ಜಿಲ್ಲಾಧಿಖಾರಿ ಜೊಯೊಶಿ ದಾಸ್ ಗುಪ್ತಾ ಅವರು ತಿಳಿಸಿದ್ದಾರೆ 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com